Monday, June 10, 2013

Western Ghats Birds Study -book realse

ಪಿ.ವಿ. ಭಟ್ - ಪಕ್ಷಿ ತಜ್ಞ , ಎಸ್. ಎಸ್ಫ್ ಭಟ್ , ಜಿ.ಎಲ್ ಹೆಗಡೆ . ಕವರಿ ಪೊರೆಸ್ಟ್  ಅಧಿಕಾರಿ . ಎಸ್. ಜಿ. ಭಟ್ ಫೊರೆಸ್ಟ್ ಆಫಿಸ್ರ್ 

Indian KU Ku male & female

ಹೆಣ್ಣು ಕೋಗಿಲೆ

ಗಂಡು ಕೋಗಿಲೆ 

Discription of Birds Part in Kannada & English

ಪಕ್ಷಿ ಅದ್ಯಯನಕ್ಕೆ ಸಹಕಾರಿ ಯಗಳು ಇದು ಅವಶ್ಯ

Brahminy Kite

ಬ್ರಾಹ್ಮನಿ ಕೈಟ್ - ಬಿಳಿ ಗರುಡ Brahminy Kite-Haliastur indus- (R)


      ಇದು ಹದ್ದು ಅಥವಾ ಡೇಗೆ  (ಆಕ್ಸಿಪಿಟ್ರಡೇ )ಕುಟುಂಬಕ್ಕೆ ಸೇರಿದೆ.6 1 ಸೆಂ. ಮೀ ಉದ್ದದ್ ಕೋಳಿಯ ಗಾತ್ರದ ಹಕ್ಕಿ. ಇಟ್ಟಿಗೆ ಕೆಂಪು ಮೈ ಬಣ್ಣ . ಬಿಳಿ ಕುತ್ತಿಗೆ , ತಲೆ . ಕುತ್ತಿಗೆ  ಬಿಳಿ ಬಣ್ಣ ಎದೆಯ ವರೆಗೆ ವಿಸ್ತರಿಸಿದೆ. ಎದೆ ಬಿಳಿಭಾಗದಲ್ಲಿ ಕಪ್ಪು ಗೀರುಗಳಿವೆ. ಹಿಂದೂ ಪುರಾಣಗಳಲ್ಲಿ ಇದಕ್ಕೆ ವಿಷ್ಣು ವಿನ್ ವಾಹನ ಎಂದು ಪುಣ್ಯ ಸ್ಥಾನ ಕೊಟ್ಟಿದೆ.  ಪುಕ್ಕದ ತುದಿ ವರ್ತುಲಾಕಾರ ವಾಗಿದೆ. ಇದು ಕೊಳ , ನದಿ, ಹಿನ್ನೀರು  ವಿಷೇಶವಾಗಿ ಮೀನುಗಾರಿಕೆ ಚಟುವಟಿಕೆ ಇರುವಜಾಗದಲ್ಲಿ ಇರುವುದು. ಮಳೆಗಾಲದಲ್ಲಿ ಹಾಗು ಬೇಸಿಗೆಯಲ್ಲಿ ಮಳೆ ನೀರು ನಿಂತ ಸ್ಥಳದಲ್ಲಿ ಕಾಣುವುದು. ಏಡಿ , ಮೀನು, ಕಪ್ಪೆ ಸಣ್ಣ ಹಾವು , ಇದರ ಆಹಾರ. ಗಡುಸಾಗಿ ಚೀರಿದಂತೆ ಕೂಗುವುದು. ಕವಲಿಲ್ಲದ ಬಾಲ. ದಪ್ಪ ಕೊಕ್ಕು, ಕೊಕ್ಕಿನ್ ಬುಡದಲ್ಲಿ ಪ್ಲೋರೋಸಂಟ ಹಳದಿ ಬಣ್ಣ ಇದೆ. ಕೊಕ್ಕು ತುದಿ ಸ್ವಲ್ಪ ಬಾಗಿಚೂಪಾಗಿದೆ. ಇದರ ಕಾಲಲ್ಲಿ ನಾಲ್ಕುಬೆರಳುಗಳಿವೆ. ಕಿರುಬೆರಳು ಸಹಿತ ಎಲ್ಲಾ ಬೆರಳುಗಳಲ್ಲಿ ಚೂಪಾದ ಉಗುರುಗಅಳಿ ವೆ. ಇದು ಬೇಟೆಯಾಡಿ ತನ್ನ ಆಹಾರ ದೊರಕಿಸಲು ಸಹಾಯಕವಾಗಿದೆ. ಇದು ಊರ ಹದ್ದು ಪೆರಿಯಾ ಕೈಟ್ ಜೊತೆಯಲ್ಲಿ ಇರುವುದು. ಕೆರೆ, ಹೊಳೆ ಹೊಂದದ ನೀರಲ್ಲಿ ದೊಪ್ಪನೆ ಬಿದ್ದು ಅರ್ಧ ನೀರಲ್ಲಿ ಮುಳುಗಿ ಮೇಲೆ ಹಾರುವ ಶಕ್ತಿ ಇದಕ್ಕಿದೆ. ಇದು ಸ್ಥಳೀಯ ಪಕ್ಷಿ . ಸ್ಥಳಿಯವಾಗಿ ಆಹಾರಕ್ಕಾಗಿ ವಲಸೆ ಹೋಗುವುದು. ಹುಣಸೆ, ಆಲ ಬೇವು, ಗಾಌ ಮರ ಗಳ ತುದಿಯ ತಿಸಿಲು ಗಳಲ್ಲಿ ದಿಡಗಳಕಟ್ಟ್ ಗೆ ತುಂಡು ಹಸಿರೆಲೆ ಉಪಯೋಗಿಸಿ ಗೂಡು ಕಟ್ಟು ವುದು. ಡಿಸೆಂಬರ್ -ಮಾರ್ಚ ಸಾಮಾನ್ಯವಾಗಿ ಇದು ಗೂಡು ಕಟ್ಟುವ ಸಮಯ. ೩-೪ ಬಿಳಿ ಮೊಟ್ಟೆಗಳನ್ನು ಇಡುವುದು. ಮೊಟ್ಟೆಯ
ಮೇಲೆ ಚಿಕ್ಕ ಕಂಡು ಬಣ್ಣದ ಚುಕ್ಕೆ ಇರುವುದು. ಗಂಡು ಹೆಣ್ಣು ಎರಡು ಮರಿಯ ಪಾಲನೆ ಪೋಷಣೆಯಲ್ಲಿ ಪಾಲ್ಗೊಳ್ಳುವುದು.
         ನನಗೆ ಕುಮಟ ಮಾಸೂರಿನಲ್ಲಿ ಕಂಡ ಗೂಡು ಸುಮಾರು 85 ಫೂಟ್ ಎತ್ತರದಲ್ಲಿ ಗಾಳಿ ಮರದ ಟಿಸಿಲಿನಲ್ಲಿ ಇತ್ತು. ಜೂನ ತಿಂಗಳ ಕೊನೆಯಲ್ಲಿ ಕಣ್ದಿದೆ.ಜಲಾವ್ರತ ಪ್ರದೇಶದಲ್ಲಿ ನೀರಿನಿಂದ ಹೊರಬಂದು ನೆಲದ ಮೇಲೆ ಹರಿ ದಾಡುವ್ ಏಡಿ , ಕಪ್ಪೆ ಇತ್ಯಾದಿ ಪ್ರಾಣಿಗಳ ಮರಿಗಳನ್ನು ಹಿಡಿದು ತಿನ್ನುವುದು. ಮಿಕ್ಕ ಸಮಯದಲ್ಲಿ ಪೇಟೆ ಹಳ್ಳಿಯ ತ್ಯಾಜ್ಯಾಗಳಲ್ಲಿ ಸಿಕ್ಕ ಆಹಾರವನ್ನು ತಿನ್ನುವುದು. ಮಳೆ ಸಮಯಕ್ಕೆ ಬರುವ ಮಳೆ ಹುಳುಗಳನ್ನು ಬಿಲದ ಹತ್ತಿರವೇ ಕಾದು ಕುಲಳಿತು ಹಿಡಿದು ತಿನ್ನುವುದು. ರಣಹದ್ದು ಸತ್ತ ಪ್ರಾ ಣಿಯ ಮಾಂಸ ತಿನ್ನುವಾಗ ಅದರ ಜೊತೆ ಸೇರಿ ಸತ್ತ ಪ್ರಾಣಿಯ ಮಾಂಸ ತಿನ್ನುವುದು.
ಭಾರತ, ಬಾಂಗ್ಲಾದೇಶ , ಪಾಕಿಸ್ಥಾನ , ಸಿಲೋನ ಹಾಗು ಹಿಮಾಲಯದ 2 0 0 0 ಮೀ ಎತ್ತರದಲ್ಲೂ ಕಾಣುವುದು. 

