Tuesday, May 7, 2013

Monarch Blue flycatcher feeding young one

ಮಂಜುಮನೆ ಹತ್ತಿರ ಗೂಡು ಕಟ್ಟಿದ್ದು ಸುಮಾರು ೩ ಅರ್ಧಫೂಟು ಎತ್ತರದಲ್ಲಿ ನಂಜಟ್ಳೆ ಗಿಡದ ಕವರಿನಲ್ಲಿ ಕಟ್ಟಿದೆ. ತನ್ನ ಗೂಡು ಪರಿಸರಕ್ಕೆ ಹೊಂದುವಂತೆ ಮಾಡಲು ಬಿಳಿ ಬಿಂಜಲು (ಜೇಡರ ಬಲೆ )ತಂದು ಗೂಡಿನ ಸುತ್ತ ಕೆಳ ಭಾಗದಲ್ಲಿ ಅಂಟಿಸಿದೆ . ಗೂಡಿ ಸೈಸ್, ಆಳ, ತ್ರಿಜ್ಯ ಅಳತೆ ಮಾಡಿದೆ. ಮೂರು ಪಿಂಕ್ ಕಲರ ಮೊಟ್ಟೆ ಇದೆ. ಲೈಟ್ ಬ್ರೌನ್ ಚಿಕ್ಕ ಚುಕ್ಕೆ ಮೊಟ್ಟಯ ಮೇಲಿದೆ ೩ ಮೊಟ್ಟೆ ಮರಿಯಾಗಿದೆ ಗಂಡು, ಹೆಣ್ಣು ಸರತಿಯಂತೆ ಮರಿಯ ಯೋಗಕ್ಷೇಮ ನೋಡುತ್ತದೆ. ಗುಟುಕು ಕೊಡುವುದು, ರೆಕ್ಕೆ ಹುಳ ತಂದು ಮರಿಗೆ ಕೊಡುವುದು. ಮರಿ ಅದನ್ನು ತಿಂದಾದ ಮೇಲೆ ಉಳಿದ ರೆಕ್ಕೆ ಭಾಗ ಗೂಡಿನಲ್ಲ ಉಳಿಯದಂತೆ ಕೊಳೆಯಾಗದಂತೆ ಅದನ್ನು ಹೊರಗೆ ಹಾಕುವುದು. ಆ ರೆಕ್ಕೆ ತುಂಡು ಗೂಡಿನಲ್ಲೆ ಇದ್ದರೆ ಇರುವೆ ಬಂದು ಮರಿಗೆ ತೊಂದರೆ ಯಾಗುವುದನ್ನು ತಪ್ಪಿಸಲು ಹೀಗೆ ಮಾಡುವುದು. ಮರಿಗಳಿಗೆ ಬಿಸಿಲಿನ ತಾಪ ಹೆಚ್ಚಾಗದಂತೆ ಆಗಾಗ ಹೋಗಿ ಹತ್ತಿರದಲ್ಲೆ ಇರುವ ನೀರಿನ ಹೊಂಡದಲ್ಲಿ ಸುಮಾರು ೧ ವರೆ ಫೂಟ್ ಎತ್ತರದ ಟೊಂಗೆಯಿಂದ ನೀರಿಗೆ ಜಿಗಿದು ಸ್ನಾನಮಾಡಿ ಬಂದು,  ಒದ್ದೆರೆಕ್ಕೆ  ಶೈತ್ಯ  ಮರಿಗೆಳಗೆ ಸಿಗುವಂತೆ ಗೂಡಿನಲ್ಲಿ ಕುಳಿತುಕೊಳ್ಳುವುದು. ಡ್ರಾಂಗೋ, ಮತ್ತು ಎಷಿಯನ್ ಬ್ಲೂ ಪೇರಿ ಬರ್ಡ ಹತ್ತಿರ ಬಂದಾಗ ಮರಿ ರಕ್ಷಣೆಗೆ ತಂದೆ-ತಾಯಿ ಹಕ್ಕಿ ಧಾವಿಸಿ  ಅದನ್ನು ಓಡಿಸುವುದು 
2 1 -4 -2 0  1 3 ಮತೊಂದು ಗೂಡು ಕಟ್ಟಲು ಆರಂಭಿಸಿದೆ. ಗಂಡು ಹೆಣ್ಣು ಸೇರಿ ಗೂಡು ಕಟ್ಟುತ್ತಿದೆ. ಹೆಣ್ಣು ಹಕ್ಕಿಗೆ ಗಂಡು ಬೇಕಾದ ಗೂಡುಕಟ್ಉವ ಸಾಮಗ್ರಿ ತಂದು ಕೊಡುವುದು , ಒಳ್ಳೆಯ ಗೂಡು ಕಟ್ಟುವ ಸಾಮಗ್ರಿ ಕಂಡಾಗ ಚೀಕ್-ಚೀಕ್-ಚೀಕ್ ಎಂದು ಕೂಗಿನ ಮೂಲಕ ಹೆಣ್ಣಿಗೆ ಸಂದೇಶ ರವಾನಿಸುವುದು.

ಸಿದ್ಧವಾಗುತ್ತಿರುವ ಗೂಡು

ಗಂಡು ಹೆಣ್ಣು ಜೊತೆಗೂಡಿ ಗೂಡು ಕಟ್ಟುತ್ತಿರುವುದು. ಇನ್ನೂ ಮೊಟ್ಟ  ಇಟ್ಟಿಲ್ಲ. ಮುಂದಿನ  ಅಧ್ಯಯನಕ್ಕೆ ಸಿದ್ಧತೆ ನಡೆಸಿರುವೆ. ಇದು ಸ್ನಾನ ಮಾಡುವ ಸ್ಥಳ ಿಲ್ಲಿಂದ ಸುಮಾರು 100 ಫೂಟು ದೂರದಲ್ಲಿದೆ. ನೀರ ಹೊಂಡದಮೇಲೆ ಚಾಚಿದ ಟೊಂಗೆಯ ಮೇಲೆ ಕುಳಿತು ನೀರಿಗೆ ಜಿಗಿಯುವುದು ಈ ಟೊಂಗೆಯ ೆತ್ತರ ನೀರಿನ ಮೇಲ್ಭಾಗದಿಂದ 18  ಇಂಚು ಎತ್ತರ ಇದೆ. ಈ ಸಲ ಗೂಡು ಕಟ್ಟಿದ ಸ್ಥಳ:  ವಾಟೆಕೆರೆ ಕಳೆದ ವರ್ಷ ಸಿಕ್ಕಿದ್ದು ಕಲ್ಲಬ್ಬೆಯ
ಹೊಡೆಮಕ್ಕಿ ಹತ್ತಿರ  ಅಡಿಕೆ ತೋಟದಲ್ಲಿ



























No comments:

Post a Comment