Friday, October 11, 2013

Birds of Muroor: long tailed scarletminivet-Pericrocotus ethologus

Birds of Muroor: long tailed scarletminivet-Pericrocotus ethologus: ಉದ್ದು ಬಾಲದ ಗುಲಗುಂಜಿ ಹಕ್ಕಿ-ಸ್ಕಾರಲೆಟ್ ಮಿನವೇಟ- ಉದ್ದ ಬಾಲದ ಗುಲಗುಂಜಿ ಹಕ್ಕಿ '

Thursday, October 10, 2013

Baya weaver Bird-Ploceus philippinus

Baya weaver Bird-Ploceus philippinus

 ಗೀಜುಗ -ಬಯಾ ವೀವರ್ ಬರ್ಡ-ಮನೆಗುಬ್ಬಿಯಂತೆ ಕಾಣುವುದು ಸುಮಾರು 15 ಸೆಂಮೀ ದೊದ್ದದಾಗಿದೆ ಗುಬ್ಬಚ್ಚಿಯಂತೆ ಬಲವಾದ ಚುಂಚು ರೆಕ್ಕೆ ಕಂದುಬಣ್ಣ ಕತ್ತರಿಸಿದಂತೆ ಬಾಲ , ರೆಕ್ಕೆಯಮೇಲೆ ಕಂದುಬಣ್ಣದ ರೇಖೆ ಇದೆ. ಆದರೆ ಮರಿಮಾಡುವ ಸಮಯದಲ್ಲಿ ಹಳದಿಬಣ್ಣ ಪ್ರಧಾನವಾಗಿ ಎದ್ದು ಕಾಣುವುದು ತಲೆ ಹೊಟ್ಟೆ, ಎದೆ, ಹಳದಿಬಣ್ಣ, ರೆಕ್ಕೆಯಮೇಲೆ ಕರಿ ಮಚ್ಚೆ ಇದೆ. ದೊಡ್ಡ ದೊಡ್ಡ ಗುಂಪಿನಲ್ಲಿ  ಗದ್ದೆ , ಕೃಷಿ ಭೂಮಿಯಲ್ಲಿ ಕಾಣುವುದು. ಪೈರು ಕೊಯ್ದ ಸಮಯದಲ್ಲಿ ಗುಬ್ಬಚ್ಚಿಯಂತೆ ಕಾಳುಗಳನ್ನು ಆಯ್ದು ತಿನ್ನುವುದು. ಚಿರಿ, ಚರೀ, ಚಿರೀ ಎಂದು ಕೂಗುತ್ತಿರುವುದು. ಮೇ -ಸಪ್ಟಂಬರ್-ನವೆಂಬರ್ ಅವಧಿಯಲ್ಲಿ ಗದ್ದೆಗಳ ಸಮೀಪ  ಇರುವ  ಎತ್ತರದ ತಾಳೆ-ತೆಂಗಿನ ಮರಗಳ ಗರಿಗಳಿಗೆ ಕಾಲು ಚೀಲದಂತಹ ಗೂಡನ್ನ ತಲೆ ಕೆಳಗಾಗಿ ಕಟ್ಟುವುದು.ಮರದ ಗರಿಗಳ ತುಂಬಾ ಒಟ್ಟಾಗಿ ಸುಮಾರು 90 ಫೂಟು ಎತ್ರದಲ್ಲಿ ಅನೇಕ ಗೂಡುಗಳನ್ನು ನಿರ್ಮಿಸುವುದು. ಕಬ್ಬಿನ  ಎಲೆ ನಾರು ಹಾಗೂ ಭತ್ತದ ಹುಲ್ಲಿನ ನಾರನ್ನು ಉಪಯೋಗಿಸಿ ಸುಂದರ ಹಾಗೂ ನಾಜೂಕಾದ ಗೂಡನ್ನು ನೈದು ಕಟ್ಟುವುದು. ಗಂಡುಹಕ್ಕಿ ನಾಲ್ಕು ಐದಕ್ಕಿಂತ ಹೆಚ್ಚು ಗೂಡನ್ನು ನಿರ್ಮಿಸಿ, ಬರುವ ಹೆಣ್ಣು ಆಕರ್ಷಿಸಲು ರೆಕ್ಕೆ ಬಿಚ್ಚಿ ಹೆಣ್ಣನ್ನು ಆಹ್ವಾನಿಸುವುದು.