Tuesday, May 7, 2013

Monarch Blue flycatcher feeding young one

ಮಂಜುಮನೆ ಹತ್ತಿರ ಗೂಡು ಕಟ್ಟಿದ್ದು ಸುಮಾರು ೩ ಅರ್ಧಫೂಟು ಎತ್ತರದಲ್ಲಿ ನಂಜಟ್ಳೆ ಗಿಡದ ಕವರಿನಲ್ಲಿ ಕಟ್ಟಿದೆ. ತನ್ನ ಗೂಡು ಪರಿಸರಕ್ಕೆ ಹೊಂದುವಂತೆ ಮಾಡಲು ಬಿಳಿ ಬಿಂಜಲು (ಜೇಡರ ಬಲೆ )ತಂದು ಗೂಡಿನ ಸುತ್ತ ಕೆಳ ಭಾಗದಲ್ಲಿ ಅಂಟಿಸಿದೆ . ಗೂಡಿ ಸೈಸ್, ಆಳ, ತ್ರಿಜ್ಯ ಅಳತೆ ಮಾಡಿದೆ. ಮೂರು ಪಿಂಕ್ ಕಲರ ಮೊಟ್ಟೆ ಇದೆ. ಲೈಟ್ ಬ್ರೌನ್ ಚಿಕ್ಕ ಚುಕ್ಕೆ ಮೊಟ್ಟಯ ಮೇಲಿದೆ ೩ ಮೊಟ್ಟೆ ಮರಿಯಾಗಿದೆ ಗಂಡು, ಹೆಣ್ಣು ಸರತಿಯಂತೆ ಮರಿಯ ಯೋಗಕ್ಷೇಮ ನೋಡುತ್ತದೆ. ಗುಟುಕು ಕೊಡುವುದು, ರೆಕ್ಕೆ ಹುಳ ತಂದು ಮರಿಗೆ ಕೊಡುವುದು. ಮರಿ ಅದನ್ನು ತಿಂದಾದ ಮೇಲೆ ಉಳಿದ ರೆಕ್ಕೆ ಭಾಗ ಗೂಡಿನಲ್ಲ ಉಳಿಯದಂತೆ ಕೊಳೆಯಾಗದಂತೆ ಅದನ್ನು ಹೊರಗೆ ಹಾಕುವುದು. ಆ ರೆಕ್ಕೆ ತುಂಡು ಗೂಡಿನಲ್ಲೆ ಇದ್ದರೆ ಇರುವೆ ಬಂದು ಮರಿಗೆ ತೊಂದರೆ ಯಾಗುವುದನ್ನು ತಪ್ಪಿಸಲು ಹೀಗೆ ಮಾಡುವುದು. ಮರಿಗಳಿಗೆ ಬಿಸಿಲಿನ ತಾಪ ಹೆಚ್ಚಾಗದಂತೆ ಆಗಾಗ ಹೋಗಿ ಹತ್ತಿರದಲ್ಲೆ ಇರುವ ನೀರಿನ ಹೊಂಡದಲ್ಲಿ ಸುಮಾರು ೧ ವರೆ ಫೂಟ್ ಎತ್ತರದ ಟೊಂಗೆಯಿಂದ ನೀರಿಗೆ ಜಿಗಿದು ಸ್ನಾನಮಾಡಿ ಬಂದು,  ಒದ್ದೆರೆಕ್ಕೆ  ಶೈತ್ಯ  ಮರಿಗೆಳಗೆ ಸಿಗುವಂತೆ ಗೂಡಿನಲ್ಲಿ ಕುಳಿತುಕೊಳ್ಳುವುದು. ಡ್ರಾಂಗೋ, ಮತ್ತು ಎಷಿಯನ್ ಬ್ಲೂ ಪೇರಿ ಬರ್ಡ ಹತ್ತಿರ ಬಂದಾಗ ಮರಿ ರಕ್ಷಣೆಗೆ ತಂದೆ-ತಾಯಿ ಹಕ್ಕಿ ಧಾವಿಸಿ  ಅದನ್ನು ಓಡಿಸುವುದು 
2 1 -4 -2 0  1 3 ಮತೊಂದು ಗೂಡು ಕಟ್ಟಲು ಆರಂಭಿಸಿದೆ. ಗಂಡು ಹೆಣ್ಣು ಸೇರಿ ಗೂಡು ಕಟ್ಟುತ್ತಿದೆ. ಹೆಣ್ಣು ಹಕ್ಕಿಗೆ ಗಂಡು ಬೇಕಾದ ಗೂಡುಕಟ್ಉವ ಸಾಮಗ್ರಿ ತಂದು ಕೊಡುವುದು , ಒಳ್ಳೆಯ ಗೂಡು ಕಟ್ಟುವ ಸಾಮಗ್ರಿ ಕಂಡಾಗ ಚೀಕ್-ಚೀಕ್-ಚೀಕ್ ಎಂದು ಕೂಗಿನ ಮೂಲಕ ಹೆಣ್ಣಿಗೆ ಸಂದೇಶ ರವಾನಿಸುವುದು.

