Tuesday, October 8, 2013

Small Whisling Duck- Dendrocygna javanica

Small whisling Duck -ಸಿಳ್ಳಿನ ಚಿಕ್ಕ ಬಾತು - ತನ್ನ ಮರಿಗಳೊಂದಿಗೆ ಗಂಡು ಹೆಣ್ಣು ಸುಮಾರು 20 ಮರಿಗಳಿದ್ದವು -ಸುಮಾರು 42 ಸೆಂ.ಮೀ ದೊಡ್ಡದಾದ ತಿಳಿ ಕಂದುಬಣ್ಣದ ಬಾತುಕೋಳಿ.ಬಾಲದ ಮೇಲಗಡೆ ರೆಕ್ಕೆ ಚಾಕಲೇಟ ಬಣ್ಣ. ಪುಕ್ಕದ ಅಡಿಯಲ್ಲಿ ತಿಳಗೆಂಪು ಬಣ್ನ ,ರೆಕ್ಕೆಯ ಮೇಲ್ಭಾಗ ಬೂದು ಕಂದುಬಣ್ಣ, ಬೂದು ಬಣ್ಣದ ಕೊಕ್ಕು , ಜಾಲಪಾದ ಇದ್ದು ಹೇಟೆ ಕೋಳಿಯಷ್ಟು ದೊಡ್ಡದಾಗಿರುವುದು.  ಕೊಳ, ಹಿನ್ನೀರು , ಕೆಸರು ಗದ್ದೆ, ಕಮಲ , ಕವಳೆ ಹುಲ್ಲು ಜೊಂಡು ತುಂಬಿರುವ ಜಾಗದಲ್ಲಿ ಇರುವುದು. 180 ರಿಂದ 200 ರ ಗುಂಪಿನಲ್ಲೂ ಕಾಣುವುದು. ಕೆಲವೊಮ್ಮೆ 6
, 8, 10 ಗುಂಪಿನಲ್ಲು ಇರುವುದು. ಗಂಡು ಹೆಣ್ಣು  ಎರಡೂ ಒಂದೇ ತರಹದ ಬಣ್ಣ. ಮರಿ ಚಿಕ್ಕದಾಗಿರುವಾಗ ಕಪ್ಪು ಹಾಗೂ ಬಿಳಿ ಚುಕ್ಕೆ ಇರುವುದು. ಬೇಸಿಗೆಯಲ್ಲಿ ಹಸಿರು ಪಾಚಿ, ಕಮಲ ಹುಲ್ಲು ಜೊಂಡು ಇರುವ ದೊಡ್ಡ ಕೊಳಗಳಲ್ಲಿ ಇದ್ದರೆ, ಮಳೆಗಾಲದಲ್ಲಿ ನೀರು ತುಂಬಿರುವ ಗದ್ದೆ , ನೀರಿನ ಹೊಂಡಗಳಲ್ಲಿ ಕಾಣುವುದು. ಸ್ಥಳೀಯವಾಗಿ ವಲಸೆ ಹೊಗುವವು. ಸದಾ ಮೆಲು ಸಿಳ್ಳು ವ್ಹೀ,ವ್ಹೀಎಂದು ಕೂಗುತ್ತಿರುವುದು. ಇದರಿಂದಇದಕ್ಕೆ ಸಿಳ್ಳಿನ ಬಾತು ಎಂಬ ಹೆಸರು. ಮಲ್ ರೆಕ್ಕೆ ಮುಚ್ಚುವ ಭಾಗದಲ್ಲಿ ತಿಳಿ ಗುಲಾಬಿ ಕೆಂಪು ಬಣ್ಣ ಪುಕ್ಕದ ತುದಿಯವರೆಗೆ ಕಾಣುವುದು ಇದು ಇಡೀ ಭಾರತದ ತುಂಬಾ ಕಾಣುವುದು. ಜಕನಾ, ಕೂಟ್ ಮೊದಲಾದ ನೀರ ಹಕ್ಕಿಯ ಜೊತೆ ಇರುವುದು.ಕಮಲದ ದಂಟು, ಹಸಿರು ಪಾಚಿ, ಚಿಕ್ಕ ಹುಳು, ಚಿಗುರೆಲೆ ಇದರ ಆಹಾರ. ಕೆಲವೊಮ್ಮೆ ಭತ್ತದ ಗದ್ದೆಗಳಿಗೂ ಆಹಾರಕ್ಕಾಗಿ ಬರುವುದುಂಟು. ಜೂನ್ ದಿಂದ ಅಕ್ಟೋಬರ ವೇಳೆಯಲ್ಲಿ ಹುಲ್ಲು ಜೊಂಡು, ಕಮಲದ ಎಲೆಗಳ ಗೂಡು ನಿರ್ಮಿಸುವುದು. ಅಲ್ಲಿ 7ರಿದ 12 ಅದಕ್ಕಿಂತ ಹೆಚ್ಚು ದಂತ ವರ್ಣದ ಬಿಳಿ ಮೊಟ್ಟಿ ಇಡುವುದು. ಗಂಡು ಹೆಣ್ಣು ಎರಡೂ ಮರಿಗಳ ಪೋಷಣೆಯಲ್ಲಿ ಪಾಲ್ಗೊಳ್ಳುವುದು.ಉಪ್ಪಿನ ಪಟ್ಟಣ, ಮೂರೂರು, ಕುಮಟಾ ಹೊನ್ನಾವರದ ಭಾಗದಲ್ಲೂ ಮಳೆಗಾಲ ಬೇಸಿಗೆಯಲ್ಲಿ ಅವಲೋಕಿಸಿದೆ.
ಈ ಚಿತ್ರ ಮತ್ತು ವೀಡಿಯೋದಲ್ಲಿ ಗಂಡು ಹೆಣ್ಣು  ಮರಿಗಳೊಂದಿಗೆ ವಿಹರಿಸುತ್ತಿವೆ.



No comments:

Post a Comment