ಕೆಲವೊಮ್ಮೆ ಎರಡು ಅಂತಸ್ಸಿನ ಗೂಡನ್ನು ಕಟ್ಟುವುದು. ಗೂಡಿನ ದ್ವಾರದಿಂದ ಕೆಳಗೆಟ್ಯೂಬಿನಂತೆ 2 ಫೂಟು ಉದ್ದ ಸಹ ಇರುವುದು. ಗೂಡಿನಉದ್ದ ಮೂರುವರೆ ಫೂಟ್ ಸಹಇರುವುದು  ಕೂಗು, ಇರುವ ಜಾಗ ಹಾಗೂ ಬಣ್ಣ ವ್ಯತ್ಯಾಸದಿಂದ 2 ಬೇರೆ  ಜಾತಿಯ ನೇಕಾರ ಹಕ್ಕಿಇದೆ. ಕಪ್ಪು ಎದೆ ಗೀಜುಗ, ಪಟ್ಟೆ ಗೀಜುಗ.
 ಪಟ್ಟೆ ಗೀಜುಗ. -ಹಳದಿ ಎದೆಯಮೇಲೆ ಕಪ್ಪು ಗೆರೆಗಳಿರುವ  ಗೀಜುಗ ಜೌಗು ಪ್ರದೇಶದ  ಚಾಪೆಹುಲ್ಲ್ಲಿನ  ನಾರಿನಿಂದ ನೈದು ಗೂಡನ್ನು ಮಾಡುವುದು. ಗಂಡು ಗೂಡನ್ನು ನಿರ್ಮಿಸಿ  ಟ್ರಿ.ಲ್ಲಿಲ್ಲಿ ಎಂದು ಗಿಲಗಿಚ್ಚಿ ಸಪ್ಪಳದಂತೆ ಕೂಗಿ ರೆಕ್ಕೆ ಬಿಚ್ಚಿ ನರ್ತಿಸಿ ಹೆಣ್ಣನ್ನು ಆಹ್ವಾನಿಸುವುದು.
ಕರಿ ಎದೆಯ ಗೀಜುಗಕ್ಕೆ ಕಪ್ಪು ತಿಳಿ ಹಳದಿ  ಬಣ್ಣ. ತಲೆಯ ಮೇಲೆ ಕಪ್ಪು ಟೋಪಿಯಂತೆ ಕಪ್ಪು ಬಣ್ಣ  ತಲೆಯಲ್ಲಿರುವುದು  ಎದೆಯಮೇಲೆ ಕಪ್ಪು ಕಂದುಬಣ್ಣದ  ಅಗಲವಾದ ಪಟ್ಟೆ ಇರುವುದು.. ಹುಬ್ಬಿನಿಂದ ಗಲ್ಲದ ವರೆಗೆ ವ್ರತ್ತಾಕಾರದ  ಅಗಲವಾದ ಬಿಳಿಬಣ್ಣದ ಪಟ್ಟಿ ಇದೆ. ಮರಿಮಾಡದ ಕಾಲದಲ್ಲಿ ಗುಬ್ಬಚ್ಚಿಯಂತೆ ಕಾಣುವುದು.ನಾಲಾ ಪ್ರದೇಶದಲ್ಲಿ ಇರುವುದು. ಜೊಂಡು ಹುಲ್ಲಿನ ನಾರಿನಿಂದ ಗೂಡನ್ನ ನೈಯುವುದು. ಗೂಡನ್ನು ತಯಾರಿಸಿ ಅದರಮೇಲೆ ಕುಳಿತು ಬಾಲವನ್ನು ಬೀಸಣಿಕೆಯಂತೆ ಬೀಸಿ ಹೆಣ್ಣು ಕರೆಯುವುದು.ಚಿಲೀ ಚಿಲೀ ಚಿಲೀ ಎಂದು ಗಜ್ಜೆ ಸಪ್ಪಳದಂತೆ ಸಿಳ್ಳಿನ ರಾಗಾಲಾಪ ಮಾಡುವುದು. ಕೆಲವೊಮ್ಮ ಗದ್ದೆಯ ಮೇಲೆ ಹಾದು ಹೋಗುವ ಟೆಲಿಫೋನ್ ವಾಯರುಗಳಿಗೆ , ವಿದ್ಯತ್ ತಂತಿಗಳಿಗೆ ಸಾಲಾಗಿ ಗೂಡನ್ನು ಕಟ್ಟುವುದು. ಎತ್ತರವಾದ ಹುಲ್ಲು ಬೆಳೆಯುವ ಹುಲ್ಲುಗಾವಲಿನಲ್ಲು ಇರುವುದು.