ಸಿದ್ಧವಾಗುತ್ತಿರುವ ಗೂಡು

ಗಂಡು ಹೆಣ್ಣು ಜೊತೆಗೂಡಿ ಗೂಡು ಕಟ್ಟುತ್ತಿರುವುದು. ಇನ್ನೂ ಮೊಟ್ಟ  ಇಟ್ಟಿಲ್ಲ. ಮುಂದಿನ  ಅಧ್ಯಯನಕ್ಕೆ ಸಿದ್ಧತೆ ನಡೆಸಿರುವೆ. ಇದು ಸ್ನಾನ ಮಾಡುವ ಸ್ಥಳ ಿಲ್ಲಿಂದ ಸುಮಾರು 100 ಫೂಟು ದೂರದಲ್ಲಿದೆ. ನೀರ ಹೊಂಡದಮೇಲೆ ಚಾಚಿದ ಟೊಂಗೆಯ ಮೇಲೆ ಕುಳಿತು ನೀರಿಗೆ ಜಿಗಿಯುವುದು ಈ ಟೊಂಗೆಯ ೆತ್ತರ ನೀರಿನ ಮೇಲ್ಭಾಗದಿಂದ 18  ಇಂಚು ಎತ್ತರ ಇದೆ. ಈ ಸಲ ಗೂಡು ಕಟ್ಟಿದ ಸ್ಥಳ:  ವಾಟೆಕೆರೆ ಕಳೆದ ವರ್ಷ ಸಿಕ್ಕಿದ್ದು ಕಲ್ಲಬ್ಬೆಯ
ಹೊಡೆಮಕ್ಕಿ ಹತ್ತಿರ  ಅಡಿಕೆ ತೋಟದಲ್ಲಿ

