Sunday, October 6, 2013

Birds of Muroor: long tailed scarletminivet-Pericrocotus ethologus

Birds of Muroor: long tailed scarletminivet-Pericrocotus ethologus: ಉದ್ದು ಬಾಲದ ಗುಲಗುಂಜಿ ಹಕ್ಕಿ-ಸ್ಕಾರಲೆಟ್ ಮಿನವೇಟ- 


ಪಿಕಳಾರ ಅಥವಾ ಬುಲ್-ಬುಲ್ ಗಾತ್ರದ ಹಕ್ಕಿ ಸುಮಾರು 18 ಸೆಂ.ಮೀ ಉದ್ದ ಇರುವುದು.ಕೆಂಡದಂತೆ ಚೆಂಪಾಗಿ ಹೊಳೆಯುವ ಮೈಬಣ್ಣ. ಕಪ್ಪು ರೆಕ್ಕೆಯಲ್ಲಿ ಕೆಂಪು ಮಚ್ಚೆ ಇದೆ. ಕಪ್ಪಾದ ಬಾಲದಲ್ಲಿ ಕೆಂಪು ರೇಖೆಗಳಿವೆ.ಇದು ಗಂಡು ಹಕ್ಕಿ. ಗಂಡು ಕೆಂಪು  ಕಿತ್ತಳೆ ಬಣ್ಣ ಹೊಂದಿದ ಬಾಗಗಳಲ್ಲಿ ಹೊಳೆವ ಹಳದಿ ಬಣ್ಣ ಹೆಣ್ಣು ಹಕ್ಕಿಗೆ ಇದೆ. ಹಳದಿ ಮೈಬಣ್ಣ, ಬೂದು ತಲೆಭಾಗ ಎದೆ ಹೊಟ್ಟೆ ಹಳದಿ ಬಣ್ಣ ಹೆಣ್ಣು ಹಕ್ಕಿಗೆಇರುವುದು.
ಇವು ಎರಡು ಅಥವಾ ನಾಲ್ಕರ ಗುಂಪಿನಲ್ಲಿ ಇರುವುದು ಮರಗಳ ತುದಿಯಲ್ಲಿ ಹಾರುತ್ತಾ ಕೀಟಗಳನ್ನು ಹಾಗೂ ಕಂಬಳಿ ಹುಳಗಳನ್ನು ಹಿಡಿದು ಅದನ್ನು ಮರದ ಟೊಂಗೆಗಳಿಗೆ ಬಡಿದು ಸಾಯಿಸಿ ತಿನ್ನುವುದು. ಎರಡು ಮೂರು ವರುಷಗಳಿಂದ ಮಲೆನಾಡಿನ ಪ್ರದೇಶಗಳಲ್ಲಿ ಗುರುತಿಸಿದೆ. ಶಿರಸಿ, ಕುಮಟಾ, ಯಲ್ಲಾಪುರ ಸಾಗರ ಸಿದ್ದಾಪುರ ಭಾಗಗಳಲ್ಲೂ ಇವೆ. ಸಪ್ಟಂಬರ್- ಅಕ್ಟೋಬರ್ ತಿಂಗಳಲ್ಲಿ ಹೆಚ್ಚಾಗಿ ಕಾಣಿಸುವುದು. ಇದರ ಜೊತೆ ಹಾರು ಕೀಟಗಳನ್ನು ತಿನ್ನುವ ಡ್ರೇಂಗೋ ಸಹ ಇರುವುದು.  ಕಂಬಳಿ ಹುಳು ಹಾಗೂ ಕೀಟಗಳಿರುವ ಮತ್ತಿ, ನೇರಳೆ, ಜಂಬೆ ಮುಂತಾದ ದೊಡ್ಡ ಮರಗಳಿರುವ ಭಾಗಗಳಲ್ಲಿ ಹಾರಾಡುತ್ತಾ ಸ್ವೀಸ್ವೀ ಎಂದು ಮೆಲುದನಿಯಲ್ಲಿ ಕೂಗುತ್ತಾ ತನ್ನ್ನಇರುವನ್ನು ಸೂಚಿಸುವುದು.ಬಣ್ಣ ವ್ಯತ್ಯಾಸವನ್ನು ಆಧರಿಸಿ 5 ಉಪಗುಂಪಾಗಿ ವಿಂಗಡಿಸಲಾಗಿದೆ. ಮಲಬಾರ್ ಮಿನವೇಟ್, ಚಿಕ್ಕ ಮಿನವೇಟ್, ಉದ್ದ ಬಾಲದ ಮಿನವೇಟ್, ಕೀಟಾಹಾರಿ ಅರಣ್ಯ ಪಕ್ಸಿಗಳಾದಇದನ್ನು  ಪ್ರತ್ಯೇಕವಾಗಿ ವಿಂಗಡಿಸಿ ಕ್ಯಾಮಫೆಜಿಡೇ ಕುಟುಂಬಕ್ಕೆ ಸೇರಿಸಲಾಗಿದೆ. ಇವು
ಕರ್ನಾಟಕ, ಗಿಜರಾತ್ ರಾಜಸ್ಥಾನ , ಮಧ್ಯಪ್ರದೇಶ, ಒರಿಸಾ, ಚೆನೈ, ಮಹಾರಾಷ್ಟ್ರ ಭಾಗಗಳಲ್ಲಿ ಪಸರಿಸಿವೆ.ತರೋಜಿ ಮಿನವೇಟ ಹಿಮಾಲಯ ಪ್ರದೇಶದಿಂದ ಕೇರಳದ ವರೆಗೆ ಪಸರಿಸಿವೆ. ಆಶ್ಯೀ ಮಿನವೇಟ್ ಅಂಡಮಾನ್ ನಿಕೋಬಾರಕ್ಕೆ ಸೀಮಿತವಾಗಿದೆ.
ಮರಗಳ ತುದಿಯಲ್ಲಿ ತುಂಬಾ ಎತ್ತರದಲ್ಲಿ ಭುಮಿಗೆ ನೇರವಾಗಿರುವ ಟೊಂಗೆಗಳ ಮೇಲೆ ಬಟ್ಟಲಾಕಾರದ ಗೂಡು ಕಟ್ಟುವುದು.  ನಾರು ಜೇಡರ ಬಲೆ ಸಂಗ್ರಹಿಸಿ ತುಂಬಾ ಸುಕ್ಷ್ಮವಾದ  ಅಚ್ಚುಕಟ್ಟಾದ ಗೂಡನ್ನು ಮಾಡುವುದು.
ಇದರಲ್ಲಿ ಹಸಿರು ಛಾಯೆಯ ಬಿಳಿಬಣ್ಣದ  3-4 ತತ್ತಿಗಳನ್ನು ಇಡುವುದು. ತತ್ತಿಯ ಅಗಲ ತುದಿಯಲ್ಲಿ ಕೆಂದೆಂದು ಚುಕ್ಕಿಗಳಿವುದು. ಗಂಡು ಹೆಣ್ಣು ಎರಡೂ ಮರಿಯ ಪಾಲನೆ ಪೋಷಣೆಯಲ್ಲಿ ಪಾಲ್ಗೊಳ್ಳುವುದು.
ಉದ್ದಬಾಲದ ಮಿನವೇಟ್ ಮತ್ತು ಚಿಕ್ಕ ಮಿನವೇಟ ಕರ್ನಾಟಕದ ಹಕ್ಕಿ.

No comments:

Post a Comment