Friday, 6 December 2013

LiLittle Cormorant-Phalacrocorax niger ttle Cormorant

Little Cormorant-Phalacrocorax niger - ಚಿಕ್ಕ ನೀರುಕಾಗೆ ೬೧ ಸೆಂಮೀ . ದೊಡ್ಡದು.  ಹಾವಿನಂತೆ ಬಳುಕುವ  ಕುತ್ತಿಗೆ. ಕಪ್ಪು ಹೊಳೆಯುವ ಮೈಬಣ್ಣ .ಕುತ್ತಿಗೆಯಲ್ಲಿ ಬಿಳಿ ಮಚ್ಚೆ ಇದೆ. ತುದಿಯಲ್ಲಿ ಹುಕ್ಕಿನ್ಂತೆ ಬಾಗಿರುವ ಮೇಲ್ಚುಂಚು ಇದೆ. ನೀರಿನಲ್ಲಿ ಜಿಗಿದು ಮುಳುಗಿ ಮೀನು ಜಲಚರಗಳನ್ನು  ಬೇಟೆಯಾಡುವುದರಲ್ಲಿ ತುಂಬಾ ಚುರುಕು. ಏಕಾಂಗಿಯಾಗಿ ಅಥವಾ  ಗುಂಪಾಗಿಯೂ  ಬೇಟೆಯಾಡುವುದು. ಬಾತುಗಳ್ಂತೆ ಜಾಲಪಾದ ಇದೆ. ಇದು ನೀರಿನ  ಹಕ್ಕಿ.ಆದರೂ ಇದರ ಕೆಕ್ಕೆಗಳಿಗೆ ಜಲ ನಿರೋಧಕ ಶಕ್ತಿ ಇಲ್ಲ. ಬಂಡೆಗಳ ಮೇಲೆ ಕಾಡ್ಳಾ ಗಿಡಗಳು , ನೀರಿನಲ್ಲಿ ನೆಟ್ಟ ಕಂಬಗಳ ಮೇಲೆ ಕುಳಿತು ತನ್ನ ರೆಕ್ಕೆ ಬಿಸಿಲಿನಲ್ಲಿ ಒಣಗಿಸಿಕೊಳ್ಳುವುದು. ಉದ್ದವಾದ  ಬಾಲ ಇದೆ.  ಗಂಡು ಹೆಣ್ಣು ಒಂದೇರೀತಿ ಇದೆ. ಕೊಳ, ಗಜನಿ ಪ್ರದೇಶ , ನದಿ  ಮುಖಜ ಹಿನ್ನೀರು , ಹಳ್ಳಗಳಲ್ಲಿ ,  ನೀರಿನ  ಹೊಂಡಗಳು. ಇದರ ಇರುವಿನ ಜಾಗ. ಭಾರತದ ತುಂಬೆಲ್ಲ ಇದೆ. ಮೈನಾವರ , ಬಾಂಗ್ಲದೇಶ ,ಪಾಕಿಸ್ತಾನ , ಶ್ರೀಲಂಕ ದಲ್ಲೂ ಹರಡಿದೆ. ದಕ್ಷಿಣಭಾರತದಲ್ಲಿ ನವೆಂಬರ್ ದಿಂದ ಫೆಬ್ರವರಿ ಸಮಯದಲ್ಲಿ ಮೊಟ್ಟೆ ಇಡುವುದು. ಕಡಿದಾದ ಬ್ಂಡ್ಡೆ


 ಅಥವಾ ಮರಗಳ ಮೇಲೆ ಕೊಕ್ಕರೆಗಳ ಜೊತೆ ಕಡ್ಡಿ ಎಲೆಗಳಿಂದ ಗೂಡು ಕಟ್ಟುವುದು. ಇದು ಸಾಮಾನ್ಯವಾಗಿ ಕಾಗೆ ಗೂಡಿನಂತೆ  ಕಾಣುವುದು.   ೪-೫ ನೀಲಿಛಾಯೆಯ ತಿಳಿಹಸಿರಿನ ಮೊಟ್ಟೆ ಇಡುವುದು. 