ತೆಂಗಿನ ಮರದ ತುಂಬಾ ಗೂಡನ್ನುಕಟ್ವು ಇರುವುದು ಗೀಜುಗಗದ್ದೆಗಳಿಗೆ ಕ್ರಮಿನಾಶಕ ಸಿಂಪಡಿಸುವುದರಿಂದ ಇದರ ಸಂಖೆ ಕಡಿಮೆಯಾಗುತ್ತಿದೆ. ಮನೆ ಗುಬ್ಬಿಯಂತೆ ಅಳಿವಿನಂಚಿನಲ್ಲಿದೆ . ಅದನ್ನು ಉಳಿಸುವ ಹೊಣೆ ನಮ್ಮ ನಿಮ್ಮೆಲ್ಲರ ಮೇಲಿದೆ.

ನೇಕಾರ ಹಕ್ಕಿಯ ಸುಂದವಾದ ಗೂಡು
ಗೂಡು


ಹಕ್ಕಿ ಮತ್ತು ಗೂಡು ಗಂಡು ಗೂಡನ್ನು ನೈಯುತ್ತಿರುವುದು






Tuesday, October 8, 2013

Small Whisling Duck- Dendrocygna javanica

Small whisling Duck -ಸಿಳ್ಳಿನ ಚಿಕ್ಕ ಬಾತು - ತನ್ನ ಮರಿಗಳೊಂದಿಗೆ ಗಂಡು ಹೆಣ್ಣು ಸುಮಾರು 20 ಮರಿಗಳಿದ್ದವು -ಸುಮಾರು 42 ಸೆಂ.ಮೀ ದೊಡ್ಡದಾದ ತಿಳಿ ಕಂದುಬಣ್ಣದ ಬಾತುಕೋಳಿ.ಬಾಲದ ಮೇಲಗಡೆ ರೆಕ್ಕೆ ಚಾಕಲೇಟ ಬಣ್ಣ. ಪುಕ್ಕದ ಅಡಿಯಲ್ಲಿ ತಿಳಗೆಂಪು ಬಣ್ನ ,ರೆಕ್ಕೆಯ ಮೇಲ್ಭಾಗ ಬೂದು ಕಂದುಬಣ್ಣ, ಬೂದು ಬಣ್ಣದ ಕೊಕ್ಕು , ಜಾಲಪಾದ ಇದ್ದು ಹೇಟೆ ಕೋಳಿಯಷ್ಟು ದೊಡ್ಡದಾಗಿರುವುದು.  ಕೊಳ, ಹಿನ್ನೀರು , ಕೆಸರು ಗದ್ದೆ, ಕಮಲ , ಕವಳೆ ಹುಲ್ಲು ಜೊಂಡು ತುಂಬಿರುವ ಜಾಗದಲ್ಲಿ ಇರುವುದು. 180 ರಿಂದ 200 ರ ಗುಂಪಿನಲ್ಲೂ ಕಾಣುವುದು. ಕೆಲವೊಮ್ಮೆ 6
