Wednesday, November 27, 2013

citteChitte

ಚಿಟ್ಟೆ  ಸಂಗದಲ್ಲೊಂದು ಪಯಣ












Saturday, November 23, 2013

WhiteTthroated Thrush-Zoothera citrinaCyanotus

WhiteTthroated Thrush-Zoothera citrinaCyanotus
ಪ ಟ್ಟಿ ನೆಲಗುಟುರ  -ಮೈನಾ  ಹಕ್ಕಿ ಗಾತ್ರ , ಮೋಟು ಬಾಲದ ಹಕ್ಕಿ  ೨೫ ಸೆಂ ಮೀ ಉದ್ದ ಇದೆ. ರೆಕ್ಕೆ, ಬೆನ್ನು, ಬಾಲ ತೆಳು ನೀಲಿ ಬಣ್ಣ .ತಲೆ , ಹೊಟ್ಟೆ.  ಕಿತ್ತಳೆ  ಬಣ್ಣ . ಕೆನ್ನೆಯಮೇಲೆ ಎರಡು ಕಪ್ಪು ಗೆರೆ ಇರುವುದು ಗಂಡು. ಹೆಣ್ಣು ಹಕ್ಕಿಗೆ ಕಪ್ಪು ಗೆರೆ ಮತ್ತು ಕು ಕಿತ್ತಿಗೆಯಲ್ಲಿ ಬಿಳಿಬಣ್ಣ ಇಲ್ಲ . ಹೆಣ್ಣು ಹಕ್ಕಿಗೆ ನೀಲಿ  ಗರಿ ಇದ್ದರೆ   ಹೆಣ್ಣಿಗೆ  ಹಸಿರು ಬಣ್ಣ ಇರುವುದು. ಕುತ್ತಿಗೆ ಹೊಟ್ಟೆ ಕಿತ್ತಳೆ ಬಣ್ಣ ಇರುವುದು. ಇದು ಕಾಳು ಮೆಣಸು ತಿನ್ನುವುದರಿಂದ ಮತ್ತು ಅದರ್ ಮೈ ಭಾಗ ಕಾಳು ಮೆಣಸಿನ ಬಣ್ಣ ಇದೆ. ಇದಕ್ಕೆ ಮೆಣ್ಸಿನ್ ಹಕ್ಕಿ ಎಂಬ ಅನ್ವರ್ಥಕ ಹೆಸರಿದೆ .ನೆಲದ ಮೇಲೆ ಓಡಾಡುತ್ತಾ ತೆರಗೆಲೆಗಳನ್ನು ಚಿಮ್ಮಿಸುತ್ತ ಅದ್ರ ಅಡಿಯಲ್ಲಿರುವ್ ಕೀಟ ತಿನ್ನುವುದು ಇದರ ಹವ್ಯಾಸ ಗ಼ಾಬರಿಯಾದಾಗ ಸಿಳ್ಳೆ ಹೊಡೆಯುತ್ತ ವೇಗವಾಗಿ ಹಾರಿ ಹೋಗುವುದು. ಹಿಮಾಲಯ ಭಾಗದಲ್ಲಿ ಕಾಣುವ ಹಕ್ಕಿಗೆ ಕುತ್ತಿಗೆಯಲ್ಲಿ ಬಿಳಿ ಬಣ್ಣ ಇಲ್ಲ.
ಹಕ್ಕಿಯನ್ನು ಗುರುತಿಸಿ ಇಂದು ಹರೀಶ  ಕಳಿಸಿದ ಹಕ್ಕಿ ಗಂಡು ಗ್ಲಾಸಿನ ಕಿಟಿಕಿಗೆ ಡಿಕ್ಕಿ ಹೊಡೆದು ಬಿದ್ದ ಈ ಹಕ್ಕಿಗೆ ಸಕ್ಕರೆ ನೀರು ಕುಡಿಸಲು ತಿಳಿಸಿದ್ದು ಚೇತರಿಸಿಕೊಂಡು ಹಾರಿಹೋಗಿದೆ. ಅಡಿಕೆ ತೊಟಗಳಲ್ಲಿ ಗಂಡು ಹೆಣ್ಣು ಸದಾ ಕಾಣುವುದು. ಮೇ ದಿಂದ ಜೂನ್ಫ಼್ಗೂಡು ಕಟ್ಟುವ  ಸಮಯ ಉಳಿದ ಸಮಯದಲ್ಲಿ ಮೌನ ವಹಿಸುವ್ ಇದು ಸಿಲ್ಲಿನ  ರಾಗಾಲಾಪ ಮಾಡುವುದು.