Sunday, 1 December 2013

Malabar Whistling Thrush-Myiophonus horsfieldii

Malabar Whistling Thrush-Myiophonus horsfieldii-ಮಲಬಾರ ವಿಸ್ಲಿಂಗ್ ತ್ರುಶ್ - ಗೋಪಿ ಹಕ್ಕಿ, ಸರಳ ಸಿಳ್ಳಾರ , ಎಂದು ಈ ಹಕ್ಕಿಯನ್ನು ಕರೆಯುತ್ತಾರೆ. ಸುಮಾರು ೨೫ ಸೆಂ. ಮೀ . ಉದ್ದದ ಹಕ್ಕಿ. ಪಾರಿವಾಳಕ್ಕಿಂತ ಸ್ವಲ್ಪ ಚಿಕ್ಕದು. ಮೈಬಣ್ಣ ಗಾಡ ನೀಲಿಕಪ್ಪು. ಬಿಸಿಲಿನಲ್ಲಿ ಕಪ್ಪು ಬಣ್ಣ ಗಾಡ ನೀಲಿಯಾಗಿ ಹೊಳೆಯುವುದು. ಹಣೆ ರೆಕ್ಕೆಯ್ ಬುಡ ಅಂದ್ರೆ ಬುಜ ದಲ್ಲಿ ಕೊಬಲ್ಟ ನೀಲಿ ಬಣ್ಣದ ಮಕ್ಕೆ  ಇದೆ. ಕಾಲು ಚುಂಚು ಕಪ್ಪು ಬಣ್ಣ . ಗಂಡು , ಹೆಣ್ಣು ಒಂದೇ ರೀತಿ ಇದೆ. ಪರ್ವತದ ಕಣಿವೆಗಳಲ್ಲಿ ಹಳ್ಳಗಳ ಪಕ್ಕ ಇರುವ ಅಡಿಕೆ ತೆಂಗು ತೋಟಗಳಲ್ಲಿ ಒಂಟಿ ಅತವಾ ಜೋಡಿಯಾಗಿ ಕಾಣುವುದು. ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಬೆಳಗಿನ ಜಾವ ಸಿಳ್ಳಿನ ರಾಗಾಲಾಪ ಮಾಡುವುದು. ಆದ್ದರಿಂದ ಹಳ್ಳಿಗರು ಇದಕ್ಕೆ  ಗೋಪಿ ಹಕ್ಕಿ ಎಂದು ಕ್ರೆಯುತ್ತಾರೆ. ಕಲ್ಲು ಬಂಡೆಗಳಿರುವ ನೀರು ಹರಿಯುವ ಕೊರಕಲಿನ (ಸರಳು)ಗಳಲ್ಲಿ ಇರುವುದರಿಂದ ಇದನ್ನು ಸರಳ ಸಿಳ್ಳಾರ ಎಂದೂ ಕರೆಯುವುದುಂಟು . ಇದರ ಇನ್ನೋಂದು ಉಪಜಾತಿ ಆಸಾಮದಲ್ಲಿದೆ.  