Sunday, June 9, 2013

Coppersmit barbet


COPPERSMITH BARBET-Megalaima haemacephala
ಕೊಪ್ಪರಸ್ಮಿತ್  ಬಾರ್ಬೆಟ್ - ಚಿಟ್ಟ  ಗುಟುರ್ -






       ೧ ೭ ಸೆಂ.ಮೀ. ಉದ್ದದ ಗುಬ್ಬಿ ಗಾತ್ರದ ದುಂಡಗಿನ ಹಕ್ಕಿ. ಹಸಿರುಹುಲ್ಲು ಬಣ್ಣ. ಮುಂದೆಲೆ, ಎದೆಯಮೇಲೆ ಕುಂಕುಮ ಬಣ್ಣದ ಪಟ್ಟೆ ಇದೆ. ಎದೆ, ಕುತ್ತಿಗೆ ಕೆಳಗೆ, ಕಣ್ಣಿನ ಮೇಲೆ ಕೆಳಗೆ ಹಳದಿ ಬಣ್ಣ .ಹಳದಿಬಣ್ಣದ ಎದೆಯಮೇಲೆ ಹಸಿರುಮಿಶ್ರಿತ ಕಪ್ಪು ಬಣ್ಣದ ಗೀರುಗಳಿವೆ. ಬಲವಾದ ಚಕ್ಕ ಚುಂಚು.ಕೊಕ್ಕಿನ ಬುಡದಲ್ಲಿ ಉದ್ದ ಹಾಗೂ ದಬ್ಬ ಮೀಸೆ ಕೂದಲು ಇದೆ.ಕುಂಕುಮ ಬಣ್ಣದ ಚಿಕ್ಕ ಕಾಲು. ದಪ್ಪ ಗಿಡ್ಡ ಚೊಟುದ್ದದ ಬಾಲ ಹಾರುವಾಗ ತ್ರಿಕೋನಾಕಾರದಲ್ಲಿ ಕಾಣುವುದು.ನಾಲ್ಕಾರು ಹಕ್ಕಿಗಳು ಗುಂಪಾಗಿ,ಆಲ ಬಸುರಿ, ಗೋಣಿ, ಹಣ್ಣಾದಾಗ ಕಾಣುವುದು. ಗಂಡು ಹೆಣ್ಣು ಒಂದೇರೀತಿ ಇರುವುದು. ಮೊದಲು ನನಗೆ ಕಾಣಿಸಿದ್ದು ಮುಂಜಾನೆ ರಸ್ತೆ ಪಕ್ಕದ ಮಾವಿನ ಮರದ ತುದಿಯಲ್ಲಿ ಜೋಡಿಹಕ್ಕಿ.ಅನಂತರ ಒಂದು  ವರುಷದ ನಂತರ ಮೂರೂರಿನ ತೊಂಡೆಕೆರೆ ಹತ್ತಿರ ಆಲದಮರದಲ್ಲಿ ಹಣ್ಣಾದಾಗ. ಇದರ ಕೂಗು ತಾಮ್ರದ ಮೇಲೆ ಸುತ್ತಿಗೆಯಿಂದ ಬಡಿದಾಗ ಬರುವ ಸದ್ದಿನಂತಿದೆ ಹಾಗಾಗಿ ಇದಕ್ಕೆ ಇಂಗ್ಲೀಷ ನಲ್ಲಿ 'ಕೊಪ್ಪರ್ಸ್ಮಿತ್ ಬಾರ್ಬೆಟ್ ' ಎಂದು ಇದರ ಕೂಗನ್ನು ಆದರಿಸಿ ಹೆಸರು ನೀಡಿದೆ. ಟೊಯಕ್ ಟೊಯಕ್ ಎಂದು ದಿನವಿಡೀ ಒಂದೇಸವನೆ ಕೂಗುವುದು.
ಜನವರಿಯಿಂದ-ಜೂನ್ ಅವಧಿಯಲ್ಲಿ ಒಣಗಿದ  ಅಥವಾ ಹಸಿಯಾದ ಆಲ, ಬಸುರಿ, ನುಗ್ಗೆ, ಗೊರುಕಲು, ಮಾವು ಮುಂತಾದ ಭೂಮಿಗೆ ಸಮಾನಾಂತರವಾಗಿರುವ ಟೊಂಗೆಗಳಲ್ಲಿ ಸಾಧಾರಣ ಎತ್ತರದಲ್ಲಿ ಒಟ್ಟೆ ಕೊರೆದು ಅಲ್ಲಿ ಗೂಡು ಮಾಡಿಕೊಳ್ಳುವುದು.
ಟೊಂಗೆಯ ಅಡಿಬದಿಗೆ  ಒಟ್ಟೆ ಇರುವದು.