White W

ಇದು ಯಾವ ಹಕ್ಕಿ ಗುರುತಿಸಿ ? ಹರೀಷ ನ ಪ್ರಶ್ನೆ
ಇದಕ್ಕೆ ಭಾಗದಲ್ಲಿ   ಪಟ್ಟಿ  ನೆಲಗುಟಟುರ  - ಇಂಗ್ಲೀಷ್ ನಲ್ಲಿ

Friday, October 11, 2013

Birds of Muroor: long tailed scarletminivet-Pericrocotus ethologus

Birds of Muroor: long tailed scarletminivet-Pericrocotus ethologus: ಉದ್ದು ಬಾಲದ ಗುಲಗುಂಜಿ ಹಕ್ಕಿ-ಸ್ಕಾರಲೆಟ್ ಮಿನವೇಟ- ಉದ್ದ ಬಾಲದ ಗುಲಗುಂಜಿ ಹಕ್ಕಿ '

Thursday, October 10, 2013

Baya weaver Bird-Ploceus philippinus

Baya weaver Bird-Ploceus philippinus

 ಗೀಜುಗ -ಬಯಾ ವೀವರ್ ಬರ್ಡ-ಮನೆಗುಬ್ಬಿಯಂತೆ ಕಾಣುವುದು ಸುಮಾರು 15 ಸೆಂಮೀ ದೊದ್ದದಾಗಿದೆ ಗುಬ್ಬಚ್ಚಿಯಂತೆ ಬಲವಾದ ಚುಂಚು ರೆಕ್ಕೆ ಕಂದುಬಣ್ಣ ಕತ್ತರಿಸಿದಂತೆ ಬಾಲ , ರೆಕ್ಕೆಯಮೇಲೆ ಕಂದುಬಣ್ಣದ ರೇಖೆ ಇದೆ. ಆದರೆ ಮರಿಮಾಡುವ ಸಮಯದಲ್ಲಿ ಹಳದಿಬಣ್ಣ ಪ್ರಧಾನವಾಗಿ ಎದ್ದು ಕಾಣುವುದು ತಲೆ ಹೊಟ್ಟೆ, ಎದೆ, ಹಳದಿಬಣ್ಣ, ರೆಕ್ಕೆಯಮೇಲೆ ಕರಿ ಮಚ್ಚೆ ಇದೆ. ದೊಡ್ಡ ದೊಡ್ಡ ಗುಂಪಿನಲ್ಲಿ  ಗದ್ದೆ , ಕೃಷಿ ಭೂಮಿಯಲ್ಲಿ ಕಾಣುವುದು. ಪೈರು ಕೊಯ್ದ ಸಮಯದಲ್ಲಿ ಗುಬ್ಬಚ್ಚಿಯಂತೆ ಕಾಳುಗಳನ್ನು ಆಯ್ದು ತಿನ್ನುವುದು. ಚಿರಿ, ಚರೀ, ಚಿರೀ ಎಂದು ಕೂಗುತ್ತಿರುವುದು. ಮೇ -ಸಪ್ಟಂಬರ್-ನವೆಂಬರ್ ಅವಧಿಯಲ್ಲಿ ಗದ್ದೆಗಳ ಸಮೀಪ  ಇರುವ  ಎತ್ತರದ ತಾಳೆ-ತೆಂಗಿನ ಮರಗಳ ಗರಿಗಳಿಗೆ ಕಾಲು ಚೀಲದಂತಹ ಗೂಡನ್ನ ತಲೆ ಕೆಳಗಾಗಿ ಕಟ್ಟುವುದು.ಮರದ ಗರಿಗಳ ತುಂಬಾ ಒಟ್ಟಾಗಿ ಸುಮಾರು 90 ಫೂಟು ಎತ್ರದಲ್ಲಿ ಅನೇಕ ಗೂಡುಗಳನ್ನು ನಿರ್ಮಿಸುವುದು. ಕಬ್ಬಿನ  ಎಲೆ ನಾರು ಹಾಗೂ ಭತ್ತದ ಹುಲ್ಲಿನ ನಾರನ್ನು ಉಪಯೋಗಿಸಿ ಸುಂದರ ಹಾಗೂ ನಾಜೂಕಾದ ಗೂಡನ್ನು ನೈದು ಕಟ್ಟುವುದು. ಗಂಡುಹಕ್ಕಿ ನಾಲ್ಕು ಐದಕ್ಕಿಂತ ಹೆಚ್ಚು ಗೂಡನ್ನು ನಿರ್ಮಿಸಿ, ಬರುವ ಹೆಣ್ಣು ಆಕರ್ಷಿಸಲು ರೆಕ್ಕೆ ಬಿಚ್ಚಿ ಹೆಣ್ಣನ್ನು ಆಹ್ವಾನಿಸುವುದು.