ಆದರೆ ಇದಕ್ಕೆ ಮಶ್ಚಿಮ ಘಟ್ಟದ ಹಕ್ಕಿಗಿರುವ್ಂತೆ ಮುಂದಲೆ ಮತ್ತು ರೆಕ್ಕೆಯ ಬುಡದಲ್ಲಿ ನೀಲಿ ಮಚ್ಚೆ ಇಲ್ಫ್ಲಇದು ಭಾರತದ ಈಷಾನ್ಯ ರಾಜ್ಯ  ಮತ್ತು ಪಶ್ಚಿಮ ಘಟ್ಟದಲ್ಲಿ ಮಾತ್ರ ಇದೆ. ಮದ್ಯಪ್ರದೇಶ , ಒರಿಸಾದ ಸಮಬಲ ಪುರ , ತಮಿಳುನಾಡಿನ ಶೇವರಿ ಪರ್ವತದ ಪ್ರದೇಶ , ಗುಜರಾತದ ಹೇಮತ್ ನಗರಗಳಲ್ಲಿ ಇದೆ. ಇದು ಕಾಡಿನಲ್ಲೇಹೆಚ್ಚಾಗಿ ಇರುವುದು. ಆದ್ರೂ ನೀರಿನ್ ಝರಿ ಹರಿಯುವ ಅಡಿಕೆ, ತೆಂಗು ತೋ ಟಗಳಲ್ಲಿ ಸಿಳ್ಫ಼್ಳಿನ ರಾಗಾಲಪ ಮಾಡುತ್ತ ತನ್ನ್ ಸಂಗಾತಿಯನ್ನು ಕರೆಯುವುದು. ಇದು ಮನುಸಷ್ಯ ಸಿಳ್ಳ್  ನಂತೆ    ಇರುವುದು.  ಕೀಟ, ಜಲಚರಗಳು, ಏಡಿ, ಶಂ ಖದ  ಹುಳು, ಬಸವನ ಹುಳುಗಳನ್ನು ಹಿಡಿದು ಅದನ್ನು ಬಂಡೆಗೆ ಬಡಿದು ಚಿಪ್ಪನ್ನು ಒಡೆದು ತಿನ್ನುವುದು. ಪರ್ವತಗಳ ನೀರು ಝಾರಿಯ ಕಲ್ಲು ಪದರುಗಳಲ್ಲಿ , ಬಿರುಕುಗಳಲ್ಲಿ ಗೂಡು ಕಟ್ಟುವುದು. ಹುಲ್ಲು, ನಾರು, ಬೇರು ಹತ್ತಿ, ಹಕ್ಕಿಗಳ ಪುಕ್ಕ ಉಪಯೋಗಿಸಿ ಗೂಡನ್ನು ಕಟ್ಟಿ ಅದರ ಹೊರ ಮೈಗೆ ಜೆಡಿ ಮಣ್ಣಿನ ಗಿಲಾಯ ಮಾಡುವುದು. ೩-೪ ಪೇಲ್ಫ ಬಪ್  ಬಣ್ಣದ ಮೊಟ್ಟೆಯ ಮೇಲೆ ಬೂದು ಬಣ್ಣದ ತಿಳಿ ಚುಕ್ಕೆ ಇರುವುದು. ಗಂಡು ಬೆನ್ನು ಎರಡು ಮರಿಗಳ ಪಾಲನೆ ಪೋಷಣೆಯಲ್ಲಿ ಪಾಲ್ಗೊಳ್ಳುವುದು.  ಕಾಡು ಅಳಿಯುತ್ತಿರುವ್ಂತೆ ಇವುಗ್ಳ್ ಇರುನೆಲೆ ಕಡಿಮೆಯಾಗುತ್ತಿದೆ. ಹುಳ ಹುಪ್ಪಡಿಗಳನ್ನು ತಿನ್ನುವ ಇದು ರೈತರಿಗೆ ತುಂಬಾ ಉಪಕ್ಕರಿಯಾದ ಹಕ್ಕಿ . ಮುಂಜಾನೆ ಇದರ ಸಿಳ್ಳಿನ ರಾಗಾಲಾಪ ಕೇಳಿಸಲು ಉಳಿಸಲು ಇದನ್ನು ಕಾಪಾಡಬೇಕಗಿದೆ.


