Monday, September 16, 2019

Malayan Night h-heron

Bird Artical Malayan Night-Heron  (Gorsachius melanolophus) Raffles RM -Indian Pond heron+

ಬೆಟ್ಟದ ಕೆಂದ ಕೊಕ್ಕರೆ -ಟೈಗರ ಬಿಟರಿನ್, ಕಂದುಗೆಂಪು ಕೊಕ್ಕರೆ ಎಂಬ ಹೆಸರಿದೆ. ಮಲೆ ಎಂದರೆ ಬೆಟ್ಟ ಎಂಬ ಹೆಸರಿದೆ. ದೊಡ್ಡ ಮರಗಳಿರುವ ಎತ್ತರದ ಗುಡ್ಡದಲ್ಲಿ ಈ ಕೊಕ್ಕರೆ ಹೆಚ್ಚಾಗಿ ನೆಲೆ ಮಾಡಿಕೊಂಡಿರುವುದರಿಂದ ಮಲೆಯ ಹೆರಾನ್ ಎಂಬ ಹೆಸರು ಬಂದಿರಬಹುದು. ಇನ್ನು ಇದು ಮಲೇಶಿಯಾದಲ್ಲಿ ಹೆಚ್ಚು ಪ್ರಮಾಣದಲ್ಲಿ ಇರುವುರಿಂದಲೂ ಇದರ ಹೆರಿನ ಜೊತೆ ಮಲೆಯ ಹೆರಾನ್ ಎಂದು ಸೇರಿಸಲಾಗಿದೆ.  ಹಗಲಲ್ಲಿ ಮರ , ಇಲ್ಲವೇ ಗಿಡಗಳ ಮರೆಯಲ್ಲಿ ಸುಮ್ಮನೆ ಕುಳಿತಿರುವಾಗ ಇದು ಇರುವುದೇ ತಿಳಿಯುವುದಿಲ್ಲ. ರಾತ್ರಿ ಇದರ ಚಟುವಟಿಕೆ ಹೆಚ್ಚು -ಹಾಗಾಗಿ ಇದಕ್ಕೆ ಮಲೆಯನ್ ನೈಟ್ ಹೆರಾನ್- ಅಂದರೆ ರಾತ್ರಿ ಕೆಂದು ಗುಪ್ಪಿ ಎಂಬ ಹೆಸರು ಇದರ ಬಣ್ಣ ಮತ್ತು ಆಹಾರ ಕ್ರಮ-ಕುಳಿತುಕೊಳ್ಳುವ ¨ಂಗಿ -ಆದರಿಸಿ-ಕರೆಯುವ ಅನ್ವರ್ಥಕ ಹೆಸರು. ಕೆಂದ ಹಸು ಎಂದು ಈ ಬಣ್ಣವನ್ನು ಕನ್ನಡದಲ್ಲಿ ವ್ಯವಹರಿಸುವುದಿದೆ. ಕವಲ ಬಣ್ಣ ಅಂದರೆ ಕಂದು, ಕೆಂಪು, ಕಪ್ಪುಮಿಶ್ರಿತ ಬಣ್ಣ -ಅದಕ್ಕಾಗಿ ಇದರ ಬಣ್ಣ ಆಧರಿಸಿ ಕವಲ ಕೊಕ್ಕರೆ ಎಂದೂ ಕರೆಯಬಹುದು. ಕವಲ ಗುಪ್ಪಿ. ಗುಪ್ಪಿ -ಎಂದರೆ ತನ್ನ ಕುತ್ತಿಗೆಯನ್ನು ಕುಗ್ಗಿಸಿ ಮುದುಡಿ ಕುಳಿತುಕೊಳ್ಳುವ ಭಂಗಿಗೆ ಹೇಳುತ್ತೇವೆ. ಇದರ ಕುಳ್ಳು -ಉರುಟಾದ ದೇಹವನ್ನು ಆಧರಿಸಿ- ಹೀಗೆ ಕರೆಯುವುದಿದೆ. ಆಸಾಮಿಯಲ್ಲಿ ಈ ಹಕ್ಕಿಗೆ ರಾಜ ಬೊಗ, ಎಂದೂ- ಮಳೆಯಾಳದಲ್ಲಿ ತವಿಟ್ಟು ಕೊಕ್ಕು- ಎಂದಿದೆ. ಇದರಿಂದ ಆಂದ್ರ ಮತ್ತು ಆಸಾಮದಲ್ಲಿ ಇದು ಇರುವುದು ತಿಳಿಯುವುದು. ನನಗೆ ಈ ವರ್ಷ ಪಶ್ಚಿಮ ಘಟ್ಟದ ನಮ್ಮ ಊರು ಮೂರೂರಿನಲ್ಲಿ ಸಿಕ್ಕಿದೆ. ಅಕ್ಟೋಬರ್ ಮೊದಲವಾರದಿಂದ ಸಪ್ಟಂಬರ್ 10 ಅವಧಿಯ ಒಂದುವರೆ ತಿಂಗಳಿಗಿಂತ ಹೆಚ್ಚು ಸಮಯ ಇದರ ಗೂಡು, ಮೊಟ್ಟೆ, ಸ್ವಭಾವ -ಮರಿಗಳ ಬೆಳವಣಿಗೆಯ ಹಂತ-ಅಧ್ಯಯನ ನಡೆಸಿದ್ದೇನೆ. ಇದೊಂದು ಅಪರೂಪದ ಹಕ್ಕಿ. ಜಗತ್ತಿನ ವಿವಿಧ ಭಾಗದಲ್ಲಿ -ಕವಲು ಬಣ್ಣದ ಮೂರು ಛಾಯೆಯಲ್ಲಿ -ಈ ಪ್ರಬೇಧದ ಹಕ್ಕಿ ಇದೆ. ಇಲ್ಲಿ ಮೂರೂರಿನಲ್ಲಿ ನನಗೆ ಸಿಕ್ಕಿದ್ದು -ಕಂದು ಗೆಂಪು ಬಣ್ಣ ಇರುವ ಹಕ್ಕಿ. ಮತ್ತು ಬಾಲ್ಯಾವಸ್ಥೆಯಲ್ಲಿ ಬಿಳಿ ಗರಿಗಳಿರುವ ಈಗಷ್ಟೇ-ಮೊಟ್ಟೆ ಒಡೆದಿರುವ 2 ಮರಿಗಳು ಮತ್ತು ಕಂದುಗೆಂಪು ಛಾಯೆಯ ತಂದೆ-ತಾಯಿ, ಸಸಿಕ್ಕಿದೆ. ಇದು ಕೊಳದ ಬಕ ಅಂದರೆ ಪೊಂಡ್ ಹೆರಾನ್ -ಗಿಂತ ಸ್ವಲ್ಪ ದೊಡ್ಡ ಇತ್ತು- ಇದು 45-49 ಸೆಂ.ಮೀ ದೊಡ್ಡ ಇದೆ. 377 ರಿಂದ 451 ಗ್ರಾಂ. ಭಾರ ಇರುವುದು. ಇದು ರೆಕ್ಕೆ ಅಗಲಿಸಿದಾಗ -ರೆಕ್ಕಯ ವಿಸ್ತಾರ 85 ಸೆಂ.ಮೀ ಇರುವುದು. ಭಾರತದ ಪಶ್ಚಿಮ ಘಟ್ಟ ಪ್ರದೇಶ, ದಕ್ಷಿಣಕ್ಕೆ ನೀಲಗಿರಿ, ಕೇರಳ, ಆಂದ್ರ, ಆಸಾಂ, ಚೈನಾ, ಥೈವಾನ್, ಏಷಿಯಾ, ಫಿಲಿಫೈನ್, ಅಮೇರಿಕಾ ದಲ್ಲಿರುವ ಪ್ರಬೇಧ ಒಂದೇರೀತಿ ಇದೆ. ಆದರೆ ನಿಕೋಬಾರ್ ದಲ್ಲಿರುವ ಉಪಜಾತಿ ಸ್ವಲ್ಪ ಬೇರೆಯಾಗಿದೆ. ತಿಳಿ ಕಂದುಗೆಂಪು-ಕುತ್ತಿಗೆ. ಕಪ್ಪು ಗೀರು, ಚಿತ್ತಾರ ಇರುವ ಕಂದುಗೆಂಪು ಬೆನ್ನು, ಕಂದುಗೆಂಪು ನೆತ್ತಿಯ ಮಧ್ಯದಿಂದ ಇಳಿಬಿಟ್ಟಾಗ ಕುತ್ತಿಗೆಯ ವರೆಗೆ ತಲುಪುವ ಜುಟ್ಟು, ಇದರ ಬಣ್ಣ ಕಪ್ಪಾಗಿದೆ. ಇದು ಗಾಬರಿಯಾದಾಗ ಈ ಜುಟ್ಟು ನಿಮಿರಿ- ನಿಲ್ಲುವುದು. ಗಾಬರಿಯಾದಾಗ ಕ್ವಾಕ್ ಎಂದು ಕೂಗಿ ಹಾರಿ, ಮರಗಳ ಅಥವಾ ಬೆದಿರು ಮಳೆಗಳಲ್ಲಿ ಮಾಯವಾಗುವುದು. ಇದು ಕುಳಿತಾಗ ಮುಂಭಾಗದಿಂದ ನೊಡಿದರೆ -ರೆಕ್ಕೆಯ ಪ್ರೈಮರಿ ಗರಿಗಳ ಎರಡೂ ಅಂಚಿನಲ್ಲಿರುವ ಬಿಳಿ ಬಣ್ಣ- ಇದರ ಕಂದುಗೆಂಪು ರೆಕ್ಕೆÉ ಅಂಚಿನಲ್ಲಿ ಕಾಣುವುದು. ಬಿಳಿ ಮತ್ತು ಕಪ್ಪು ರೇಖೆಯಿಂದ ಕೂಡಿದ ಇದರ ಕುತ್ತಿಗೆ- ಎದೆಯ ಮಧ್ಯ ಇರುವ ಚುಕ್ಕೆ ಕಾಣುವುದು ಮುಂದಿನಿಂದ ದೂರದಿಂದ ನೋಡಿದಾಗ ಇದು ಮರದ ಬಿರುಕಲು ಒಟ್ಟೆಯಂತೆ ಭಾಸವಾಗುವುದು. ಮುಂದಿನಿಂದ ನೋಡಿದರೆ ಮತ್ತಿ -ಇಲ್ಲವೆ ಕುರುನಂದಿ ಮರದ ತೋಗಟೆಯನ್ನು ಹೋಲುವ ಬಣ್ಣ ಕಾಣೀಸುವುದು. ಪಾಶ್ರ್ವದಿಂದ ನೋಡಿದರೆ ಇದರ ತಲೆಯ ಜುಟ್ಟು ಕಪ್ಪು-ಮೈ ಮತ್ತು ರೆಕ್ಕೆ ಕಂದು ಗಪ್ಪು ಗೆರೆ ಇರುವ -ಹುಲಿಯ ಮೈ ಬಣ್ಣ ಹೋಲುವ- ಕಂದುಗೆಂಪು ಬಣ್ಣ ಮತ್ತು ಮೋಟು ಬಾಲ -ಅಂದರೆ ಬಾಲದ ರೆಕ್ಕೆ ಇಲ್ಲದಿರುವುದು ಕಾಣುವುದು. ಕೊಳದ ಬಕಕ್ಕಿಂತ ಇದರ ಬಾಲ ಮೋಟು-ಅಂದರೆ ಚಿಕ್ಕದು. ಚಿಕ್ಕ ಚುಂಚು- ಇತರ ಕೊಕ್ಕರೆ ಇಲ್ಲವೇ ಬಿಟರಿನ್ ಹಕ್ಕಿಗೆ ಹೋಲಿಸಿದರೆ ಚಿಕ್ಕ ಚುಂಚು- ಇದಕ್ಕಿದೆ. ಇದು ಕುತ್ತಿಗೆ ಉದ್ ಮಾಡಿ ಕುಳಿತಾಗ ಪರ್ಪಲ್ ಹೆರಾನದ ಬದನೆಕಾಯಿ ಬಣ್ಣದ ಕೊಕ್ಕರೆಯೋ ಎಂಬ ಭ್ರಮೆ ಮೂಡುವುದು. ಕುತ್ತಿಗೆ ಬಾಗದಲ್ಲಿ ಇದು ಗಾಳಿ ತುಂಬಿಕೊಂಡಾಗ -ಇದರ ಕುತ್ತಿಗೆ ಭಾಗ ಗಾಳಿಯ ಚೀಲದಂತೆ ಕಾಣಿಸುತ್ತಿರುವುದು-ಇದಕ್ಕೆ ಕಾರಣ ತಿಳಿದಿಲ್ಲ. ಇದು ಸದಾ ಕಾಡಿನ ಮಧ್ಯ ಅಂದರೆ ಮಾನವ ವಸತಿಯ ಸಮೀಪದ ಎತ್ತರದ ಕಾಡಿನಲ್ಲಿ ಇರುವವು. ಅಲ್ಲೇ ಗೂಡು ಮಾಡಿಕೊಳ್ಳುವುದು. ಆದರೂ ಇರು ಸಿಗುವುದು ಬಹಳ ಅಪರೂಪ ಕಾಡಿನ -ಮರ, ಬಿದಿರು, ದೊಡ್ಡ ಮರಗಳಿರುವ ಜಾಗ ಇದಕ್ಕೆ ಪ್ರಿಯ. ಅಲ್ಲಿ ಮರ, ಎಲೆ ಇವುಗಳ ಮಧ್ಯ ಇದು- ಇರುವುದು ತಿಳಿಯುವುದೇ ಇಲ್ಲ. ಹಾಗಾಗಿ ಇದರ ವರ್ತನೆ, ಸ್ವಭಾವ ಅಧ್ಯಯನವು ತುಂಬಾ ಕಷ್ಟಸಾಧ್ಯ. ಪ್ರಬುದಾವಸ್ಥೇ ತಲುಪಿದ ಹಕ್ಕಿ ಮತ್ತು ಮರಿ-ಇನ್ನೂ ಪ್ರೌಢಾವಸ್ಥೇ ತಲುಪದ -ಹಕ್ಕಿಯ ಬಣ್ಣದಲ್ಲಿ ತಾರತಮ್ಯ ಇದೆ. ಬೇರೆ ಬೇರೆ ಸ್ಥತಿಯಲ್ಲಿ, ಇದು ಕಂದುಗಪ್ಪು ಬಣ್ಣ-ಹಳದಿ ಮಿಶ್ರಿತ ಕಂದು ಬಣ್ಣ, ಕಪ್ಪು ಛಾಯೆಯ ಕಂದು ಬಣ್ಣ ಹೀಗೆ ಇದರ ಬಣ್ಣ ವೈದಿಧ್ಯಮರವಾಗಿ ಇರುವುದರಿಂದ ಈ ಹಕ್ಕಿಯ ಅಧ್ಯಯನದಲ್ಲಿ ತುಂಬಾ ಸೂಕ್ಷ್ಮ ಅವಲೋಕನ ಅವಶ್ಯ. ಇಲ್ಲವಾದರೆ ಇದರ ಉಪಜಾತಿಯ ಹಕ್ಕಿಯೋ ಎಂಬ ಸಂಶಯ ಮೂಡುವುದು. ಇದು ಪ್ರಾದೇಸಿಕವಾಗಿ ವಲಸೆ ಹೋಗುವುದು ಆದರೂ ಇದರ ವಲಸೆ ಕುರಿತು ಹೆಚ್ಚಿನ ಅರ್ಧಯಯನ ನಡೆಯಬೇಕಿದೆ. ಇತರ ಕೊಕ್ಕರೆಗಳಿಗೆ ಹೋಲಿಸಿದರೆ ಇದರ ಚುಂಚು ಚಿಕ್ಕದು ಚಿಕ್ಕ ಹಕ್ಕಿಯ ಚುಂಚು ಗುಲಾಬಿ ಬಣ್ಣ ಇದ್ದರೆ -ಬೆಳೆದ ಹಕ್ಕಿಯ ಚುಂಚು ಕಂದು ಗಪ್ಪು ಇರುವುದು. ಇದು ಕೊಕ್ಕರೆಯಾದರೂ ನೀರ ಸಮೀಪದಲ್ಲಿ ಇರದೇ -ಸಮಶೀತೋಷ್ಣ ಮತ್ತು ದೊಡ್ಡ ಮರದ ಕಾಡಿನಲ್ಲೇ ಇರುವುದು ಹೆಚ್ಚು. ಇದು ಕೆಲವೊಮ್ಮೆ ನೆಲದ ಮೇಲೆ ಓಡಾಡಿ, ಎರೆಹುಳುಗಳನ್ನು -ಎಲೆ ಇಲ್ಲವೇ -ಮಣ್ಣು ಕೆದಕಿ ಹಿಡಿಯುವುದು. ಇದರ ಚಿಕ್ಕ ಚುಂಚು ಮತ್ತು ರೆಕ್ಕೆಯಲ್ಲಿರುವ ಬಿಳಿ ಬಣ್ಣ ಇದನ್ನುಇತರ ಗುಪ್ಪಿಗಳಿಂದ ಪ್ರತ್ಯೇಕವಾಗಿ ಗುರುತಿಸಲು ಸಹಾಯಕವಾಗಿದೆ. ಹೆಚ್ಚು ಮಳೆಬೀಳುವ ಪಶ್ಚಿಮ ಘಟ್ಟದ ಕಾಡಿನ ಪ್ರಾದೇಸಿಕ ಹಕ್ಕಿ . ಭಾರತದ ಪೂರ್ವ ಘಟ್ಟಗಳ ಪ್ರದೇಶÀಗಳಲ್ಲೂ ಇದೆ. ಮಳೆಗಾಲದಲ್ಲಿ-್ಲ ಪಶ್ಚಿಮ ಘಟ್ಟದ ಭಾಗದಲ್ಲಿರುವುದು. ಇದು ಪ್ರಧಾನವಾಗಿ ಎರೆಳ ತಿನ್ನುವುದು. ಮಳೆಗಾಲ ಈ ಎರೆಹುಳುಗಳು ಪಶ್ಚಿಮ ಘಟ್ಟದ ಮಳೆಬೀಳುವ ಕಾಡಿನಲ್ಲಿ ಅಧಿಕವಾಗಿರುವುದು. ಹಾಗಾಗಿ -ಈ ಆಹಾರದ ವಿಫುಲತೆಯನ್ನು ಆಧರಿಸಿ-ಅಕ್ಟೋಬರ್ ಸಪ್ಟಂಬರ್ ಅವಧಿಯನ್ನು ಇದು ಗೂಡು ಕಟ್ಟಿ ಮರಿಮಾಡಲು ಉಪಯೋಗಿಸಿ ಕೊಲ್ಳುವುದು. ನೀರಿನ ಹರಿವಿನ ಹತ್ತಿರದ ಕಾಡು ಮತ್ತು ಗಜನಿ ಪ್ರದೇಶದ ಜೌಗಿನ ಸಮೀಪದ ಕಾಡು, ಇದಕ್ಕೆ ಪ್ರಿಯ. ಮಲೆಯ ರಾತ್ರಿ ಗುಪ್ಪಿ ಮತ್ತು ಜಪಾನದ ರಾತ್ರಿ ಗುಪ್ಪಿಯಲ್ಲಿ ಅತ್ಯಂತ ಹೋಲಿಕೆ ಇದೆ. ಆದರೂ ಮಲೆಯನ್ ಗುಪ್ಪಿಯ ಸೂಕ್ಷ್ಮ ಲಕ್ಷಣ ತಿಳಿದು- ಇವೆರಡನ್ನೂ ಪ್ರತ್ಯೇಕವಾಗಿ ಗುರುತಿಸ ಬಹುದು. ಇದು ಮರಿಮಾಡದ ಸಮಯದಲ್ಲಿ -ಪಶ್ಚಿಮ ಭಾರತ, ತೈವಾನ್, ಲೂಯಿಸ್, ಕಾಂಬೋಡಿಯಾ, ವಿಯೆಟ್ನಾಮ್, ಜಾವಾ ,ಸುಮಾತ್ರಾ ಇಂಡೊನೇಷಿಯಾ ಭಾಗದಲ್ಲಿ ಕಾಣುವವು. ಮರಿಮಾಡುವ ಸಮಯದಲ್ಲಿ-ಭಾರತ-ಆಸಾಂ, ಮಣಿಪುರ, ಮಲೇಶಿಯಾ, ಪೆನ್ಸಿಲ್ವೇನಿಯಾ, ಪಶ್ಚಿಮ ಘಟ್ಟದ ಭಾಗಗಳಲಿ, -ಕೇರಳಾ, ಆಂದ್ರ, ಕರ್ನಾಟಕ ಪ್ರದೇಶದಲ್ಲಿ ಕಾಣುವವು. ಭಾರತದಲ್ಲಿ 800ಮೀ ನಿಂದ 1200 ಮೀ ಎತ್ತರದ ಪ್ರದೇಶದಲ್ಲಿ ಇರುವವು. ಮೇದಿಂದ ಅಗಸ್ಟ ಭಾರತದ ಪಶ್ಚಿಮ ಘಟ್ಟದ ಭಾಗದಲ್ಲಿ, ಮೇದಿಂದ ಜೂನ್ -ಆಸಾಂದಲ್ಲಿ, ಮಧ್ಯಮ ಎತ್ತರದ ದೊಡ್ಡ ಮರ ಹಾಗೂ ಬಿದಿರು