  ಭಾರತ, ಬಾಂಗ್ಲಾದೇಶ. ಪಾಕಿಸ್ಥಾನ, ಬರಮಾ ಆಗ್ನೇಯ ಏಷಿಯಾದ ಎಲ್ಲಾ ದೇಷಗಳಲ್ಲಿ ಇದೆ. ಇದು ಹೆಚ್ಚಾಗಿ ನೆಲಕ್ಕೆ ಇಳಿಯುವುದೇ ಇಲ್ಲ. ಹಾರುವ ರೆಕ್ಕೆ ಕೀಟಗಳು, ನುಸಿ , ಇದರ ಪ್ರಿಯಾಹಾರ. ಮಾವಿನ ಮರದ ಹತ್ತಿರ ಇಂತಹ ನುಸಿ ಹೆಚ್ಚಾಗಿರುವುದರಿಂದ  ಇದು ಅಲ್ಲಿ ಬೀಡುಬಿಡುವುದು. ಈ ಕೀಟಗಳನ್ನು ತಿಂದು ಮಾವು ಬೆಳೆಗೆ ಬರುವ ಎಷ್ಟೋ ರೋಗಗಳನ್ನು ತಡೆಯುವುದು. ಹಾಗಾಗಿ ಮಾವು ಬೆಳೆಗಾರರ ಮಿತ್ರ ಈ ಹಕ್ಕಿ.

Wednesday, May 8, 2013

Hanging perrot Chick

ನೇತಾಡುವ ಗಿಳಿ ಅಡಿಕೆ ಮರ (ಅರೇಕಾನಟ್ ಟ್ರೀ} ಕಡಿಉವಾಗ ಗೂಡಿಂದ ಬಿದ್ದುದ್ದು ಅದಕ್ಕೆ ಸಕ್ಕರೆ ನೀರು ಕುಡಿಸಿ ಸುಧಾರಿಸಿಕೊಂಡಾಗ ತಾಯಿಯ ಜೊತೆ ಮಾಡಿ ಬಿಟ್ಟಿದೆ. ಮೂರು ಮರಿಗಳಿದ್ದವು ಒಂದಕ್ಕೆ ಸ್ವಲ್ಪ ಗಾಯವಾಗಿತ್ತು. ಹೀಗೆ ತಾಯಿಯಿಂದ  ಅಪಘಾತಕ್ಕೀಡಾದ ಹಕ್ಕಿ ಮರಿಗಳನ್ನು ಪಾಲನೆ ಮಾಡಿ , ರೆಕ್ಕೆ ಬಲಿತ ಮೇಲೆ ಹಾರಿಬಿಡುವುದು ತುಂಬಾ ಅವಶ್ಯ  ಆದಿಸೆಯಲ್ಲಿ  ಅತಿ ಜಾಗರೂಕವಾಗಿ ಔಷದೋಪಚಾರ ಮಾಡುವುದು  ಅವಶ್ಯ



Sprrow Hawak Chick



ಹಕ್ಕಿ ಸೆಳವ  ಎಂದು  ಕರೆಯುತ್ತಾರೆ .  ಇದರಲ್ಲಿ ಎರಡು ಬಗೆ ಇದೆ. ಉದ್ದ ಬಾಲ ಚಿಕ್ಕ ಬಾಲ  ಉದ್ದ ಬಾಲವಿರುವ ಹಕ್ಕಿಯ ಬಾಲದ ಕೆಳಗೆ ಕಪ್ಪು ಗೆರೆಗಳಿವೆ. ಈ ಗೂಡು ೭0  ಫೂಟ್ ಎತ್ತರದಲ್ಲಿ ಮತ್ತಿ ಮರದ ಟೊಂಗೆಯಲ್ಲಿ ಮರದ ಕಡ್ಡಿ ಉಪಯೋಗಿಸಿ ಗೂಡು ಕಟ್ಟಿದೆ ಮೊಟು ಬಾಲಹ ಹಕ್ಕಿ . ಇದರಲ್ಲಿ 3 ಚಿಕ್ಕ ಮರಿಗಳಿದ್ದವು. ಇನ್ನಂದು ಗೂಡು ೩ ೫ ಫೂಟ್ ಎತ್ತರದಲ್ಲಿತ್ತು ಇದು ಉದ್ದ ಬಾಲದ ಹಕ್ಕ ಸೆಳವ ಹಕ್ಕ ಮರಿಗಳನ್ನು ಹಿಡಿದು ತಿನ್ನುವುದರಿಂದ  ಇದಕ್ಕೆ ಈ ಹೆಸರು ಬಂದಿದೆ.  


ಉದ್ದ ಬಾಲದ ಸಪ್ರೋ ಹವಾಕ್ ಒಂದು ಮೊಟ್ಟೆ ಹಾಲಾದ್ದು 3 ಸರಿಯಾಗಿದೆ 3 ಗೂಡಿನಲ್ಲಿ ಇತ್ತು. ಈ ಗೂಡು ೩ ಫೂಟ  ಎತ್ತರದಲ್ಲಿತ್ತು . ಗೂಡಿನ ವಿನ್ಯಾದಲ್ಲಿ ಯಾವುದೇ ವ್ಯತ್ಯಾಸ ರಲಿಲ್ಲ. ಹೆಚ್ಚಿನ ವಿವರಣೆ ಮುಂದೆ ಸೇರಿಸುವುದಿದೆ.

ಇದು ಮೊಟು ಬಾಲದ ಹಕ್ಕಿ ಸೆಳವದ ಮರಿ

ಉದ್ದ ಬಾಲದ ಹಕ್ಕಿಯ ಮೊಟ್ಟೆ- ಇದರಲ್ಲಿ 4 ಮೊಟ್ಟಗಳಿದ್ದವು ಆದರೆ ಒಂದು ಗೂಡಲ್ಲಿ ಇರಲಿಲ್ಲ. ನೇರಳೆ ಮರದ ಟೊಂಗೆಯಲ್ಲಿ ಜೋತಾಡುತ್ತಿತ್ತು. ಇದು ಹಾಳಾಗಿತ್ತು