Wednesday, 27 November 2013

Birds of Muroor: WhiteTthroated Ground Thrush-Zoothera citrinaCyanotus

Birds of Muroor: WhiteTthroated Thrush-Zoothera citrinaCyanotus: WhiteTthroated Thrush-Zoothera citrinaCyanotus ಪ ಟ್ಟಿ ನೆಲಗುಟುರ  -ಮೈನಾ  ಹಕ್ಕಿ ಗಾತ್ರ , ಮೋಟು ಬಾಲದ ಹಕ್ಕಿ  ೨೫ ಸೆಂ ಮೀ ಉದ್ದ ಇದೆ. ರೆಕ್ಕೆ, ಬೆನ್ನು, ...

Birds of Muroor: Indian Rollar

Birds of Muroor: Indian: ಇ ದು ಇಂಡಿಯಾನ ರೋಲಾರ -ತಲೆ, ರೆಕ್ಕೆ ತಿಳಿ ನೀಲಿ ಎದೆ, ಬೆನ್ನು ಮಣ್ ಕೆಂಪು ಬಣ್ಣ , ಕುತ್ತಿಗೆ ಮುಂಭಾಗ್ ಕಂಡು ಬಣ್ಣಗೀರು ಇದೆ ಕಪ್ಪು ಚುಂಚು . ರೆಕ್ಕೆ ಬುಡ , ತುದಿ...