, 8, 10 ಗುಂಪಿನಲ್ಲು ಇರುವುದು. ಗಂಡು ಹೆಣ್ಣು  ಎರಡೂ ಒಂದೇ ತರಹದ ಬಣ್ಣ. ಮರಿ ಚಿಕ್ಕದಾಗಿರುವಾಗ ಕಪ್ಪು ಹಾಗೂ ಬಿಳಿ ಚುಕ್ಕೆ ಇರುವುದು. ಬೇಸಿಗೆಯಲ್ಲಿ ಹಸಿರು ಪಾಚಿ, ಕಮಲ ಹುಲ್ಲು ಜೊಂಡು ಇರುವ ದೊಡ್ಡ ಕೊಳಗಳಲ್ಲಿ ಇದ್ದರೆ, ಮಳೆಗಾಲದಲ್ಲಿ ನೀರು ತುಂಬಿರುವ ಗದ್ದೆ , ನೀರಿನ ಹೊಂಡಗಳಲ್ಲಿ ಕಾಣುವುದು. ಸ್ಥಳೀಯವಾಗಿ ವಲಸೆ ಹೊಗುವವು. ಸದಾ ಮೆಲು ಸಿಳ್ಳು ವ್ಹೀ,ವ್ಹೀಎಂದು ಕೂಗುತ್ತಿರುವುದು. ಇದರಿಂದಇದಕ್ಕೆ ಸಿಳ್ಳಿನ ಬಾತು ಎಂಬ ಹೆಸರು. ಮಲ್ ರೆಕ್ಕೆ ಮುಚ್ಚುವ ಭಾಗದಲ್ಲಿ ತಿಳಿ ಗುಲಾಬಿ ಕೆಂಪು ಬಣ್ಣ ಪುಕ್ಕದ ತುದಿಯವರೆಗೆ ಕಾಣುವುದು ಇದು ಇಡೀ ಭಾರತದ ತುಂಬಾ ಕಾಣುವುದು. ಜಕನಾ, ಕೂಟ್ ಮೊದಲಾದ ನೀರ ಹಕ್ಕಿಯ ಜೊತೆ ಇರುವುದು.ಕಮಲದ ದಂಟು, ಹಸಿರು ಪಾಚಿ, ಚಿಕ್ಕ ಹುಳು, ಚಿಗುರೆಲೆ ಇದರ ಆಹಾರ. ಕೆಲವೊಮ್ಮೆ ಭತ್ತದ ಗದ್ದೆಗಳಿಗೂ ಆಹಾರಕ್ಕಾಗಿ ಬರುವುದುಂಟು. ಜೂನ್ ದಿಂದ ಅಕ್ಟೋಬರ ವೇಳೆಯಲ್ಲಿ ಹುಲ್ಲು ಜೊಂಡು, ಕಮಲದ ಎಲೆಗಳ ಗೂಡು ನಿರ್ಮಿಸುವುದು. ಅಲ್ಲಿ 7ರಿದ 12 ಅದಕ್ಕಿಂತ ಹೆಚ್ಚು ದಂತ ವರ್ಣದ ಬಿಳಿ ಮೊಟ್ಟಿ ಇಡುವುದು. ಗಂಡು ಹೆಣ್ಣು ಎರಡೂ ಮರಿಗಳ ಪೋಷಣೆಯಲ್ಲಿ ಪಾಲ್ಗೊಳ್ಳುವುದು.ಉಪ್ಪಿನ ಪಟ್ಟಣ, ಮೂರೂರು, ಕುಮಟಾ ಹೊನ್ನಾವರದ ಭಾಗದಲ್ಲೂ ಮಳೆಗಾಲ ಬೇಸಿಗೆಯಲ್ಲಿ ಅವಲೋಕಿಸಿದೆ.
ಈ ಚಿತ್ರ ಮತ್ತು ವೀಡಿಯೋದಲ್ಲಿ ಗಂಡು ಹೆಣ್ಣು  ಮರಿಗಳೊಂದಿಗೆ ವಿಹರಿಸುತ್ತಿವೆ.