Sunday, May 5, 2013

Tickell’s Blue Flycatcher (Cyornis tickelliae)   R
[ಟಿಕಲ್ಸ್ ಬ್ಲೂ ಫ್ಲೈಕ್ಯಾಚರ್] - ಕೆಂಪು ಕೊರಳ (ಹುಳ ಗುಳಕ)
ಗುಬ್ಬಚ್ಚಿ ಗಾತ್ರದ ಹಕ್ಕಿ. 14 ಸೆಂ.ಮೀ ಉದ್ದ ಇದೆ. ಕಪ್ಪು ಮಿಶ್ರಿತ ನೀಲಿ ಬಣ್ಣದ ಮೈ. ಮುಂದಲೆ, ರೆಕ್ಕೆಯ ಬುಡದಲ್ಲಿ ಆಕಾಶ ನೀಲಿ ಬಣ್ಣದ ಪಟ್ಟೆ ಇದೆ. ಕುತ್ತಿಗೆ ಮತ್ತು ಎದೆ ಕಿತ್ತಳೆ ಬಣ್ಣ. ಎದೆಯ ಭಾಗದಿಂದ ಕಿತ್ತಳೆ ಬಣ್ಣ ತಿಳಿಯಾಗುತ್ತಾ ಬಂದಿದೆ. ಹೊಟ್ಟೆ ಭಾಗ ಬಿಳಿ. ಬಾಲದ ಕೆಳಗಡೆ ಕಿತ್ತಳೆ ಬಣ್ಣ. 
ಉದುರೆಲೆ ಕಾಡು, ಅರೆಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಾಣುವುದು. ಪಶ್ಚಿಮ ಘಟ್ಟದ ತಪ್ಪಲಲ್ಲಿ ಕಾಣ ಸಿಗುವುದು. ಮರಗಳ ಕೊಂಬೆಗಳಲ್ಲಿ ನೆಟ್ಟಗೆ ಕುಳಿತುಕೊಳ್ಳುವುದು. ಹರಿಯುವ ನೀರ್ಝರಿಯ ಆಸು ಪಾಸು ಬಾಲ ಕುಣಿಸುತ್ತಾ ಹುಳ ಹಿಡಿಯುವುದು. ಸಣ್ಣದಾಗಿ ಹರಿಯುವ ನೀರಿನಲ್ಲ್ಲಿ ಬಾಲ ಕುಣಿಸುತ್ತಾ ಪಿಕಳಾರ ಹಕ್ಕಿಗಳಂತೆ ಸ್ನಾನ ಮಾಡುವುದು. ಇದೊಂದು ವಿರಳ ಹಕ್ಕಿ. ನಿಶ್ಚಿತ ನೆಲೆ ಮಾಡಿಕೊಂಡಿರುವುದಿಲ್ಲ. ರೆಕ್ಕೆ ನೊಣಗಳನ್ನು ಹಿಡಿಯುತ್ತಾ ಮುಂದೆ ಮುಂದೆ ಸಾಗುವುದು.
ಸಿಕ್ಕಿಂ, ನೇಪಾಳ, ಆಸಾಮ, ಉತ್ತರ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಚಿಟಗಾಂ. ಹಿಮಾಲಯ, ಕೇರಳ ಮುಂ. ಭಾಗದಲ್ಲಿ ಕಾಣುವುದು.
ಬಣ್ಣದ ವ್ಯತ್ಯಾಸದಿಂದಾಗಿ  ಭಾರತದ ಜಾತಿ ಮತ್ತು ಶ್ರೀಲಂಕಾದ ಜಾತಿ ಎಂದು ಎರಡು ಉಪಜಾತಿಗಳಾಗಿ ವಿಂಗಡಿಸಲಾಗಿದೆ ಮೆಲು ದನಿಯ ಸಿಳ್ಳಿನ ರಾಗಾಲಾಪನೆ ಇದರ ಕೂಗು. ಇದರ ಮೆಲು ದನಿಯ ಸಿಳ್ಳಿನಿಂದ ಹಕ್ಕಿ ಇರುವ ಜಾಗ ಗುರುತಿಸಬಹುದು.
ಕೀಟಗಳೇ ಪ್ರಧಾನ ಆಹಾರ ಮಾರ್ಚ-ಜುಲೈ ಅಥವಾ ಮಾರ್ಚ ದಿಂದ ಅಗಸ್ಟ ಸಮಯದಲ್ಲಿ ಮರಿ ಮಾಡುವುದು. ಮರದ ಪೊಟರೆ ಅಥವಾ ಮಣ್ಣಿನ ಬಿರುಕುಗಳಲ್ಲಿ  ಹುಲ್ಲು ಕಡ್ಡಿ, ನಾರು ಉಪಯೋಗಿಸಿ ಬಟ್ಟಲಾಕಾರದ ಗೂಡು ಕಟ್ಟುವುದು. 4-5 ತಿಳಿ ಮಣ್ಣು ಬಣ್ಣ ಅಥವಾ ಹಸಿರು ಛಾಯೆಯ ಮಣ್ಣು ಕೆಂಪು ಬಣ್ಣ ಮೊಟ್ಟೆ ಇಡುವುದು ಮೊಟ್ಟೆಯಮೇಲೆ ಕೆಂಪು ಮಿಶ್ರಿತ ಕಂದು ಬಣ್ಣದ ಚುಕ್ಕೆಗಳಿವೆ. ಎರಡು ಮೂರು ವರ್ಷಗಳಿಂದ ಉ.ಕ. ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ವಾಟೆಕೆರೆ ಹತ್ತಿರ 2012-13ರ ಅವಧಿಯಲ್ಲಿ ಒಂಟಿಯಾಗಿ ಅಥವಾ ಗಂಡು ಹೆಣ್ಣು ಜೋಡಿಯಾಗಿ ಕಾಣಿಸಿದೆ. ಹರಿಯುವ ಸಣ್ಣ ನೀರಿನಲ್ಲಿ ಬಾಲ ಕುಣಿಸುತ್ತಾ ಸ್ನಾನ ಮಾಡುವುದನ್ನು ಅಧ್ಯಯನ ಮಾಡಿದೆ. 