ಮಳೆ ಇರುವ- ನೀರಿನ ಆಶ್ರಯ ಸ್ವಲ್ಪ ಸಮೀಪ ಇರುವ ಕಾಡನ್ನು- ಗೂಡು ಕಟ್ಟಲು ಆರಿಸಿ ಕೊಳ್ಳುವುದು. ಒಂದೇ ಮರದಲ್ಲಿ ಅನೇಕ ಗೂಡನ್ನು ನಿರ್ಮಿಸುವುದು . ಇದರ ಸ್ವಭಾವಾದರೂ ನನಗೆ ಸಿಕ್ಕ ಗೂಡು ಒಂದೇ ಇತ್ತು. ಇದು ವಿಶೇಷ -ಇದಕ್ಕೆ ಕಾರಣ ತಿಳಿದಿಲ್ಲ. ಮರದ ಟಿಸಿಲು ಇರುವ ಜಾಗ-ಕವರಿನಲ್ಲಿ ಭೂಮಿಗೆ ಸಮಾನಾಂರತವಾದ ಟೊಂಗೆಯಲ್ಲಿ-ಸುಮಾರು 5 ರಿಂದ 10 ಮೀ ಎತ್ತರದಲ್ಲಿ ಗೂಡು ಮಾಡುವುದು. ಜನ ನಡೆದಾಡುವ ದಾರಿಯ ಮೇಲ್ಬದಿಯಲ್ಲಿ ಇದು ಗೂಡು ಕಟ್ಟುವುದು. ಜನ ಸಂಚಾರ ಇರುವುದರಿಂದ ತನಗೆ ರಕ್ಷಣೆ ಸಿಗುವುದೆಂಬ ಭಾವನೆಯೋ? ಅದನ್ನು ಸಂಶೋಧನೆಯಿಂದ ತಿಳಿಯಬೇಕಿದೆ. ಒಂದೇ ಮರದಲ್ಲಿ 20 ಗೂಡು ಇರುವುದು ವರದಿಯಲ್ಲಿದೆ.  ಮರದ ಕೋಲು ಸೇರಿಸಿ ಹಚ್ಚಡ ನಿರ್ಮಿಸಿ ಮಧ್ಯ ತಗ್ಗನ್ನು  ಮಾಡಿ ಅಲ್ಲಿ ಮೆತ್ತನೆ ಹಾಸು -ಅಂದರೆ ಹುಲ್ಲು ,ಎಲೆ ಇಟ್ಟು ಅದರಮೇಲೆ ಬಿಳಿಬಣ್ಣದ 2ರಿಂದ 6 ಮೊಟ್ಟೆ ಇಟ್ಟ ದಾಖಲೆ ಇದೆ.  46-37 ಎಂ.ಎಂ ಮೊಟ್ಟೆ ಅಳತೆ ಇರುವುದು. ಸಾಮಾನ್ಯ ಕೋಳಿಮೊಟ್ಟೆಯಷ್ಟು ದೊಡ್ಡದು. ಗಂಡು -ಹೆಣ್ಣು ಸೇರಿ ಗೂಡು ಕಟ್ಟುವುದು. ಗೂಡು ಕಟ್ಟಿ ಮುಗಿಸಿದಾಗ ಮೊದಲ ಮೊಟ್ಟೆ ಇಡುವುದು ಸ್ವಲ್ಪ ಅಂತರದಲ್ಲಿ ಒಂದೊಂದೇ ಮೊಟ್ಟೆ ಇಡುವುದು. 43 ದಿನದಲ್ಲಿ ಮೊಟ್ಟೆ ಒಡೆದು ಮರಿಯಾಗುವುದು. ಒಂದು ತಿಂಗಳಲ್ಲಿ ಬಾಲ್ಯಸ್ಥೆ ತಲುಪುವುದು. ಅನಂತರ ತಂದೆ -ತಾಯಿ ಜೊತೆ ಎಷ್ಟು ಸಮಯ ಇರುವುದು. ಪೂರ್ಣ ಬಣ್ಣ ತಳೆದು ಪ್ರೌಢಾವಸ್ಥೆಗೆ ಬರಲು ಎಷ್ಟು ಸಮಯ ತಗಲುವುದು- ಈ ವಿಷಯ  ಅಧ್ಯಯನದಿಂದ ತಿಳಿಯಬೇಕಿದೆ. ಸಾಮಾನ್ಯವಾಗಿ ಪೂರ್ಣ ಪ್ರಮಾಣದ ಹಕ್ಕಿ ಬಣ್ಣ ತಯಲು- ಹಕ್ಕಿಯಾಗಲು 2 ವರ್ಷ ತಗಲುವುದು. 100-300ಎಂ. ಎಂ. ಎರೆಹುಳ ಸಹ ಹಡಿದು ತಿಂದಿರುವುದು ತಿಳಿದಿದೆ.ಇದನ್ನು ಕೆಲವು ಸಮಯದಲ್ಲೇ ಚೂರು,ಚೂರು ಮಾಡಿ ತಿಂದು ಮುಗಿಸುವುದು.  