ಮಂಜುಮನೆ ಹತ್ತಿರ ಗೂಡು ಕಟ್ಟಿದ್ದು ಸುಮಾರು ೩ ಅರ್ಧಫೂಟು ಎತ್ತರದಲ್ಲಿ ನಂಜಟ್ಳೆ ಗಿಡದ ಕವರಿನಲ್ಲಿ ಕಟ್ಟಿದೆ. ತನ್ನ ಗೂಡು ಪರಿಸರಕ್ಕೆ ಹೊಂದುವಂತೆ ಮಾಡಲು ಬಿಳಿ ಬಿಂಜಲು (ಜೇಡರ ಬಲೆ )ತಂದು ಗೂಡಿನ ಸುತ್ತ ಕೆಳ ಭಾಗದಲ್ಲಿ ಅಂಟಿಸಿದೆ . ಗೂಡಿ ಸೈಸ್, ಆಳ, ತ್ರಿಜ್ಯ ಅಳತೆ ಮಾಡಿದೆ. ಮೂರು ಪಿಂಕ್ ಕಲರ ಮೊಟ್ಟೆ ಇದೆ. ಲೈಟ್ ಬ್ರೌನ್ ಚಿಕ್ಕ ಚುಕ್ಕೆ ಮೊಟ್ಟಯ ಮೇಲಿದೆ ೩ ಮೊಟ್ಟೆ ಮರಿಯಾಗಿದೆ ಗಂಡು, ಹೆಣ್ಣು ಸರತಿಯಂತೆ ಮರಿಯ ಯೋಗಕ್ಷೇಮ ನೋಡುತ್ತದೆ. ಗುಟುಕು ಕೊಡುವುದು, ರೆಕ್ಕೆ ಹುಳ ತಂದು ಮರಿಗೆ ಕೊಡುವುದು. ಮರಿ ಅದನ್ನು ತಿಂದಾದ ಮೇಲೆ ಉಳಿದ ರೆಕ್ಕೆ ಭಾಗ ಗೂಡಿನಲ್ಲ ಉಳಿಯದಂತೆ ಕೊಳೆಯಾಗದಂತೆ ಅದನ್ನು ಹೊರಗೆ ಹಾಕುವುದು. ಆ ರೆಕ್ಕೆ ತುಂಡು ಗೂಡಿನಲ್ಲೆ ಇದ್ದರೆ ಇರುವೆ ಬಂದು ಮರಿಗೆ ತೊಂದರೆ ಯಾಗುವುದನ್ನು ತಪ್ಪಿಸಲು ಹೀಗೆ ಮಾಡುವುದು. ಮರಿಗಳಿಗೆ ಬಿಸಿಲಿನ ತಾಪ ಹೆಚ್ಚಾಗದಂತೆ ಆಗಾಗ ಹೋಗಿ ಹತ್ತಿರದಲ್ಲೆ ಇರುವ ನೀರಿನ ಹೊಂಡದಲ್ಲಿ ಸುಮಾರು ೧ ವರೆ ಫೂಟ್ ಎತ್ತರದ ಟೊಂಗೆಯಿಂದ ನೀರಿಗೆ ಜಿಗಿದು ಸ್ನಾನಮಾಡಿ ಬಂದು, ಒದ್ದೆರೆಕ್ಕೆ ಶೈತ್ಯ ಮರಿಗೆಳಗೆ ಸಿಗುವಂತೆ ಗೂಡಿನಲ್ಲಿ ಕುಳಿತುಕೊಳ್ಳುವುದು. ಡ್ರಾಂಗೋ, ಮತ್ತು ಎಷಿಯನ್ ಬ್ಲೂ ಪೇರಿ ಬರ್ಡ ಹತ್ತಿರ ಬಂದಾಗ ಮರಿ ರಕ್ಷಣೆಗೆ ತಂದೆ-ತಾಯಿ ಹಕ್ಕಿ ಧಾವಿಸಿ ಅದನ್ನು ಓಡಿಸುವುದು
ಸಿದ್ಧವಾಗುತ್ತಿರುವ ಗೂಡು |
No comments:
Post a Comment