Asian Paradise-Flycactcher (Terpsiphone paradisi ) RM
[ಪ್ಯಾರಡೈಸ್ ಫ್ಲೈಕ್ಯಾಚರ್] - ರಿಬ್ಬನ್ ಬಾಲದ ಹಕ್ಕಿ-ಬಾಲದಂಡೆ ಹಕ್ಕಿ) (ಹುಳ ಗುಳಕ)
ಪಿಕಳಾರದಷ್ಟು ದೊಡ್ಡದಾದ ಹಕ್ಕಿ . ಬಾಲ 50 ಸೆಂ.ಮೀ ಉದ್ದವಾಗಿದೆ. ಬಾಲ ಬಿಟ್ಟು ಪಕ್ಷಿಯ ಉದ್ದ 20 ಸೆ.ಮೀ. ಇದೆ. ಗಂಡು- ಮುಖ್ಯವಾಗಿ ಬಿಳಿ ಬಣ್ಣ. ನೀಲಿಗಪ್ಪು ಬಣ್ಣದ ಹೊಳೆಯುವ ತಲೆ-ಜುಟ್ಟು . ಬಿಳಿ ರೆಕ್ಕೆಯ ಮೇಲೆ ಕಪ್ಪು ಮಚ್ಚೆ ಇದೆ. ಪುಕ್ಕದಲ್ಲಿ ಎರಡು ಉದ್ದವಾದ ಬಾಲ, ಈ ಬಾಲ ಹಸಿರು ಹಿನ್ನೆಲೆಯಲ್ಲಿ ಬಿಳಿಯ ಮಿಂಚು ಸರಿದಂತೆ ಕಾಣುವುದು. ಹೆಣ್ಣು ಹಕ್ಕಿ ಮಣ್ಣುಗೆಂಪು ಮೈಬಣ್ಣ. ಕುತ್ತಿಗೆಯ ಮುಂಭಾಗ ತಿಳಿ ಬೂದುಬಣ್ಣ ಹೊಟ್ಟೆಭಾಗ ಬಿಳಿ. ತಲೆ ಜುಟ್ಟು ಹೊಳೆವ ಕಪ್ಪು ನೀಲಿಬಣ್ಣ. ಬಾಲ ಉದ್ದವಾಗಿದೆ. ಚಿಕ್ಕದಾಗಿರುವಾಗ ಗಂಡು ಹೆಣ್ಣು ಒಂದೇರೀತಿ ಇರುವುದು. ಪ್ರೌಢಾವಸ್ಥೆಗೆ ಬಂದಾಗ ಗಂಡು ಹಕ್ಕಿ ಮೈಬಣ್ಣ ಬಿಳಿಯಾಗಿ ಬದಲಾಗುವುದು. ಹೆಣ್ಣು ಇಟ್ಟಿಗೆಗೆಂಪು ಬಣ್ಣದಲ್ಲೇ ಇರುವುದು. ಗಂಡು ಹಕ್ಕಿಯಲ್ಲಿ ಉತ್ಪನ್ನ ವಾಗುವ ಚೋದರ ದ್ರವ (ಹಾಮರ್ೋನ್) ಬಿಳಿ ಬಣ್ಣವಾಗಿ ಬದಲಾಗಲು ಕಾರಣ ಎಂಬುದು ತಜ್ಞರ ಅಭಿಪ್ರಾಯ. ಶ್ರೀಲಂಕಾದಲ್ಲಿ ವಾಸಿಸುವ ಈ ಜಾತಿಗೆ ಸೇರಿದ ಹಕ್ಕಿ ಪ್ರೌಢಾವಸ್ಥೆಗೆ ಬಂದಾಗಲೂ ಗಂಡು ಇಟ್ಟಿಗೆ ಕೆಂಪು ಬಣ್ಣ ಹಾಗೆ ಇರುವುದು.  