Indian

ಇ ದು ಇಂಡಿಯನ  ರೋಲರ  -ತಲೆ, ರೆಕ್ಕೆ ತಿಳಿ ನೀಲಿ ಎದೆ, ಬೆನ್ನು ಮಣ್ ಕೆಂಪು ಬಣ್ಣ , ಕುತ್ತಿಗೆ ಮುಂಭಾಗ್ ಕಂಡು ಬಣ್ಣಗೀರು ಇದೆ ಕಪ್ಪು ಚುಂಚು . ರೆಕ್ಕೆ ಬುಡ , ತುದಿ, ಪುಕ್ಕದ ಬಲದಲ್ಲಿ ಎದ್ದು ಕಾಣುವ್ ದಟ್ಟ ನೀಲಿ ಬಣ್ಣ ಇದೆ ಹಾರುವಾಗ್ ಈ ಬಣ್ಣ ಎದ್ದು ಕಾಣುವುದು ಮೂರು ವರುಷಗಳಿಂದ ನೋಡುತ್ತಿದ್ದರು ಒಮ್ಮೆಯೂ ಕೂಗು ಕೇಳಿರಲಿಲ್ಲ. ಆದರೆ ನವೆಂಬರ್೨೬ಬೆಳಿಗ್ಗೆ ೯ ಗಂಟೆಗೆ ನಮ್ಮೂರ್ ಹತ್ತಿರ ವಿದ್ಯುತ್  ತಂತಿಯ ಮೇಲೆ ಕುಳಿತು ತನ್ನ ಸ್ಂಗಾತಿಗಾಗಿ ಚುಕ್ಕ ಚುಕಕ  ಎಂದು ಕೂಗು ಕೇಳಿ ತುಂಬಾ ಸ್ಂತೋಷ ವಾಯಿತು.  ಗಂಡು- ಹೆಣ್ಣು ಎರಡು ಕಂಡಿದೆ. ಸಾಧ್ಯವಾದರೆ ಈ ವರ್ಷ ಕೂಗನ್ನು ದಾಖಲಿಸಲು ಸಾಧ್ಯವಾಗಬಹುದು. ಇದು ಕರ್ನಾಟಕದ ರಾಜ್ಯ ಹಕ್ಕಿ. ಅದರ  ಕೂಗನ್ನು ದಾಖಲಿಸುವ್ ಪ್ರಯತ್ನದಲ್ಲಿದ್ದೇನೆ. ಗಂಡು-ಹೆಣ್ಣುಗ್ಳಲ್ಲಿ ವ್ಯತ್ಯಾಸ ಇಲ್ಲ. ಕುರುಚಲು ಕಾಡು , ಸಾಗುವಳಿ ಭೂಮಿ ಹತ್ತಿರ  ತಂತಿಗಳ ಮೇಲೆ ಅಥವಾ ಎತ್ತರದ ಮರಗಳ ಮೇಲೆ  ಕುಳಿತು ಅಲ್ಲಿಂದಲೇ ಹಾರಿ ದೊಡ್ಡ ಹುಳ , ಕಪ್ಪೆ, ಮಿಡತೆ, ಹಾವುರಾಣಿ ಗಳನ್ನುಹಿಡಿಯುವುದು.ಹಾರಿದಲ್ಲಿಗೇ
ಹಿಂತಿರುಗಿ ತಾನು ಹಿಡಿದ ಬೇಟೆಯನ್ನು ಮರದ ಟೊಂಗೆಗೆ   ಅಥವಾ ತಂತಿಗೆ ಬಡಿದು ಸಾಯಿಸಿ ತಿನ್ನುವುದು. ಬಹಳ ನಿದಾನ ರೆಕ್ಕೆ ಬಡಿದು ಹಾರುವುದು. ಮಾರ್ಚ ದಿಂದ ಜುಲೈ ವರೆಗೆ ಮರದ ಪೊಟರೆಯಲ್ಲಿ , ಹಾಳುಬಿದ್ದ ಕಟ್ಟಡದ ಸಂದಿಯಲ್ಲಿ ಹುಲ್ಲು ಬಟ್ಟೆ ಚೂರು ಸೇರಿಸಿ ಗೂಡು ಮಾಡುವುದು ೪-೫ ಹೊಳೆವ ಬಿಳಿ ಬಣ್ಣದ ಉದ್ದವ್ರತ್ತಾಕಾರದ ಮೊಟ್ಟೆ ಇಡುವುದು.  ಸಾಮಾನ್ಯ ಎತ್ತರದಲ್ಲಿ   ಗೂಡನ್ನು ಕಟ್ತುವುದು. ಇದು ನಮ್ಮ ದೇಶದ ಹಕ್ಕಿ . ಆದರೂ ಆಂತರಿಕವಾಗಿ ವಲಸೆ ಹೋಗುವುದು. ಭಾರತದ ತುಂಬೆಲ್ಲಾ ಇರುವ ಈ ಹಕ್ಕಿ ಹುಳಗಳನ್ನು ಕೀಟಗಳನ್ನು ತಿನ್ನುವುದರಿಂದ  ರೈತನ ಮಿತ್ರ . ದೊಡ್ಡತಲೆಯ ನೀಲಿ ಹಕ್ಕಿ, ಬ್ಲೂಜೇ ಎಂಬ ಹೆಸರು ಇದಕ್ಕಿದೆ. ಹಾರುವಾಗ ರೆಕ್ಕೆಯಲ್ಲಿ ಕಾಣುವ ನೀಲಿ, ತಿಳಿನೀಲಿ , ಬಿಳಿ ಬಣ್ಣಗಳ ಚಿತ್ತಾರ ತುಂಬಾ ಸುಂದರ ತಲೆಯಲ್ಲಿಯ ತಿಳಿ ನೀಲಿ ಬಣ್ಣ ತಲೆಯಲ್ಲಿ ನೀಲಿ ಟೋಪಿ ಧರಿಸಿದ್ಂತೆ ಕಾಣುವುದು. ಚುಂಚಿನ ಬುಡದಲ್ಲಿ ತಿಳಿ ಬಿಳಿ ಹಣೆ ಬಣ್ಣ ಹಾಗೂ ಅಕಾರ ಆಧರಿಸಿ ಮೂರು ಉಪಜಾತಿಗಳಿವೆ.
b
baNNa ha.

