ಕಿಂಗ್ ಫಿಷರ್ ಗೂಡು, ಮರಿ- ಗೂಡು ಮಣ್ಣಿನಲ್ಲಿ ಕೊರೆದ ಬಿಲ. ಇದರ ಗಾತ್ರ ಸುಮಾರು ಎರಡುವರೆ ಇಂಚು ದೊಡ್ಡದಾಗಿದೆ. ಆಳ ಸುಮಾರು 12 ಇಂಚು ಮುಂದೆ ಹೋದಂತೆ ಗಾತ್ರ ಹಚ್ಚು .ಮೂರು ಚಿಕ್ಕ ಮರಿಗಳಿವೆ. ರಾತ್ರಿ ಟಾರ್ಚ ಬೆಳಕಿನಲ್ಲಿ ತೆಗೆದ ಫೋಟೋ. ಹಳ್ಳದ ಬದಿಯಲ್ಲಿ ಗೋಡೆಗೆ ಕೊರೆದ ಬಿಲ ಇದರ ಗೂಡು. ನೆಲದಿಂದ 18 ಇಂಚು ಎತ್ತರದಲ್ಲಿ ಇದೆ. ಹತ್ತಿರದಲ್ಲೆ ಹಳ್ಳ ಇದೆ.ತಾ: 7-5-2013ರಂದು ರಾತ್ರಿ10-25 ರಿಂದ 10-30ರ ತನಕ ವೀಕ್ಷಣೆ ಮಾಡಿದೆ. ಒಳಗಡೆ ತಾಯಿ ಹಕ್ಕಿ ಕಂಡಿಲ್ಲ. ಮೂರು ಮರಿಗಳು ಮಾತ್ರ ಇವೆ. ಬೆಳಕು ಬಿಟ್ಟಾಗ ಕೂಗುತ್ತಾ ಬಾಯಿಕಳೆದು ಮುಂದೆ ಬರುವುದು. ಎರಡು ವರುಷಗಳ ಹಿಂದೆ ಬಾವಿಯಲ್ಲಿ ಸುಮಾರು ಐದು ಫೂಟು ಕೆಳಗಡೆ ಕೊರೆದ ಬಿಲದಲ್ಲಿ ಬಾವಿಯ ಒಳಬದಿಯಲ್ಲಿ ಗೂಡು ಸಿಕ್ಕಿತ್ತು ಆದರೆ ಮರಿ ಫೋಟೋ ತೆಗೆಯಲು ಸಾಧ್ಯವಾಗಿರಲಿಲ್ಲ.ಬಿಲದ ಆಳದಲ್ಲಿ ಮರಿ ಇರುವುದರಿಂದ ಫೋಟೋ ತೆಗೆಯುವದು ಕಷ್ಟ. ಅಧ್ಯಯನ ಮುಂದುವರಿದಿದೆ.
No comments:
Post a Comment