Sunday, October 6, 2013

Birds of Muroor: long tailed scarletminivet-Pericrocotus ethologus

Birds of Muroor: long tailed scarletminivet-Pericrocotus ethologus: ಉದ್ದು ಬಾಲದ ಗುಲಗುಂಜಿ ಹಕ್ಕಿ-ಸ್ಕಾರಲೆಟ್ ಮಿನವೇಟ- 


ಪಿಕಳಾರ ಅಥವಾ ಬುಲ್-ಬುಲ್ ಗಾತ್ರದ ಹಕ್ಕಿ ಸುಮಾರು 18 ಸೆಂ.ಮೀ ಉದ್ದ ಇರುವುದು.ಕೆಂಡದಂತೆ ಚೆಂಪಾಗಿ ಹೊಳೆಯುವ ಮೈಬಣ್ಣ. ಕಪ್ಪು ರೆಕ್ಕೆಯಲ್ಲಿ ಕೆಂಪು ಮಚ್ಚೆ ಇದೆ. ಕಪ್ಪಾದ ಬಾಲದಲ್ಲಿ ಕೆಂಪು ರೇಖೆಗಳಿವೆ.ಇದು ಗಂಡು ಹಕ್ಕಿ. ಗಂಡು ಕೆಂಪು  ಕಿತ್ತಳೆ ಬಣ್ಣ ಹೊಂದಿದ ಬಾಗಗಳಲ್ಲಿ ಹೊಳೆವ ಹಳದಿ ಬಣ್ಣ ಹೆಣ್ಣು ಹಕ್ಕಿಗೆ ಇದೆ. ಹಳದಿ ಮೈಬಣ್ಣ, ಬೂದು ತಲೆಭಾಗ ಎದೆ ಹೊಟ್ಟೆ ಹಳದಿ ಬಣ್ಣ ಹೆಣ್ಣು ಹಕ್ಕಿಗೆಇರುವುದು.
ಇವು ಎರಡು ಅಥವಾ ನಾಲ್ಕರ ಗುಂಪಿನಲ್ಲಿ ಇರುವುದು ಮರಗಳ ತುದಿಯಲ್ಲಿ ಹಾರುತ್ತಾ ಕೀಟಗಳನ್ನು ಹಾಗೂ ಕಂಬಳಿ ಹುಳಗಳನ್ನು ಹಿಡಿದು ಅದನ್ನು ಮರದ ಟೊಂಗೆಗಳಿಗೆ ಬಡಿದು ಸಾಯಿಸಿ ತಿನ್ನುವುದು. ಎರಡು ಮೂರು ವರುಷಗಳಿಂದ ಮಲೆನಾಡಿನ ಪ್ರದೇಶಗಳಲ್ಲಿ ಗುರುತಿಸಿದೆ. ಶಿರಸಿ, ಕುಮಟಾ, ಯಲ್ಲಾಪುರ ಸಾಗರ ಸಿದ್ದಾಪುರ ಭಾಗಗಳಲ್ಲೂ ಇವೆ. ಸಪ್ಟಂಬರ್- ಅಕ್ಟೋಬರ್ ತಿಂಗಳಲ್ಲಿ ಹೆಚ್ಚಾಗಿ ಕಾಣಿಸುವುದು. ಇದರ ಜೊತೆ ಹಾರು ಕೀಟಗಳನ್ನು ತಿನ್ನುವ ಡ್ರೇಂಗೋ ಸಹ ಇರುವುದು.  