ಒಂಟಿಯಾಗಿ ಮರಗಳು ದಟ್ಟವಾಗುರುವಲ್ಲಿ ಇರುವುದು. ಬಿದಿರು ತೋಪು , ಉದುರೆಲೆ ಕಾಡು, ತೋಟಪಟ್ಟಿಗಳಲ್ಲಿ, ಗ್ರಾಮಾಂತರ ಹಳ್ಳಿ ಪ್ರದೇಶಗಳಲ್ಲಿ  ಕಾಣುವುದು. ಸುಮಾರು 2000 ಮೀ. ಎತ್ತರದ ಹಿಮಾಲಯ ಪ್ರದೇಶಗಳ ವರೆಗೂ ವ್ಯಾಪಿಸಿದೆ. ಇದರ ಪ್ರಮುಖ ಆಹಾರ ರೆಕ್ಕೆಗಳಿರುವ ಕೀಟ, ಚೀರ್ ಚೀರ್ ಎಂದು ಕೂಗುತ್ತಾ ಈ ಕೀಟಗಳನ್ನು ಹಾರಿಕೆಮಧ್ಯದಲ್ಲಿಯೇ ಹಿಡಿದುತಿನ್ನುವ ಚುರುಕುತನ ಈ ಪಕ್ಷಿಗಳಿಗಿದೆ. ಗಿರಕಿ ಹೊಡೆಯುವುದು, ಬಾಲವನ್ನು ಆ ಕಡೆ ಈ ಕಡೆ ಹಾರಿಸುವುದು, ಚುರುಕಾಗಿ ಕಣ್ಣಿಗೆ ಕಾಣದಂತೆ ವೇಗವಾಗಿ ಕೆಳಕ್ಕೆ ಹಾರುವುದು. ಚೀರ್ ಚೀರ್ ಎಂದು ಕೂಗುತ್ತಾ ತಾನು ಸ್ನಾನ ಮಾಡುವ ಸಮಯವನ್ನು ಸೂಚಿಸುವುದು. ನೀರಿನ ಹೊಂಡಗಳ ಮೇಲೆ ಚಾಚಿರುವ ಟೊಂಗೆಗಳ ಮೇಲಿಂದ ನೀರಿಗೆ ಜಿಗಿದು ಸ್ನಾನ ಮಾಡಿ ಪೊದೆಗಳ ಸಂದಿಯಲ್ಲಿ ಕುಳಿತು ರೆಕ್ಕೆ ಬಡಿದು ರೆಕ್ಕೆ ಒಣಗಿಸಿಕೊಳ್ಳುವುದು. ಕನಿಷ್ಟ 3 ಸಲ ಹೀಗೆ ಜಿಗಿದು ಸ್ನಾನ ಮಾಡುವುದು. ನಿಖರವಾದ ಸಮಯಕ್ಕೆ ಅದೇ ಸ್ಥಳದಲ್ಲಿ ಸ್ನಾನಮಾಡುವ ನಿಖರತೆೆ ಅಧ್ಯಯನದಿಂದ ತಿಳಿದಿದೆ. ಕೇಸರಿ ಕುತ್ತಿಗೆ ಹುಳ ಗುಳಕ ( ಟಿಕಲ್ಸ ಬ್ಲು ಪ್ಲಾಐಕ್ಯಾಚರ್) ಡ್ರಾಂಗೋ ಹೆಚ್ಚಾಗಿ ಇದರ ಜೊತೆ ಕಾಣುವುದು. ಹಾರುವಾಗ ಕಾಣುವ ಇದರ ಬಾಲದ ಝಲಕನ್ನು ನೋಡಿ ಇದನ್ನು ರಿಬ್ಬನ್ ಬಾಲದ ದಿವ್ಯ ಪಕ್ಷಿ ಎಂದು ಕರೆಯುವುದುಂಟು. 
ಫೆಬ್ರವರಿಯಿಂದ ಜುಲೈ ಮರಿಮಾಡುವ ಕಾಲ. ಗಿಡಗಳ ವಿಆಕಾರದ ಕವೆಗಳಲ್ಲಿ ಬಟ್ಟಲಿನಾಕಾರದಲ್ಲಿ ಸ್ವಲ್ಪ ಉದ್ದವಾದ ಗೂಡು ಕಟ್ಟುವುದು.  ಗೂಡನ್ನು ಹುಲ್ಲು, ಬೇರು ನಾರು ಜೇಡರ ಬಲೆಗಳಿಂದ ಸುಂದರವಾಗಿ ಕಟ್ಟುತ್ತದೆ.  3-5 ತತ್ತಿಗಳನ್ನು ಇಡುವುದು. ಮೊಟ್ಟೆ ತಿಳಿ ಹಳದಿ ಕೆಂಪು ಬಣ್ಣ ಇದ್ದು ಮಣ್ಣು ಕೆಂಪು ಚುಕ್ಕೆಗಳಿಂದ ಆವರಿಸಿದೆ.  ಗೂಡು ಕಟ್ಟುವುದು, ಕಾವು ಕೊಡುವುದು, 