ಎರೆಹುಳು, ಕಪ್ಪೆ, ಜೇಡ, ನೆಲದ ಮಣ್ಣಿನಲ್ಲಿರುವ ಕ್ರಿಮಿ,ಸಹ ಹಿಡಿಯುವುದು. ತನ್ನ ಗಂಟಲನ್ನು ಚೀಲದಂತೆ ಗಾಳಿ ತುಂಬಿ ಬು-ಬು ಎಂದು , ಗೂಡುನ ಸಮೀಪ ಇರುವಾಗ ಹಸ್ ದನಿಯನ್ನು ಗಾಬರಿಯಾದಾಗ ಕ್ರೋ, ಕ್ರೋಕ್ ದಂದೂ ಹಾರುವುದು. ಕೆಲವೊಮ್ಮ ಅರ್ಹ, ಅರ್ಹ, ಅರ್ಹ ಎಂದು ಕ್ವಾಕ್, ಕ್ವಾಕ್ ಎಂದು ಮೆಲುದನಿಯಲ್ಲಿ ಕೂಗುವುದು. ಇದು ಸದಾ ಮೌನಿಯಾಗಿರುವ ಕೊಕ್ಕರೆ - ಗುಪ್ಪಿ. -ಜೇಡ, ಮದ್ವಂಗಿ, ಚಿಕ್ಕ ಹಾವು ಅಪರೂಪಕ್ಕೆ ಮೀನು ತಿಂದ ಉದಾಹರಣೆ ಸಿಗುವುದು. ಇದರ ಜೀವನ ಚಕ್ರದ ಅನೇಕ ಸಂಗತಿ ಗೌಪ್ಯವಾಗೆ ಇದೆ. ಅದನ್ನು ಅಧಯನ ಮಾಡಬೇಕಿದೆ. ಇದೊಂದು ಸುಂದರ ಮೌನಿ ಕೊಕ್ಕರೆ, ಗುಪ್ಪಿ ಎಂದರೆ ಒಪ್ಪುವುದು ಇದನ್ನು- ಇದರ ಇರುನೆಲೆ ಉಳಿಸೋಣ. ಕಾಡು ಪರಿಸರ- ನೀರಿನ ಆಶ್ರಯ ಮಲಿನವಾಗಿಸದೇ ಇದ್ದರೆ ಮಾತ್ರ ಇಂತಹ ಸುಂದರ ಗುಪ್ಪಿ ಇರಲು ಸಾಧ್ಯ. 
Bird Artical



Thursday, September 3, 2015

Yellow Browed Bul-Bul- Ioleindica R- Myna +

Yellow Browed Bul-Bul- Ioleindica R- Myna +




ಹಳದಿ ಹುಬ್ಬಿನ ಪಿಕಳಾರ- ಭಾರತದಲ್ಲಿ ಸುಮಾರು ೨೦ ಪ್ರಕಾರದ ಪಿಕಳಾರ ಹಕ್ಕಿಗಳಿವೆ. ಇದರಲ್ಲಿ ಕನಾಟಕದಲ್ಲಿ ೬ಕ್ಕಿಂತ ಹೆಚ್ಚು ಪ್ರಬೇಧಗಳಿವೆ. ಪಿಕಳಾರವು ತುಂಬಾ ಸಂಕೋಚ ಹಾಗೂ ಗಾಬರಿ ಅಳುಕು ಸ್ವಭಾಹ ಹೊಂದಿವೆ. ಕೇಸರಿ ಕುತ್ತಿಗೆ ಪಿಕಳಾರ, ಕೆಂಪು ಕೆನ್ನೆ ಪಿಕಳಾರ, ಕಪ್ಪು ತಲೆ ಪಿಕಳಾರ, ಬಿಳಿಹುಬ್ಬಿನ ಪಿಕಳಾರ, ಕೆಂಪು ಕುಂಡೆ ಪಿಕಳಾರ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ನನಗೆ ಸಿಕ್ಕಿವೆ. ಅಣಸಿ ಪಕ್ಷಿಧಾಮ, ಶಿರಸಿ, ಬಡಾಳ, ಯಲ್ಲಾಪುರದ ಪ್ರದೇಶದಲ್ಲಿವೆ. ಚಿಕ್ಕ ಗುಂಪಿನಲ್ಲಿ, ಕೆಲವೊಮ್ಮೆ ೭-೮ರ ಸಮೂಹದಲ್ಲೂ ಸಿಗುತ್ತವೆ. ಪಿಕಳಾರ ಗುಂಪಿನ ೬ ವಿಧಹಕ್ಕಿಗಳು ಒಂದೇ ಕಡೆ ಸಿಕ್ಕ ಉದಾಹರಣೆಯೂ ಇದೆ. ಕೆಲವೊಮ್ಮೆ ಎರಡು ಮೂರು ಪ್ರಬೇಧಗಳು, ಬಿಳಿ ಕಣ್ಣಿನ ಚಿಟಗುಬ್ಬಿ, ಕಪ್ಪು ತಲೆ ಮುನಿಯಾ, ಕಾನು ಗುಬ್ಬಿ, ಬಿಳಿ ರೆಂಪ್ಡ ಮುನಿಯಾ, ಎಷಿಯನ್ ಫೇರಿ ಬರ್ಡ, ಟಿಕಲ್ಸ ಪ್ಲೆöÊಕ್ಯಾಚರ್, ಪೆರಡೈಸ್ ಪ್ಲೆöÊ ಕ್ಯಾಚರ್, ಬ್ಲೂ ನೇಪ್ಡ ಫ್ಲೆöÊಕ್ಯಾಚರ್ ಸಂಗಡ ಸಹ ಕಂಡಿದೆ. ಹಂಪಿ ಪ್ರದೇಶದ ಕುರುಚಲು ಕಾಡಿನಲ್ಲೂ ಕಂಡ ಉದಾಹರಣೆ ಇವೆ. ಕುರುಚಲು ಗಿಡಗಳ ಸಂದಿಯಲ್ಲಿ ಅಡಗಿ ಕುಳಿತ ಇವುಗಳನ್ನು ವಿಶಿಷ್ಟವಾಗಿ ಹೊರಡಿಸುವ ಗಿಲಕಿ ಗೆಜ್ಜೆ ಸಪ್ಪಳದಂತಹ ಕೂಗಿನಿಂದ ಗುರುತಿಸಬಹುದು. ಸ್ಥಳಿಯವಾಗಿ ವಲೆಸೆ ಹೋಗುತ್ತವೆ. ಮನೆಯ ಹತ್ತಿರ, ತೋಟ ಪಟ್ಟಿ , ಕೆಸರು ಗದ್ದೆಯ ಪಕ್ಕದ ಚಿಕ್ಕ ಕೈದೋಟಗಳ ಹತ್ತಿರ ಕಾಣುವವು. ಮನೆಯ ಸಮೀಪವೇ ೪-೫ ಪೂಟು ಎತ್ತರದ ಕುರುಚಲು ಗಿಡಗಳ ಸಂದಿಯಲ್ಲಿ ಬಟ್ಟಲಾಕಾರದ ಗೂಡು ಕಟ್ಟುವವು. ಕೆಂಪು ಕುತ್ತಿಗೆ ಪಿಕಳಾರ ,ಬಿಳಿ ಕಣ್ಣಿನ ಚಿಟಗುಬ್ಬಿ, ಕೇಸರಿ ಕುತ್ತಿಗೆ ಪಿಕಳಾರ ಇವುಗಳ ಗುಂಪಿನಲ್ಲಿ ಹರಿವ ನೀರಿನಲ್ಲಿ ಸ್ಣಾನ ಮಾಡುವವು.

       ಇದರ ಮೈ ಹಳದಿ ಮಿಶ್ರಿತ ತಿಳಿಹಸಿರು ಬಣ್ಣ ಇದೆ. ಸುಮಾರು ಕೆಂಪು ಕುತ್ತಿಗೆ ಪಿಕಳಾರದಷ್ಟು ದೊಡ್ಡದು. ಇದು ನಮ್ಮ ಪ್ರದೇಶದ ಹಕ್ಕಿ ೨೦ ಸೆಂ.ಮೀ ಚಿಕ್ಕದು. ತಲೆಯಲ್ಲಿ ಕಪ್ಪು ಪುಕ್ಕದ ಚೊಟ್ಟೆಯಂತೆ ಬ್ರಮೆ ಹುಟ್ಟಿಸುವ ಕೂದಲುಗಳಿವೆ. ಸ್ನಾನ ಮಾಡಿ ತನ್ನ ಪುಕ್ಕಗಳನ್ನು ಕೆದರಿ ಒಣಗಿಸದುತ್ತಿರುವಾಗ ಇದು ಕಾಣುವುದು. ಇದು ಸಾಮಾನ್ಯವಾಗಿ ಮೌನಿ. ಆದರೂ ಗುಂಪಿನಲ್ಲಿರುವಾಗ, ಸ್ನಾನ ಮಾಡುವಾಗ ನಿರಂತರವಾಗಿ ಸಂಭಾಶಿಸುವುದು, ಇದರ ದನಿಯ ಕುರಿತು ಹೆಚ್ಚಿನ ಅಧ್ಯಯನ ಅವಶ್ಯ. ಆದರೂ ಕಷ್ಟ ಸಾಧ್ಯ. ಹೊಟ್ಟೆ ಎದೆ ತಿಳಿ ಹಳದಿ ತಲೆ ತಿಳಿ ಪಾಚಿ ಹಸಿರು. ಹಳದಿ ಕಣ್ಣು ಹುಬ್ಬು ಸ್ಪಷ್ಟವಾಗಿ ಕಾಣುವುದು. ಅದಕ್ಕಾಗಿಯೇ ಇದನ್ನು ಹಳದಿ ಹುಬ್ಬಿನ ಪಿಕಳಾರ ಎಂದು ಹೆಸರಿಸಲಾಗಿದೆ. ಇತರ ಪಿಕಳಾರಗಳಂತೆ ಇದು ಗಲಾಟೆ ಮಾಡುವುದಿಲ್ಲ. ಟೂಟೀ, ಟೂಟೀ ಎಂದು ಸಿಳ್ಳಿನಂತೆ ಕೂಗುವುದು. ಬೆಳಿಗ್ಗೆ, ಮಧ್ಯಾಹ್ನ ಕೆಲವೊಮ್ಮೆ ೪ ಗಂಟೆಯ ನಂತರ, ಅಪರೂಪವಾಗಿ ೭ ಗಂಟೆ ಸಮಯದಲ್ಲೂ ಎತ್ತರದ ಚಿಕ್ಕ ಕಟೆಯ ಮೇಲಿಂದ ಹರಿವ ನೀರಿಗೆ ದುಮುಕಿ, ಅಲ್ಲಿ ಕುಳಿತುಕೊಂಡು ರೆಕ್ಕೆ ಬಡಿದು ನೀರು