ಕಂಬಳಿ ಹುಳು ಹಾಗೂ ಕೀಟಗಳಿರುವ ಮತ್ತಿ, ನೇರಳೆ, ಜಂಬೆ ಮುಂತಾದ ದೊಡ್ಡ ಮರಗಳಿರುವ ಭಾಗಗಳಲ್ಲಿ ಹಾರಾಡುತ್ತಾ ಸ್ವೀಸ್ವೀ ಎಂದು ಮೆಲುದನಿಯಲ್ಲಿ ಕೂಗುತ್ತಾ ತನ್ನ್ನಇರುವನ್ನು ಸೂಚಿಸುವುದು.ಬಣ್ಣ ವ್ಯತ್ಯಾಸವನ್ನು ಆಧರಿಸಿ 5 ಉಪಗುಂಪಾಗಿ ವಿಂಗಡಿಸಲಾಗಿದೆ. ಮಲಬಾರ್ ಮಿನವೇಟ್, ಚಿಕ್ಕ ಮಿನವೇಟ್, ಉದ್ದ ಬಾಲದ ಮಿನವೇಟ್, ಕೀಟಾಹಾರಿ ಅರಣ್ಯ ಪಕ್ಸಿಗಳಾದಇದನ್ನು  ಪ್ರತ್ಯೇಕವಾಗಿ ವಿಂಗಡಿಸಿ ಕ್ಯಾಮಫೆಜಿಡೇ ಕುಟುಂಬಕ್ಕೆ ಸೇರಿಸಲಾಗಿದೆ. ಇವು
ಕರ್ನಾಟಕ, ಗಿಜರಾತ್ ರಾಜಸ್ಥಾನ , ಮಧ್ಯಪ್ರದೇಶ, ಒರಿಸಾ, ಚೆನೈ, ಮಹಾರಾಷ್ಟ್ರ ಭಾಗಗಳಲ್ಲಿ ಪಸರಿಸಿವೆ.ತರೋಜಿ ಮಿನವೇಟ ಹಿಮಾಲಯ ಪ್ರದೇಶದಿಂದ ಕೇರಳದ ವರೆಗೆ ಪಸರಿಸಿವೆ. ಆಶ್ಯೀ ಮಿನವೇಟ್ ಅಂಡಮಾನ್ ನಿಕೋಬಾರಕ್ಕೆ ಸೀಮಿತವಾಗಿದೆ.
ಮರಗಳ ತುದಿಯಲ್ಲಿ ತುಂಬಾ ಎತ್ತರದಲ್ಲಿ ಭುಮಿಗೆ ನೇರವಾಗಿರುವ ಟೊಂಗೆಗಳ ಮೇಲೆ ಬಟ್ಟಲಾಕಾರದ ಗೂಡು ಕಟ್ಟುವುದು.  ನಾರು ಜೇಡರ ಬಲೆ ಸಂಗ್ರಹಿಸಿ ತುಂಬಾ ಸುಕ್ಷ್ಮವಾದ  ಅಚ್ಚುಕಟ್ಟಾದ ಗೂಡನ್ನು ಮಾಡುವುದು.
ಇದರಲ್ಲಿ ಹಸಿರು ಛಾಯೆಯ ಬಿಳಿಬಣ್ಣದ  3-4 ತತ್ತಿಗಳನ್ನು ಇಡುವುದು. ತತ್ತಿಯ ಅಗಲ ತುದಿಯಲ್ಲಿ ಕೆಂದೆಂದು ಚುಕ್ಕಿಗಳಿವುದು. ಗಂಡು ಹೆಣ್ಣು ಎರಡೂ ಮರಿಯ ಪಾಲನೆ ಪೋಷಣೆಯಲ್ಲಿ ಪಾಲ್ಗೊಳ್ಳುವುದು.
ಉದ್ದಬಾಲದ ಮಿನವೇಟ್ ಮತ್ತು ಚಿಕ್ಕ ಮಿನವೇಟ ಕರ್ನಾಟಕದ ಹಕ್ಕಿ.

long tailed scarletminivet-Pericrocotus ethologus

ಉದ್ದು ಹಾಲದ ಗುಲಗುಂಜಿ ಹಕ್ಕಿ-ಸ್ಕಾರಲೆಟ್ ಮಿನವೇಟ- ಉದ್ದ ಬಾಲದ ಗುಲಗುಂಜಿ ಹಕ್ಕಿ'