[ಟಿಕಲ್ಸ್ ಬ್ಲೂ ಫ್ಲೈಕ್ಯಾಚರ್] - ಕೆಂಪು ಕೊರಳ (ಹುಳ ಗುಳಕ)

Tickell’s Blue Flycatcher (Cyornis tickelliae)   R
[ಟಿಕಲ್ಸ್ ಬ್ಲೂ ಫ್ಲೈಕ್ಯಾಚರ್] - ಕೆಂಪು ಕೊರಳ (ಹುಳ ಗುಳಕ)
ಗುಬ್ಬಚ್ಚಿ ಗಾತ್ರದ ಹಕ್ಕಿ. 14 ಸೆಂ.ಮೀ ಉದ್ದ ಇದೆ. ಕಪ್ಪು ಮಿಶ್ರಿತ ನೀಲಿ ಬಣ್ಣದ ಮೈ. ಮುಂದಲೆ, ರೆಕ್ಕೆಯ ಬುಡದಲ್ಲಿ ಆಕಾಶ ನೀಲಿ ಬಣ್ಣದ ಪಟ್ಟೆ ಇದೆ. ಕುತ್ತಿಗೆ ಮತ್ತು ಎದೆ ಕಿತ್ತಳೆ ಬಣ್ಣ. ಎದೆಯ ಭಾಗದಿಂದ ಕಿತ್ತಳೆ ಬಣ್ಣ ತಿಳಿಯಾಗುತ್ತಾ ಬಂದಿದೆ. ಹೊಟ್ಟೆ ಭಾಗ ಬಿಳಿ. ಬಾಲದ ಕೆಳಗಡೆ ಕಿತ್ತಳೆ ಬಣ್ಣ. 
ಉದುರೆಲೆ ಕಾಡು, ಅರೆಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಾಣುವುದು. ಪಶ್ಚಿಮ ಘಟ್ಟದ ತಪ್ಪಲಲ್ಲಿ ಕಾಣ ಸಿಗುವುದು. ಮರಗಳ ಕೊಂಬೆಗಳಲ್ಲಿ ನೆಟ್ಟಗೆ ಕುಳಿತುಕೊಳ್ಳುವುದು. ಹರಿಯುವ ನೀರ್ಝರಿಯ ಆಸು ಪಾಸು ಬಾಲ ಕುಣಿಸುತ್ತಾ ಹುಳ ಹಿಡಿಯುವುದು. ಸಣ್ಣದಾಗಿ ಹರಿಯುವ ನೀರಿನಲ್ಲ್ಲಿ ಬಾಲ ಕುಣಿಸುತ್ತಾ ಪಿಕಳಾರ ಹಕ್ಕಿಗಳಂತೆ ಸ್ನಾನ ಮಾಡುವುದು. ಇದೊಂದು ವಿರಳ ಹಕ್ಕಿ. ನಿಶ್ಚಿತ ನೆಲೆ ಮಾಡಿಕೊಂಡಿರುವುದಿಲ್ಲ. ರೆಕ್ಕೆ ನೊಣಗಳನ್ನು ಹಿಡಿಯುತ್ತಾ ಮುಂದೆ ಮುಂದೆ ಸಾಗುವುದು.
ಸಿಕ್ಕಿಂ, ನೇಪಾಳ, ಆಸಾಮ, ಉತ್ತರ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಚಿಟಗಾಂ. ಹಿಮಾಲಯ, ಕೇರಳ ಮುಂ. ಭಾಗದಲ್ಲಿ ಕಾಣುವುದು.
ಬಣ್ಣದ ವ್ಯತ್ಯಾಸದಿಂದಾಗಿ  ಭಾರತದ ಜಾತಿ ಮತ್ತು ಶ್ರೀಲಂಕಾದ ಜಾತಿ ಎಂದು ಎರಡು ಉಪಜಾತಿಗಳಾಗಿ ವಿಂಗಡಿಸಲಾಗಿದೆ ಮೆಲು ದನಿಯ ಸಿಳ್ಳಿನ ರಾಗಾಲಾಪನೆ ಇದರ ಕೂಗು. ಇದರ ಮೆಲು ದನಿಯ ಸಿಳ್ಳಿನಿಂದ ಹಕ್ಕಿ ಇರುವ ಜಾಗ ಗುರುತಿಸಬಹುದು.
ಕೀಟಗಳೇ ಪ್ರಧಾನ ಆಹಾರ ಮಾರ್ಚ-ಜುಲೈ ಅಥವಾ ಮಾರ್ಚ ದಿಂದ ಅಗಸ್ಟ ಸಮಯದಲ್ಲಿ ಮರಿ ಮಾಡುವುದು. ಮರದ ಪೊಟರೆ ಅಥವಾ ಮಣ್ಣಿನ ಬಿರುಕುಗಳಲ್ಲಿ  ಹುಲ್ಲು ಕಡ್ಡಿ, ನಾರು ಉಪಯೋಗಿಸಿ ಬಟ್ಟಲಾಕಾರದ ಗೂಡು ಕಟ್ಟುವುದು. 4-5 ತಿಳಿ ಮಣ್ಣು ಬಣ್ಣ ಅಥವಾ ಹಸಿರು ಛಾಯೆಯ ಮಣ್ಣು ಕೆಂಪು ಬಣ್ಣ ಮೊಟ್ಟೆ ಇಡುವುದು ಮೊಟ್ಟೆಯಮೇಲೆ ಕೆಂಪು ಮಿಶ್ರಿತ ಕಂದು ಬಣ್ಣದ ಚುಕ್ಕೆಗಳಿವೆ. ಎರಡು ಮೂರು ವರ್ಷಗಳಿಂದ ಉ.ಕ. ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ವಾಟೆಕೆರೆ ಹತ್ತಿರ 2012-13ರ ಅವಧಿಯಲ್ಲಿ ಒಂಟಿಯಾಗಿ ಅಥವಾ ಗಂಡು ಹೆಣ್ಣು ಜೋಡಿಯಾಗಿ ಕಾಣಿಸಿದೆ. ಹರಿಯುವ ಸಣ್ಣ ನೀರಿನಲ್ಲಿ ಬಾಲ ಕುಣಿಸುತ್ತಾ ಸ್ನಾನ ಮಾಡುವುದನ್ನು ಅಧ್ಯಯನ ಮಾಡಿದೆ. 

