Tickell’s Blue Flycatcher (Cyornis tickelliae) R
[ಟಿಕಲ್ಸ್ ಬ್ಲೂ ಫ್ಲೈಕ್ಯಾಚರ್] - ಕೆಂಪು ಕೊರಳ (ಹುಳ ಗುಳಕ)
ಗುಬ್ಬಚ್ಚಿ ಗಾತ್ರದ ಹಕ್ಕಿ. 14 ಸೆಂ.ಮೀ ಉದ್ದ ಇದೆ. ಕಪ್ಪು ಮಿಶ್ರಿತ ನೀಲಿ ಬಣ್ಣದ ಮೈ. ಮುಂದಲೆ, ರೆಕ್ಕೆಯ ಬುಡದಲ್ಲಿ ಆಕಾಶ ನೀಲಿ ಬಣ್ಣದ ಪಟ್ಟೆ ಇದೆ. ಕುತ್ತಿಗೆ ಮತ್ತು ಎದೆ ಕಿತ್ತಳೆ ಬಣ್ಣ. ಎದೆಯ ಭಾಗದಿಂದ ಕಿತ್ತಳೆ ಬಣ್ಣ ತಿಳಿಯಾಗುತ್ತಾ ಬಂದಿದೆ. ಹೊಟ್ಟೆ ಭಾಗ ಬಿಳಿ. ಬಾಲದ ಕೆಳಗಡೆ ಕಿತ್ತಳೆ ಬಣ್ಣ.
ಉದುರೆಲೆ ಕಾಡು, ಅರೆಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಾಣುವುದು. ಪಶ್ಚಿಮ ಘಟ್ಟದ ತಪ್ಪಲಲ್ಲಿ ಕಾಣ ಸಿಗುವುದು. ಮರಗಳ ಕೊಂಬೆಗಳಲ್ಲಿ ನೆಟ್ಟಗೆ ಕುಳಿತುಕೊಳ್ಳುವುದು. ಹರಿಯುವ ನೀರ್ಝರಿಯ ಆಸು ಪಾಸು ಬಾಲ ಕುಣಿಸುತ್ತಾ ಹುಳ ಹಿಡಿಯುವುದು. ಸಣ್ಣದಾಗಿ ಹರಿಯುವ ನೀರಿನಲ್ಲ್ಲಿ ಬಾಲ ಕುಣಿಸುತ್ತಾ ಪಿಕಳಾರ ಹಕ್ಕಿಗಳಂತೆ ಸ್ನಾನ ಮಾಡುವುದು. ಇದೊಂದು ವಿರಳ ಹಕ್ಕಿ. ನಿಶ್ಚಿತ ನೆಲೆ ಮಾಡಿಕೊಂಡಿರುವುದಿಲ್ಲ. ರೆಕ್ಕೆ ನೊಣಗಳನ್ನು ಹಿಡಿಯುತ್ತಾ ಮುಂದೆ ಮುಂದೆ ಸಾಗುವುದು.
ಸಿಕ್ಕಿಂ, ನೇಪಾಳ, ಆಸಾಮ, ಉತ್ತರ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಚಿಟಗಾಂ. ಹಿಮಾಲಯ, ಕೇರಳ ಮುಂ. ಭಾಗದಲ್ಲಿ ಕಾಣುವುದು.
ಬಣ್ಣದ ವ್ಯತ್ಯಾಸದಿಂದಾಗಿ ಭಾರತದ ಜಾತಿ ಮತ್ತು ಶ್ರೀಲಂಕಾದ ಜಾತಿ ಎಂದು ಎರಡು ಉಪಜಾತಿಗಳಾಗಿ ವಿಂಗಡಿಸಲಾಗಿದೆ ಮೆಲು ದನಿಯ ಸಿಳ್ಳಿನ ರಾಗಾಲಾಪನೆ ಇದರ ಕೂಗು. ಇದರ ಮೆಲು ದನಿಯ ಸಿಳ್ಳಿನಿಂದ ಹಕ್ಕಿ ಇರುವ ಜಾಗ ಗುರುತಿಸಬಹುದು.
ಕೀಟಗಳೇ ಪ್ರಧಾನ ಆಹಾರ ಮಾರ್ಚ-ಜುಲೈ ಅಥವಾ ಮಾರ್ಚ ದಿಂದ ಅಗಸ್ಟ ಸಮಯದಲ್ಲಿ ಮರಿ ಮಾಡುವುದು. ಮರದ ಪೊಟರೆ ಅಥವಾ ಮಣ್ಣಿನ ಬಿರುಕುಗಳಲ್ಲಿ ಹುಲ್ಲು ಕಡ್ಡಿ, ನಾರು ಉಪಯೋಗಿಸಿ ಬಟ್ಟಲಾಕಾರದ ಗೂಡು ಕಟ್ಟುವುದು. 4-5 ತಿಳಿ ಮಣ್ಣು ಬಣ್ಣ ಅಥವಾ ಹಸಿರು ಛಾಯೆಯ ಮಣ್ಣು ಕೆಂಪು ಬಣ್ಣ ಮೊಟ್ಟೆ ಇಡುವುದು ಮೊಟ್ಟೆಯಮೇಲೆ ಕೆಂಪು ಮಿಶ್ರಿತ ಕಂದು ಬಣ್ಣದ ಚುಕ್ಕೆಗಳಿವೆ. ಎರಡು ಮೂರು ವರ್ಷಗಳಿಂದ ಉ.ಕ. ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ವಾಟೆಕೆರೆ ಹತ್ತಿರ 2012-13ರ ಅವಧಿಯಲ್ಲಿ ಒಂಟಿಯಾಗಿ ಅಥವಾ ಗಂಡು ಹೆಣ್ಣು ಜೋಡಿಯಾಗಿ ಕಾಣಿಸಿದೆ. ಹರಿಯುವ ಸಣ್ಣ ನೀರಿನಲ್ಲಿ ಬಾಲ ಕುಣಿಸುತ್ತಾ ಸ್ನಾನ ಮಾಡುವುದನ್ನು ಅಧ್ಯಯನ ಮಾಡಿದೆ.
No comments:
Post a Comment