ಚಿಮ್ಮಿಸುತ್ತಾ ಸ್ನಾನ ಮಾಡುವವು. ಹೀಗೆ ನಾಲ್ಕಾರರ ಗುಂಪಿನಲ್ಲಿ ಇವುಗಳ ಸ್ನಾನ ವೈಖರಿ ತುಂಬಾ ಸುಂದರ,ೆ ಕೆಲವು ವೀಡಿಯೋಗಳನ್ನು ದಾಖಲಿಸಿದ್ದೇನೆ. ಹೆಚ್ಚಿನ ಅಧ್ಯಯನ ನಡೆಸುತ್ತಿದ್ದೇನೆ. ಹಣ್ಣು, ಕೀಟ ಹೂವಿನ ಮಕರಂದ ಇದಕ್ಕೆ ಪ್ರಿಯ. ಹಾಗಾಗಿ ಹೂವಿನ ಪರಾಗಸ್ಪರ್ಶ ಹಾಗೂ ಕೀಟ ನಿಯಂತ್ರಣದಲ್ಲಿ ಇದರ ಪಾತ್ರ ಹಿರಿದು.ಮುಂಬೈ, ಪಳಿನಿ, ನೀಲಗಿರಿ, ಕೇರಳ ಪ್ರದೇಶದಲ್ಲೂ ಇವೆ. ಇತರ ಪಿಕಳಾರಗಳ ಗೂಡಿನಂತೆ ಇದರ ಗೂಡಿಲ್ಲ. ಸುಮಾರು ೨ ರಿಂದ ೩ ಮೀ. ಎತ್ರರದಲ್ಲಿ ಮರದ ಕವರುಗಳಲ್ಲಿ ನೆಯದು ಗೂಡು ತೂಗಿ ಬಿಡುವುದು, ಇದರ ಗೂಡು ನೀಲಿ ತಲೆ ಅಯೋರಾ ಅಥವಾ ಕಪ್ಪು ತಲೆ ಅರಿಸಿನ ಬುರುಡೆ ಎಂದು ಕರೆಯುವ ಹಕ್ಕಿ ಗೂಡನ್ನು ಹೋಲುತ್ತದೆ. ಟೊಂಗೆಳಿಗೆ ಪಟ್ಟಿಯಂತೆ ಬಿಗಿದು ಬಟ್ಟಲಿನಾಕಾರದ ಗೂಡನ್ನು ತೂಗಿ ಬಿಡುತ್ತದೆ. ಅದರಲ್ಲಿ ಮೆತ್ತನೆ ಹಾಸನ್ನು ಮಾಡಿ ಮೊಟ್ಟೆ ಇಡುವುದು. ಪರಿಸರಕ್ಕೆ ಹೊಂದುವAತೆ ಬಿಂಜಲು ಅಥವಾ ಜೇಡದ ಬಲೆಯನ್ನು ಹಚ್ಚುವುದು. ಗಂಡು, ಹೆಣ್ಣು ಒಂದೇರೀತಿ ಇರುವುದು. ಫೆಬ್ರವರಿಯಿಂದ ಮೇ ಮರಿಮಾಡುವ ಸಮಯ. ೨-೩ ತಿಳಿ ಕ್ರೀಮಿ ಪಿಂಕ್ ಅಂದರೆ ತಿಳಿ ಗುಲಾಬಿ ಮಿಶ್ರಿತ ಹಳದಿ ಬಣ್ಣದ ಮೊಟ್ಟೆ ಇಡುವುದು. ಗಂಡು ಹೆಣ್ಣು ಎರಡೂ ಮರಿಗಳ ಆರೈಕೆ, ರಕ್ಷಣೆ ಗುಟುಕು ನೀಡುವುದು ಇತ್ಯದಿ ಕೆಲಸ ನಿರ್ವಹಿಸುವವು. ೧೦೦೦ ದಿಂದ ೧೫೦೦ ಮೀ ಎತ್ತರದ ಹಸಿರು ತುಂಬಿತ ಜೀವ ವೈವಿದ್ಯ ತಾಣಗಳು ಇವುಗಳ ವಾಸಸ್ಥಳ. ೫ರಿಂದ ೭ ಅಥವಾ ಕೆಲವೊಮ್ಮೆ ೫೦ ಹೆಚು ದೊಡ್ಡ ಗುಂಪಿನಲ್ಲೂ ಕಂಡ ಉದಾಹರಣೆ ಇದೆ. ಇದು ಪಶ್ಚಿಮ ಘಟ್ಟದ ಅಪರೂಪದ ಸುಂದರ ಹಕ್ಕಿ .ಇದರ ಕುರಿತು ಇದರ ಕೂಗಿನ ಕುರಿತು, ಇವು ಮರಿಗಳಿಗೆ ಶೈಶವಾವಸ್ಥೆಯಲ್ಲಿ ಯಾವ ವಿಭಿನ್ನ ಆಹಾರ ನೀಡುತ್ತವೆ. ಇವು ಕಳಿತ ಹಣ್ಣು, ಮೃದ್ವಂಗಿ, ಪರಾಗ, ಕ್ರಿಮಿ ಹೀಗೆ ಮಿಶ್ರಾಹಾರಿ ಹಕ್ಕಿ ಹಾಗಾಗಿ ಇತರ ಜೀವಜಂತುಗಳ ಕುರಿತು ಇವುಗಳಿಗಿರುವ ಪ್ರತಿರೋಧ ಶಕ್ತಿ. ಈಕುರಿತು ಅಧ್ಯಯನ ಮಾಡುವುದು ಅವಶ್ಯ.