Sunday, December 1, 2013

Malabar Whistling Thrush-Myiophonus horsfieldii

Malabar Whistling Thrush-Myiophonus horsfieldii-ಮಲಬಾರ ವಿಸ್ಲಿಂಗ್ ತ್ರುಶ್ - ಗೋಪಿ ಹಕ್ಕಿ, ಸರಳ ಸಿಳ್ಳಾರ , ಎಂದು ಈ ಹಕ್ಕಿಯನ್ನು ಕರೆಯುತ್ತಾರೆ. ಸುಮಾರು ೨೫ ಸೆಂ. ಮೀ . ಉದ್ದದ ಹಕ್ಕಿ. ಪಾರಿವಾಳಕ್ಕಿಂತ ಸ್ವಲ್ಪ ಚಿಕ್ಕದು. ಮೈಬಣ್ಣ ಗಾಡ ನೀಲಿಕಪ್ಪು. ಬಿಸಿಲಿನಲ್ಲಿ ಕಪ್ಪು ಬಣ್ಣ ಗಾಡ ನೀಲಿಯಾಗಿ ಹೊಳೆಯುವುದು. ಹಣೆ ರೆಕ್ಕೆಯ್ ಬುಡ ಅಂದ್ರೆ ಬುಜ ದಲ್ಲಿ ಕೊಬಲ್ಟ ನೀಲಿ ಬಣ್ಣದ ಮಕ್ಕೆ  ಇದೆ. ಕಾಲು ಚುಂಚು ಕಪ್ಪು ಬಣ್ಣ . ಗಂಡು , ಹೆಣ್ಣು ಒಂದೇ ರೀತಿ ಇದೆ. ಪರ್ವತದ ಕಣಿವೆಗಳಲ್ಲಿ ಹಳ್ಳಗಳ ಪಕ್ಕ ಇರುವ ಅಡಿಕೆ ತೆಂಗು ತೋಟಗಳಲ್ಲಿ ಒಂಟಿ ಅತವಾ ಜೋಡಿಯಾಗಿ ಕಾಣುವುದು. ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಬೆಳಗಿನ ಜಾವ ಸಿಳ್ಳಿನ ರಾಗಾಲಾಪ ಮಾಡುವುದು. ಆದ್ದರಿಂದ ಹಳ್ಳಿಗರು ಇದಕ್ಕೆ  ಗೋಪಿ ಹಕ್ಕಿ ಎಂದು ಕ್ರೆಯುತ್ತಾರೆ. ಕಲ್ಲು ಬಂಡೆಗಳಿರುವ ನೀರು ಹರಿಯುವ ಕೊರಕಲಿನ (ಸರಳು)ಗಳಲ್ಲಿ ಇರುವುದರಿಂದ ಇದನ್ನು ಸರಳ ಸಿಳ್ಳಾರ ಎಂದೂ ಕರೆಯುವುದುಂಟು . ಇದರ ಇನ್ನೋಂದು ಉಪಜಾತಿ ಆಸಾಮದಲ್ಲಿದೆ.  ಆದರೆ ಇದಕ್ಕೆ ಮಶ್ಚಿಮ ಘಟ್ಟದ ಹಕ್ಕಿಗಿರುವ್ಂತೆ ಮುಂದಲೆ ಮತ್ತು ರೆಕ್ಕೆಯ ಬುಡದಲ್ಲಿ ನೀಲಿ ಮಚ್ಚೆ ಇಲ್ಫ್ಲಇದು ಭಾರತದ ಈಷಾನ್ಯ ರಾಜ್ಯ  ಮತ್ತು ಪಶ್ಚಿಮ ಘಟ್ಟದಲ್ಲಿ ಮಾತ್ರ ಇದೆ. ಮದ್ಯಪ್ರದೇಶ , ಒರಿಸಾದ ಸಮಬಲ ಪುರ , ತಮಿಳುನಾಡಿನ ಶೇವರಿ ಪರ್ವತದ ಪ್ರದೇಶ , ಗುಜರಾತದ ಹೇಮತ್ ನಗರಗಳಲ್ಲಿ ಇದೆ. ಇದು ಕಾಡಿನಲ್ಲೇಹೆಚ್ಚಾಗಿ ಇರುವುದು. ಆದ್ರೂ ನೀರಿನ್ ಝರಿ ಹರಿಯುವ ಅಡಿಕೆ, ತೆಂಗು ತೋ ಟಗಳಲ್ಲಿ ಸಿಳ್ಫ಼್ಳಿನ ರಾಗಾಲಪ ಮಾಡುತ್ತ ತನ್ನ್ ಸಂಗಾತಿಯನ್ನು ಕರೆಯುವುದು. ಇದು ಮನುಸಷ್ಯ ಸಿಳ್ಳ್  ನಂತೆ    ಇರುವುದು.  ಕೀಟ, ಜಲಚರಗಳು, ಏಡಿ, ಶಂ ಖದ  ಹುಳು, ಬಸವನ ಹುಳುಗಳನ್ನು ಹಿಡಿದು ಅದನ್ನು ಬಂಡೆಗೆ ಬಡಿದು ಚಿಪ್ಪನ್ನು ಒಡೆದು ತಿನ್ನುವುದು. ಪರ್ವತಗಳ ನೀರು ಝಾರಿಯ ಕಲ್ಲು ಪದರುಗಳಲ್ಲಿ , ಬಿರುಕುಗಳಲ್ಲಿ ಗೂಡು ಕಟ್ಟುವುದು. ಹುಲ್ಲು, ನಾರು, ಬೇರು ಹತ್ತಿ, ಹಕ್ಕಿಗಳ ಪುಕ್ಕ ಉಪಯೋಗಿಸಿ ಗೂಡನ್ನು ಕಟ್ಟಿ ಅದರ ಹೊರ ಮೈಗೆ ಜೆಡಿ ಮಣ್ಣಿನ ಗಿಲಾಯ ಮಾಡುವುದು. ೩-೪ ಪೇಲ್ಫ ಬಪ್  ಬಣ್ಣದ ಮೊಟ್ಟೆಯ ಮೇಲೆ ಬೂದು ಬಣ್ಣದ ತಿಳಿ ಚುಕ್ಕೆ ಇರುವುದು. ಗಂಡು ಬೆನ್ನು ಎರಡು ಮರಿಗಳ ಪಾಲನೆ ಪೋಷಣೆಯಲ್ಲಿ ಪಾಲ್ಗೊಳ್ಳುವುದು.  ಕಾಡು ಅಳಿಯುತ್ತಿರುವ್ಂತೆ ಇವುಗ್ಳ್ ಇರುನೆಲೆ ಕಡಿಮೆಯಾಗುತ್ತಿದೆ. ಹುಳ ಹುಪ್ಪಡಿಗಳನ್ನು ತಿನ್ನುವ ಇದು ರೈತರಿಗೆ ತುಂಬಾ ಉಪಕ್ಕರಿಯಾದ ಹಕ್ಕಿ . ಮುಂಜಾನೆ ಇದರ ಸಿಳ್ಳಿನ ರಾಗಾಲಾಪ ಕೇಳಿಸಲು ಉಳಿಸಲು ಇದನ್ನು ಕಾಪಾಡಬೇಕಗಿದೆ.


No comments:

Post a Comment