Little Cormorant-Phalacrocorax niger - ಚಿಕ್ಕ ನೀರುಕಾಗೆ ೬೧ ಸೆಂಮೀ . ದೊಡ್ಡದು. ಹಾವಿನಂತೆ ಬಳುಕುವ ಕುತ್ತಿಗೆ. ಕಪ್ಪು ಹೊಳೆಯುವ ಮೈಬಣ್ಣ .ಕುತ್ತಿಗೆಯಲ್ಲಿ ಬಿಳಿ ಮಚ್ಚೆ ಇದೆ. ತುದಿಯಲ್ಲಿ ಹುಕ್ಕಿನ್ಂತೆ ಬಾಗಿರುವ ಮೇಲ್ಚುಂಚು ಇದೆ. ನೀರಿನಲ್ಲಿ ಜಿಗಿದು ಮುಳುಗಿ ಮೀನು ಜಲಚರಗಳನ್ನು ಬೇಟೆಯಾಡುವುದರಲ್ಲಿ ತುಂಬಾ ಚುರುಕು. ಏಕಾಂಗಿಯಾಗಿ ಅಥವಾ ಗುಂಪಾಗಿಯೂ ಬೇಟೆಯಾಡುವುದು. ಬಾತುಗಳ್ಂತೆ ಜಾಲಪಾದ ಇದೆ. ಇದು ನೀರಿನ ಹಕ್ಕಿ.ಆದರೂ ಇದರ ಕೆಕ್ಕೆಗಳಿಗೆ ಜಲ ನಿರೋಧಕ ಶಕ್ತಿ ಇಲ್ಲ. ಬಂಡೆಗಳ ಮೇಲೆ ಕಾಡ್ಳಾ ಗಿಡಗಳು , ನೀರಿನಲ್ಲಿ ನೆಟ್ಟ ಕಂಬಗಳ ಮೇಲೆ ಕುಳಿತು ತನ್ನ ರೆಕ್ಕೆ ಬಿಸಿಲಿನಲ್ಲಿ ಒಣಗಿಸಿಕೊಳ್ಳುವುದು. ಉದ್ದವಾದ ಬಾಲ ಇದೆ. ಗಂಡು ಹೆಣ್ಣು ಒಂದೇರೀತಿ ಇದೆ. ಕೊಳ, ಗಜನಿ ಪ್ರದೇಶ , ನದಿ ಮುಖಜ ಹಿನ್ನೀರು , ಹಳ್ಳಗಳಲ್ಲಿ , ನೀರಿನ ಹೊಂಡಗಳು. ಇದರ ಇರುವಿನ ಜಾಗ. ಭಾರತದ ತುಂಬೆಲ್ಲ ಇದೆ. ಮೈನಾವರ , ಬಾಂಗ್ಲದೇಶ ,ಪಾಕಿಸ್ತಾನ , ಶ್ರೀಲಂಕ ದಲ್ಲೂ ಹರಡಿದೆ. ದಕ್ಷಿಣಭಾರತದಲ್ಲಿ ನವೆಂಬರ್ ದಿಂದ ಫೆಬ್ರವರಿ ಸಮಯದಲ್ಲಿ ಮೊಟ್ಟೆ ಇಡುವುದು. ಕಡಿದಾದ ಬ್ಂಡ್ಡೆ
ಅಥವಾ ಮರಗಳ ಮೇಲೆ ಕೊಕ್ಕರೆಗಳ ಜೊತೆ ಕಡ್ಡಿ ಎಲೆಗಳಿಂದ ಗೂಡು ಕಟ್ಟುವುದು. ಇದು ಸಾಮಾನ್ಯವಾಗಿ ಕಾಗೆ ಗೂಡಿನಂತೆ ಕಾಣುವುದು. ೪-೫ ನೀಲಿಛಾಯೆಯ ತಿಳಿಹಸಿರಿನ ಮೊಟ್ಟೆ ಇಡುವುದು.
ಅಥವಾ ಮರಗಳ ಮೇಲೆ ಕೊಕ್ಕರೆಗಳ ಜೊತೆ ಕಡ್ಡಿ ಎಲೆಗಳಿಂದ ಗೂಡು ಕಟ್ಟುವುದು. ಇದು ಸಾಮಾನ್ಯವಾಗಿ ಕಾಗೆ ಗೂಡಿನಂತೆ ಕಾಣುವುದು. ೪-೫ ನೀಲಿಛಾಯೆಯ ತಿಳಿಹಸಿರಿನ ಮೊಟ್ಟೆ ಇಡುವುದು.