ಬ್ರಾಹ್ಮನಿ ಕೈಟ್ - ಬಿಳಿ ಗರುಡ Brahminy Kite-Haliastur indus- (R)
ಇದು ಹದ್ದು ಅಥವಾ ಡೇಗೆ (ಆಕ್ಸಿಪಿಟ್ರಡೇ )ಕುಟುಂಬಕ್ಕೆ ಸೇರಿದೆ.6 1 ಸೆಂ. ಮೀ ಉದ್ದದ್ ಕೋಳಿಯ ಗಾತ್ರದ ಹಕ್ಕಿ. ಇಟ್ಟಿಗೆ ಕೆಂಪು ಮೈ ಬಣ್ಣ . ಬಿಳಿ ಕುತ್ತಿಗೆ , ತಲೆ . ಕುತ್ತಿಗೆ ಬಿಳಿ ಬಣ್ಣ ಎದೆಯ ವರೆಗೆ ವಿಸ್ತರಿಸಿದೆ. ಎದೆ ಬಿಳಿಭಾಗದಲ್ಲಿ ಕಪ್ಪು ಗೀರುಗಳಿವೆ. ಹಿಂದೂ ಪುರಾಣಗಳಲ್ಲಿ ಇದಕ್ಕೆ ವಿಷ್ಣು ವಿನ್ ವಾಹನ ಎಂದು ಪುಣ್ಯ ಸ್ಥಾನ ಕೊಟ್ಟಿದೆ. ಪುಕ್ಕದ ತುದಿ ವರ್ತುಲಾಕಾರ ವಾಗಿದೆ. ಇದು ಕೊಳ , ನದಿ, ಹಿನ್ನೀರು ವಿಷೇಶವಾಗಿ ಮೀನುಗಾರಿಕೆ ಚಟುವಟಿಕೆ ಇರುವಜಾಗದಲ್ಲಿ ಇರುವುದು. ಮಳೆಗಾಲದಲ್ಲಿ ಹಾಗು ಬೇಸಿಗೆಯಲ್ಲಿ ಮಳೆ ನೀರು ನಿಂತ ಸ್ಥಳದಲ್ಲಿ ಕಾಣುವುದು. ಏಡಿ , ಮೀನು, ಕಪ್ಪೆ ಸಣ್ಣ ಹಾವು , ಇದರ ಆಹಾರ. ಗಡುಸಾಗಿ ಚೀರಿದಂತೆ ಕೂಗುವುದು. ಕವಲಿಲ್ಲದ ಬಾಲ. ದಪ್ಪ ಕೊಕ್ಕು, ಕೊಕ್ಕಿನ್ ಬುಡದಲ್ಲಿ ಪ್ಲೋರೋಸಂಟ ಹಳದಿ ಬಣ್ಣ ಇದೆ. ಕೊಕ್ಕು ತುದಿ ಸ್ವಲ್ಪ ಬಾಗಿಚೂಪಾಗಿದೆ. ಇದರ ಕಾಲಲ್ಲಿ ನಾಲ್ಕುಬೆರಳುಗಳಿವೆ. ಕಿರುಬೆರಳು ಸಹಿತ ಎಲ್ಲಾ ಬೆರಳುಗಳಲ್ಲಿ ಚೂಪಾದ ಉಗುರುಗಅಳಿ ವೆ. ಇದು ಬೇಟೆಯಾಡಿ ತನ್ನ ಆಹಾರ ದೊರಕಿಸಲು ಸಹಾಯಕವಾಗಿದೆ. ಇದು ಊರ ಹದ್ದು ಪೆರಿಯಾ ಕೈಟ್ ಜೊತೆಯಲ್ಲಿ ಇರುವುದು. ಕೆರೆ, ಹೊಳೆ ಹೊಂದದ ನೀರಲ್ಲಿ ದೊಪ್ಪನೆ ಬಿದ್ದು ಅರ್ಧ ನೀರಲ್ಲಿ ಮುಳುಗಿ ಮೇಲೆ ಹಾರುವ ಶಕ್ತಿ ಇದಕ್ಕಿದೆ. ಇದು ಸ್ಥಳೀಯ ಪಕ್ಷಿ . ಸ್ಥಳಿಯವಾಗಿ ಆಹಾರಕ್ಕಾಗಿ ವಲಸೆ ಹೋಗುವುದು. ಹುಣಸೆ, ಆಲ ಬೇವು, ಗಾಌ ಮರ ಗಳ ತುದಿಯ ತಿಸಿಲು ಗಳಲ್ಲಿ ದಿಡಗಳಕಟ್ಟ್ ಗೆ ತುಂಡು ಹಸಿರೆಲೆ ಉಪಯೋಗಿಸಿ ಗೂಡು ಕಟ್ಟು ವುದು. ಡಿಸೆಂಬರ್ -ಮಾರ್ಚ ಸಾಮಾನ್ಯವಾಗಿ ಇದು ಗೂಡು ಕಟ್ಟುವ ಸಮಯ. ೩-೪ ಬಿಳಿ ಮೊಟ್ಟೆಗಳನ್ನು ಇಡುವುದು. ಮೊಟ್ಟೆಯ
ಮೇಲೆ ಚಿಕ್ಕ ಕಂಡು ಬಣ್ಣದ ಚುಕ್ಕೆ ಇರುವುದು. ಗಂಡು ಹೆಣ್ಣು ಎರಡು ಮರಿಯ ಪಾಲನೆ ಪೋಷಣೆಯಲ್ಲಿ ಪಾಲ್ಗೊಳ್ಳುವುದು.
ನನಗೆ ಕುಮಟ ಮಾಸೂರಿನಲ್ಲಿ ಕಂಡ ಗೂಡು ಸುಮಾರು 85 ಫೂಟ್ ಎತ್ತರದಲ್ಲಿ ಗಾಳಿ ಮರದ ಟಿಸಿಲಿನಲ್ಲಿ ಇತ್ತು. ಜೂನ ತಿಂಗಳ ಕೊನೆಯಲ್ಲಿ ಕಣ್ದಿದೆ.ಜಲಾವ್ರತ ಪ್ರದೇಶದಲ್ಲಿ ನೀರಿನಿಂದ ಹೊರಬಂದು ನೆಲದ ಮೇಲೆ ಹರಿ ದಾಡುವ್ ಏಡಿ , ಕಪ್ಪೆ ಇತ್ಯಾದಿ ಪ್ರಾಣಿಗಳ ಮರಿಗಳನ್ನು ಹಿಡಿದು ತಿನ್ನುವುದು. ಮಿಕ್ಕ ಸಮಯದಲ್ಲಿ ಪೇಟೆ ಹಳ್ಳಿಯ ತ್ಯಾಜ್ಯಾಗಳಲ್ಲಿ ಸಿಕ್ಕ ಆಹಾರವನ್ನು ತಿನ್ನುವುದು. ಮಳೆ ಸಮಯಕ್ಕೆ ಬರುವ ಮಳೆ ಹುಳುಗಳನ್ನು ಬಿಲದ ಹತ್ತಿರವೇ ಕಾದು ಕುಲಳಿತು ಹಿಡಿದು ತಿನ್ನುವುದು. ರಣಹದ್ದು ಸತ್ತ ಪ್ರಾ ಣಿಯ ಮಾಂಸ ತಿನ್ನುವಾಗ ಅದರ ಜೊತೆ ಸೇರಿ ಸತ್ತ ಪ್ರಾಣಿಯ ಮಾಂಸ ತಿನ್ನುವುದು.
ಭಾರತ, ಬಾಂಗ್ಲಾದೇಶ , ಪಾಕಿಸ್ಥಾನ , ಸಿಲೋನ ಹಾಗು ಹಿಮಾಲಯದ 2 0 0 0 ಮೀ ಎತ್ತರದಲ್ಲೂ ಕಾಣುವುದು.
No comments:
Post a Comment