ಕೆಲವೊಮ್ಮೆ ಎರಡು ಅಂತಸ್ಸಿನ ಗೂಡನ್ನು ಕಟ್ಟುವುದು. ಗೂಡಿನ ದ್ವಾರದಿಂದ ಕೆಳಗೆಟ್ಯೂಬಿನಂತೆ 2 ಫೂಟು ಉದ್ದ ಸಹ ಇರುವುದು. ಗೂಡಿನಉದ್ದ ಮೂರುವರೆ ಫೂಟ್ ಸಹಇರುವುದು  ಕೂಗು, ಇರುವ ಜಾಗ ಹಾಗೂ ಬಣ್ಣ ವ್ಯತ್ಯಾಸದಿಂದ 2 ಬೇರೆ  ಜಾತಿಯ ನೇಕಾರ ಹಕ್ಕಿಇದೆ. ಕಪ್ಪು ಎದೆ ಗೀಜುಗ, ಪಟ್ಟೆ ಗೀಜುಗ.
 ಪಟ್ಟೆ ಗೀಜುಗ. -ಹಳದಿ ಎದೆಯಮೇಲೆ ಕಪ್ಪು ಗೆರೆಗಳಿರುವ  ಗೀಜುಗ ಜೌಗು ಪ್ರದೇಶದ  ಚಾಪೆಹುಲ್ಲ್ಲಿನ  ನಾರಿನಿಂದ ನೈದು ಗೂಡನ್ನು ಮಾಡುವುದು. ಗಂಡು ಗೂಡನ್ನು ನಿರ್ಮಿಸಿ  ಟ್ರಿ.ಲ್ಲಿಲ್ಲಿ ಎಂದು ಗಿಲಗಿಚ್ಚಿ ಸಪ್ಪಳದಂತೆ ಕೂಗಿ ರೆಕ್ಕೆ ಬಿಚ್ಚಿ ನರ್ತಿಸಿ ಹೆಣ್ಣನ್ನು ಆಹ್ವಾನಿಸುವುದು.
ಕರಿ ಎದೆಯ ಗೀಜುಗಕ್ಕೆ ಕಪ್ಪು ತಿಳಿ ಹಳದಿ  ಬಣ್ಣ. ತಲೆಯ ಮೇಲೆ ಕಪ್ಪು ಟೋಪಿಯಂತೆ ಕಪ್ಪು ಬಣ್ಣ  ತಲೆಯಲ್ಲಿರುವುದು  ಎದೆಯಮೇಲೆ ಕಪ್ಪು ಕಂದುಬಣ್ಣದ  ಅಗಲವಾದ ಪಟ್ಟೆ ಇರುವುದು.. ಹುಬ್ಬಿನಿಂದ ಗಲ್ಲದ ವರೆಗೆ ವ್ರತ್ತಾಕಾರದ  ಅಗಲವಾದ ಬಿಳಿಬಣ್ಣದ ಪಟ್ಟಿ ಇದೆ. ಮರಿಮಾಡದ ಕಾಲದಲ್ಲಿ ಗುಬ್ಬಚ್ಚಿಯಂತೆ ಕಾಣುವುದು.ನಾಲಾ ಪ್ರದೇಶದಲ್ಲಿ ಇರುವುದು. ಜೊಂಡು ಹುಲ್ಲಿನ ನಾರಿನಿಂದ ಗೂಡನ್ನ ನೈಯುವುದು. ಗೂಡನ್ನು ತಯಾರಿಸಿ ಅದರಮೇಲೆ ಕುಳಿತು ಬಾಲವನ್ನು ಬೀಸಣಿಕೆಯಂತೆ ಬೀಸಿ ಹೆಣ್ಣು ಕರೆಯುವುದು.ಚಿಲೀ ಚಿಲೀ ಚಿಲೀ ಎಂದು ಗಜ್ಜೆ ಸಪ್ಪಳದಂತೆ ಸಿಳ್ಳಿನ ರಾಗಾಲಾಪ ಮಾಡುವುದು. ಕೆಲವೊಮ್ಮ ಗದ್ದೆಯ ಮೇಲೆ ಹಾದು ಹೋಗುವ ಟೆಲಿಫೋನ್ ವಾಯರುಗಳಿಗೆ , ವಿದ್ಯತ್ ತಂತಿಗಳಿಗೆ ಸಾಲಾಗಿ ಗೂಡನ್ನು ಕಟ್ಟುವುದು. ಎತ್ತರವಾದ ಹುಲ್ಲು ಬೆಳೆಯುವ ಹುಲ್ಲುಗಾವಲಿನಲ್ಲು ಇರುವುದು.

ತೆಂಗಿನ ಮರದ ತುಂಬಾ ಗೂಡನ್ನುಕಟ್ವು ಇರುವುದು ಗೀಜುಗಗದ್ದೆಗಳಿಗೆ ಕ್ರಮಿನಾಶಕ ಸಿಂಪಡಿಸುವುದರಿಂದ ಇದರ ಸಂಖೆ ಕಡಿಮೆಯಾಗುತ್ತಿದೆ. ಮನೆ ಗುಬ್ಬಿಯಂತೆ ಅಳಿವಿನಂಚಿನಲ್ಲಿದೆ . ಅದನ್ನು ಉಳಿಸುವ ಹೊಣೆ ನಮ್ಮ ನಿಮ್ಮೆಲ್ಲರ ಮೇಲಿದೆ.

ನೇಕಾರ ಹಕ್ಕಿಯ ಸುಂದವಾದ ಗೂಡು
ಗೂಡು


ಹಕ್ಕಿ ಮತ್ತು ಗೂಡು ಗಂಡು ಗೂಡನ್ನು ನೈಯುತ್ತಿರುವುದು