Baya weaver Bird-Ploceus philippinus
ಗೀಜುಗ -ಬಯಾ ವೀವರ್ ಬರ್ಡ-ಮನೆಗುಬ್ಬಿಯಂತೆ ಕಾಣುವುದು ಸುಮಾರು 15 ಸೆಂಮೀ ದೊದ್ದದಾಗಿದೆ ಗುಬ್ಬಚ್ಚಿಯಂತೆ ಬಲವಾದ ಚುಂಚು ರೆಕ್ಕೆ ಕಂದುಬಣ್ಣ ಕತ್ತರಿಸಿದಂತೆ ಬಾಲ , ರೆಕ್ಕೆಯಮೇಲೆ ಕಂದುಬಣ್ಣದ ರೇಖೆ ಇದೆ. ಆದರೆ ಮರಿಮಾಡುವ ಸಮಯದಲ್ಲಿ ಹಳದಿಬಣ್ಣ ಪ್ರಧಾನವಾಗಿ ಎದ್ದು ಕಾಣುವುದು ತಲೆ ಹೊಟ್ಟೆ, ಎದೆ, ಹಳದಿಬಣ್ಣ, ರೆಕ್ಕೆಯಮೇಲೆ ಕರಿ ಮಚ್ಚೆ ಇದೆ. ದೊಡ್ಡ ದೊಡ್ಡ ಗುಂಪಿನಲ್ಲಿ ಗದ್ದೆ , ಕೃಷಿ ಭೂಮಿಯಲ್ಲಿ ಕಾಣುವುದು. ಪೈರು ಕೊಯ್ದ ಸಮಯದಲ್ಲಿ ಗುಬ್ಬಚ್ಚಿಯಂತೆ ಕಾಳುಗಳನ್ನು ಆಯ್ದು ತಿನ್ನುವುದು. ಚಿರಿ, ಚರೀ, ಚಿರೀ ಎಂದು ಕೂಗುತ್ತಿರುವುದು. ಮೇ -ಸಪ್ಟಂಬರ್-ನವೆಂಬರ್ ಅವಧಿಯಲ್ಲಿ ಗದ್ದೆಗಳ ಸಮೀಪ ಇರುವ ಎತ್ತರದ ತಾಳೆ-ತೆಂಗಿನ ಮರಗಳ ಗರಿಗಳಿಗೆ ಕಾಲು ಚೀಲದಂತಹ ಗೂಡನ್ನ ತಲೆ ಕೆಳಗಾಗಿ ಕಟ್ಟುವುದು.ಮರದ ಗರಿಗಳ ತುಂಬಾ ಒಟ್ಟಾಗಿ ಸುಮಾರು 90 ಫೂಟು ಎತ್ರದಲ್ಲಿ ಅನೇಕ ಗೂಡುಗಳನ್ನು ನಿರ್ಮಿಸುವುದು. ಕಬ್ಬಿನ ಎಲೆ ನಾರು ಹಾಗೂ ಭತ್ತದ ಹುಲ್ಲಿನ ನಾರನ್ನು ಉಪಯೋಗಿಸಿ ಸುಂದರ ಹಾಗೂ ನಾಜೂಕಾದ ಗೂಡನ್ನು ನೈದು ಕಟ್ಟುವುದು. ಗಂಡುಹಕ್ಕಿ ನಾಲ್ಕು ಐದಕ್ಕಿಂತ ಹೆಚ್ಚು ಗೂಡನ್ನು ನಿರ್ಮಿಸಿ, ಬರುವ ಹೆಣ್ಣು ಆಕರ್ಷಿಸಲು ರೆಕ್ಕೆ ಬಿಚ್ಚಿ ಹೆಣ್ಣನ್ನು ಆಹ್ವಾನಿಸುವುದು.ಕೆಲವೊಮ್ಮೆ ಎರಡು ಅಂತಸ್ಸಿನ ಗೂಡನ್ನು ಕಟ್ಟುವುದು. ಗೂಡಿನ ದ್ವಾರದಿಂದ ಕೆಳಗೆಟ್ಯೂಬಿನಂತೆ 2 ಫೂಟು ಉದ್ದ ಸಹ ಇರುವುದು. ಗೂಡಿನಉದ್ದ ಮೂರುವರೆ ಫೂಟ್ ಸಹಇರುವುದು ಕೂಗು, ಇರುವ ಜಾಗ ಹಾಗೂ ಬಣ್ಣ ವ್ಯತ್ಯಾಸದಿಂದ 2 ಬೇರೆ ಜಾತಿಯ ನೇಕಾರ ಹಕ್ಕಿಇದೆ. ಕಪ್ಪು ಎದೆ ಗೀಜುಗ, ಪಟ್ಟೆ ಗೀಜುಗ.