Monday, April 29, 2013

ಗ್ಲ್ಲೋಸಿ  ಐಬಿಸ  ಗುಂಪಿನಲ್ಲಿ ೯ ಇದೆ ಮೂರೂರಿನಲಿ ತೆಗೆದ ಫೋಟೋ

Saturday, April 6, 2013

Franklin's Nightjar

ಕೊಮನ್ ನೈಟ್ ಝಾರ ಎರಡು ವರುಷಗಳ ಹಿಂದೆ ಸಿಕ್ಕಿದ್ದು. ಎರಡು ಮೊಟ್ಟ  ಇತ್ತು. ಇದು ಕೆಂಪು ಚಿರೆಕಲ್ಲು ಪಾರೆಯ ಮೇಲೆ ಮೊಟ್ಟಿ ಇಟ್ಟದ್ದು. ಇಲ್ಲಿಯ ಜನ ಬೆಳ್ಳರೆ ಗುಡ್ಡ ಎಂದು ಕರೆಯುತ್ತಾರೆ. ಇದು ಮೂರೂರಿನ ವಾಟೆಕೆರಯ ಹತ್ತಿರ  ಇದೆ.  2 0  ದಿನಗಳ ಕಾಲ  ಇದರ  ಅಧ್ಯಯನ ಮಾಡಿದೆ ಇದು ಅಳಿವಿನ  ಅಂಚಿನಲ್ಲಿದೆ. ಮರಿಯಾಗುವ ತನಕ 
ಅಧ್ಯಯನ ಮಾಡಲು ಸಾದ್ಯವಾಗಲಿಲ್ಲ

ಯದ್ರಮಕ್ಕಿಯಲ್ಲಿ ಕಂಡಿದೆ.  ಪಿಂಕ್  ಕಲರಿನ ಎರಡು ಮೊಟ್ಟೆ ಇಟ್ಟಿದೆ  ಮೊಟ್ಟಯ ಮೇಲೆ ಪಿಂಕ್ ದಟ್ಟ ಬಣ್ಣದ ಚುಕ್ಕೆ ಇದೆ ಗೇರು ( ಕೇಷ್ಯು ಮರದ ಅಡಿಯಲ್ಲಿದೆ.

Friday, April 5, 2013

haddu

ಹದ್ದು  ಮುವತ್ತು ವರುಷಗಳ ನಂತರ ಮುರೂರಿನಲ್ಲಿ ಕಂಡಿದೆ ಎರಡು ದಿನ

ಫೊಟೋ ಮತ್ತು ವಿಡಿಯೋ ಮಾಡಿದೆ.