citteChitte

ಚಿಟ್ಟೆ  ಸಂಗದಲ್ಲೊಂದು ಪಯಣ
Saturday, 23 November 2013

WhiteTthroated Thrush-Zoothera citrinaCyanotus

WhiteTthroated Thrush-Zoothera citrinaCyanotus
ಪ ಟ್ಟಿ ನೆಲಗುಟುರ  -ಮೈನಾ  ಹಕ್ಕಿ ಗಾತ್ರ , ಮೋಟು ಬಾಲದ ಹಕ್ಕಿ  ೨೫ ಸೆಂ ಮೀ ಉದ್ದ ಇದೆ. ರೆಕ್ಕೆ, ಬೆನ್ನು, ಬಾಲ ತೆಳು ನೀಲಿ ಬಣ್ಣ .ತಲೆ , ಹೊಟ್ಟೆ.  ಕಿತ್ತಳೆ  ಬಣ್ಣ . ಕೆನ್ನೆಯಮೇಲೆ ಎರಡು ಕಪ್ಪು ಗೆರೆ ಇರುವುದು ಗಂಡು. ಹೆಣ್ಣು ಹಕ್ಕಿಗೆ ಕಪ್ಪು ಗೆರೆ ಮತ್ತು ಕು ಕಿತ್ತಿಗೆಯಲ್ಲಿ ಬಿಳಿಬಣ್ಣ ಇಲ್ಲ . ಹೆಣ್ಣು ಹಕ್ಕಿಗೆ ನೀಲಿ  ಗರಿ ಇದ್ದರೆ   ಹೆಣ್ಣಿಗೆ  ಹಸಿರು ಬಣ್ಣ ಇರುವುದು. ಕುತ್ತಿಗೆ ಹೊಟ್ಟೆ ಕಿತ್ತಳೆ ಬಣ್ಣ ಇರುವುದು. ಇದು ಕಾಳು ಮೆಣಸು ತಿನ್ನುವುದರಿಂದ ಮತ್ತು ಅದರ್ ಮೈ ಭಾಗ ಕಾಳು ಮೆಣಸಿನ ಬಣ್ಣ ಇದೆ. ಇದಕ್ಕೆ ಮೆಣ್ಸಿನ್ ಹಕ್ಕಿ ಎಂಬ ಅನ್ವರ್ಥಕ ಹೆಸರಿದೆ .ನೆಲದ ಮೇಲೆ ಓಡಾಡುತ್ತಾ ತೆರಗೆಲೆಗಳನ್ನು ಚಿಮ್ಮಿಸುತ್ತ ಅದ್ರ ಅಡಿಯಲ್ಲಿರುವ್ ಕೀಟ ತಿನ್ನುವುದು ಇದರ ಹವ್ಯಾಸ ಗ಼ಾಬರಿಯಾದಾಗ ಸಿಳ್ಳೆ ಹೊಡೆಯುತ್ತ ವೇಗವಾಗಿ ಹಾರಿ ಹೋಗುವುದು. ಹಿಮಾಲಯ ಭಾಗದಲ್ಲಿ ಕಾಣುವ ಹಕ್ಕಿಗೆ ಕುತ್ತಿಗೆಯಲ್ಲಿ ಬಿಳಿ ಬಣ್ಣ ಇಲ್ಲ.
ಹಕ್ಕಿಯನ್ನು ಗುರುತಿಸಿ ಇಂದು ಹರೀಶ  ಕಳಿಸಿದ ಹಕ್ಕಿ ಗಂಡು ಗ್ಲಾಸಿನ ಕಿಟಿಕಿಗೆ ಡಿಕ್ಕಿ ಹೊಡೆದು ಬಿದ್ದ ಈ ಹಕ್ಕಿಗೆ ಸಕ್ಕರೆ ನೀರು ಕುಡಿಸಲು ತಿಳಿಸಿದ್ದು ಚೇತರಿಸಿಕೊಂಡು ಹಾರಿಹೋಗಿದೆ. ಅಡಿಕೆ ತೊಟಗಳಲ್ಲಿ ಗಂಡು ಹೆಣ್ಣು ಸದಾ ಕಾಣುವುದು. ಮೇ ದಿಂದ ಜೂನ್ಫ಼್ಗೂಡು ಕಟ್ಟುವ  ಸಮಯ ಉಳಿದ ಸಮಯದಲ್ಲಿ ಮೌನ ವಹಿಸುವ್ ಇದು ಸಿಲ್ಲಿನ  ರಾಗಾಲಾಪ ಮಾಡುವುದು.