ಪಟ್ಟೆ ಗೀಜುಗ. -ಹಳದಿ ಎದೆಯಮೇಲೆ ಕಪ್ಪು ಗೆರೆಗಳಿರುವ ಗೀಜುಗ ಜೌಗು ಪ್ರದೇಶದ ಚಾಪೆಹುಲ್ಲ್ಲಿನ ನಾರಿನಿಂದ ನೈದು ಗೂಡನ್ನು ಮಾಡುವುದು. ಗಂಡು ಗೂಡನ್ನು ನಿರ್ಮಿಸಿ ಟ್ರಿ.ಲ್ಲಿಲ್ಲಿ ಎಂದು ಗಿಲಗಿಚ್ಚಿ ಸಪ್ಪಳದಂತೆ ಕೂಗಿ ರೆಕ್ಕೆ ಬಿಚ್ಚಿ ನರ್ತಿಸಿ ಹೆಣ್ಣನ್ನು ಆಹ್ವಾನಿಸುವುದು.
ಕರಿ ಎದೆಯ ಗೀಜುಗಕ್ಕೆ ಕಪ್ಪು ತಿಳಿ ಹಳದಿ ಬಣ್ಣ. ತಲೆಯ ಮೇಲೆ ಕಪ್ಪು ಟೋಪಿಯಂತೆ ಕಪ್ಪು ಬಣ್ಣ ತಲೆಯಲ್ಲಿರುವುದು ಎದೆಯಮೇಲೆ ಕಪ್ಪು ಕಂದುಬಣ್ಣದ ಅಗಲವಾದ ಪಟ್ಟೆ ಇರುವುದು.. ಹುಬ್ಬಿನಿಂದ ಗಲ್ಲದ ವರೆಗೆ ವ್ರತ್ತಾಕಾರದ ಅಗಲವಾದ ಬಿಳಿಬಣ್ಣದ ಪಟ್ಟಿ ಇದೆ. ಮರಿಮಾಡದ ಕಾಲದಲ್ಲಿ ಗುಬ್ಬಚ್ಚಿಯಂತೆ ಕಾಣುವುದು.ನಾಲಾ ಪ್ರದೇಶದಲ್ಲಿ ಇರುವುದು. ಜೊಂಡು ಹುಲ್ಲಿನ ನಾರಿನಿಂದ ಗೂಡನ್ನ ನೈಯುವುದು. ಗೂಡನ್ನು ತಯಾರಿಸಿ ಅದರಮೇಲೆ ಕುಳಿತು ಬಾಲವನ್ನು ಬೀಸಣಿಕೆಯಂತೆ ಬೀಸಿ ಹೆಣ್ಣು ಕರೆಯುವುದು.ಚಿಲೀ ಚಿಲೀ ಚಿಲೀ ಎಂದು ಗಜ್ಜೆ ಸಪ್ಪಳದಂತೆ ಸಿಳ್ಳಿನ ರಾಗಾಲಾಪ ಮಾಡುವುದು. ಕೆಲವೊಮ್ಮ ಗದ್ದೆಯ ಮೇಲೆ ಹಾದು ಹೋಗುವ ಟೆಲಿಫೋನ್ ವಾಯರುಗಳಿಗೆ , ವಿದ್ಯತ್ ತಂತಿಗಳಿಗೆ ಸಾಲಾಗಿ ಗೂಡನ್ನು ಕಟ್ಟುವುದು. ಎತ್ತರವಾದ ಹುಲ್ಲು ಬೆಳೆಯುವ ಹುಲ್ಲುಗಾವಲಿನಲ್ಲು ಇರುವುದು.
ತೆಂಗಿನ ಮರದ ತುಂಬಾ ಗೂಡನ್ನುಕಟ್ವು ಇರುವುದು ಗೀಜುಗಗದ್ದೆಗಳಿಗೆ ಕ್ರಮಿನಾಶಕ ಸಿಂಪಡಿಸುವುದರಿಂದ ಇದರ ಸಂಖೆ ಕಡಿಮೆಯಾಗುತ್ತಿದೆ. ಮನೆ ಗುಬ್ಬಿಯಂತೆ ಅಳಿವಿನಂಚಿನಲ್ಲಿದೆ . ಅದನ್ನು ಉಳಿಸುವ ಹೊಣೆ ನಮ್ಮ ನಿಮ್ಮೆಲ್ಲರ ಮೇಲಿದೆ.
ನೇಕಾರ ಹಕ್ಕಿಯ ಸುಂದವಾದ ಗೂಡು
ಗೂಡು
ಹಕ್ಕಿ ಮತ್ತು ಗೂಡು ಗಂಡು ಗೂಡನ್ನು ನೈಯುತ್ತಿರುವುದು

No comments:
Post a Comment